Saturday, August 23, 2025
Google search engine
HomeUncategorizedಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಕಾಗಿಲ್ಲ : ಆರಗ ಜ್ಞಾನೇಂದ್ರ

ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಕಾಗಿಲ್ಲ : ಆರಗ ಜ್ಞಾನೇಂದ್ರ

ಬೆಂಗಳೂರು : ಪೊಲೀಸರೂ ಅಸಮರ್ಥರಲ್ಲ, ಗೃಹ ಸಚಿವರು ಅಸಮರ್ಥರಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಸಿಎಂ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿ ಅಮಾನುಷವಾಗಿ ಚಂದ್ರು ಕೊಲೆ‌ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಹಾಗೂ ಅಧಿಕಾರಿಗಳಿಗೆ ಎಲ್ಲ  ಆಯಾಮಗಳಲ್ಲಿ ತನಿಖೆ ಮಾಡಲು ಸೂಚನೆ ನೀಡಲಾಗಿದೆ.

ಇನ್ನು ನಮ್ಮ ಪೊಲೀಸ್ ವಿಭಾಗದ ಮೇಲೆ ನಂಬಿಕೆ ಅಪನಂಬಿಕೆ ವಿಚಾರ ಇಲ್ಲಿ ಬರಲ್ಲ. ಸಿಐಡಿಯೂ ನಮ್ಮದೇ ಪೊಲೀಸರ ಇನ್ನೊಂದು ವಿಭಾಗವಾಗಿದೆ. ಕೊಲೆ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಲಿದೆ. ಗೊಂದಲ ಆಯ್ತು ಅನ್ನೋ ಕಾರಣಕ್ಕೆ ಸಿಐಡಿಗೆ ಇಷ್ಟು ದಿನ ಕೊಟ್ಟಿರಲಿಲ್ಲ ಎಂದರು.

ಅದುವಲ್ಲದೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗೃಹ ಸಚಿವ ಅಸಮರ್ಥ ಎಂಬ  ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಪೊಲೀಸರೂ ಅಸಮರ್ಥರಲ್ಲ, ಗೃಹ ಸಚಿವರೂ ಅಸಮರ್ಥರಲ್ಲ. ಅವರ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ. ಅವರ ಕಾಲದಲ್ಲಿ ಎಷ್ಟು ಹಿಂದೂ ಕಾರ್ಯಕರ್ತರ ಮರ್ಡರ್​​​ಗಳು ಆಗಿವೆ ಎಂಬುದು ಗೊತ್ತಿದೆ. ಅವರ ಅಧಿಕಾರದ ಅವಧಿಯಲ್ಲಿ ಏನೇನು ಆಗಿದೆ ಎಂಬುದನ್ನು ವಿಧಾನಸಭೆಯಲ್ಲೇ ಅವರ ಮುಖದ ಮುಂದೆ ಹೇಳಿದ್ದೇನೆ. ಇಷ್ಟಾದರೂ ಸಣ್ಣ ಘಟನೆ ಆದರೂ, ನನ್ನ ಅಸಮರ್ಥ ಅಂತಾ ಹೇಳೋದು ಸರಿಯಲ್ಲ. ಗೃಹ ಸಚಿವನಾಗಿ ನಾನು ಸಮರ್ಥವಾಗಿ ಇಲಾಖೆ ನಿಭಾಯಿಸ್ತಿದ್ದೇನೆ. ರಾಜ್ಯದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಸಿದ್ದರಾಮಯ್ಯನವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

ಆದರೆ ನಮಗೆ ಸಾಮರ್ಥ್ಯ ಇದೆ, ಸೂಕ್ತ ತನಿಖೆ ನಡೆಸ್ತೇವೆ.  ಗೊಂದಲವನ್ನು ನಾನು ಇನ್ನಷ್ಟು ವಿವಾದ ಮಾಡಲ್ಲ. ಭಾಷೆ ವಿಚಾರದ ಬಗ್ಗೆ ನಾನು ಮಾತಾಡಲ್ಲ. ತನಿಖೆ ನಡೀತಿದೆ, ಈ ಹಂತದಲ್ಲಿ ನಾನು ಹೆಚ್ಚು ಮಾತಾಡಲ್ಲ ಎಂದು ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments