Saturday, August 23, 2025
Google search engine
HomeUncategorizedವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುರಿತು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ಸಿದ್ದರಾಮಯ್ಯ ಮಾತಿಗೆ ಆಕ್ಷೇಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ‘ನಿಮ್ಮ ಕಾಲದಲ್ಲಿ ಎನಾಗಿತ್ತು’ ಎಂದು ಪ್ರಶ್ನಿಸಿದರು. ‘ನಮ್ಮ ಕಾಲದಲ್ಲಿ ತಪ್ಪು ಆಗಿದ್ದರೆ ಅದನ್ನು ನಮ್ಮ ವೈಫಲ್ಯ ಎಂದು ಒಪ್ಪಿಕೊಳ್ತೀವಿ. ನಿಮ್ಮದನ್ನು ನೀವು ಒಪ್ಪಿಕೊಳ್ತೀರಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಎಲ್ಲದಕ್ಕೂ ನಿಮ್ಮ ಕಾಲದಲ್ಲಿ ಹೀಗಾಗಿತ್ತು ಎನ್ನುವುದೇ ನಿಮ್ಮ ಉತ್ತರವಾಗಿದ್ದರೆ, ನೀವು ಅಲ್ಲಿರುವುದೇಕೆ? ನಾವು ಇಲ್ಲಿರುವುದೇಕೆ’ ಎಂದು ಎದಿರೇಟು ನೀಡಿದರು. ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಸ್ತಾಪಿಸಿದ ಅವರು, ‘ಕಾಸು ಕೊಟ್ಟರೆ ಅಷ್ಟೇ ಪೊಲೀಸ್ ಬಾಸು’ ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಪ್ರಕಟಿಸಿದೆ. ಇಲ್ಲಿಯವರೆಗೆ ಇದನ್ನ ನೀವಾಗಲಿ, ಸಿಎಂ ಆಗಲಿ ಅದನ್ನು ತಳ್ಳಿ ಹಾಕಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ನಾನು ವರದಿಯನ್ನ ಅಲ್ಲಗಳೆಯಲ್ಲ. ಆದರೆ ಏಜೆಂಟರನ್ನು ದೂರ ಇಟ್ಟಿದ್ದೇವೆ ಎಂದರು.

RELATED ARTICLES
- Advertisment -
Google search engine

Most Popular

Recent Comments