Saturday, August 23, 2025
Google search engine
HomeUncategorized'ಬಿಜೆಪಿ ಅಜೆಂಡಾ ಈ ದೇಶದ ತತ್ವ ಸಿದ್ದಾಂತವನ್ನ ಬದಲಾವಣೆ ಮಾಡೋದು'

‘ಬಿಜೆಪಿ ಅಜೆಂಡಾ ಈ ದೇಶದ ತತ್ವ ಸಿದ್ದಾಂತವನ್ನ ಬದಲಾವಣೆ ಮಾಡೋದು’

ಬೆಂಗಳೂರು : ಅಹೋರಾತ್ರಿ ಧರಣಿ ಮಾಡುವುದರ ಮೂಲಕ ಬಿಜೆಪಿಗೆ ಕೈ ನಾಯಕರು ಬಿಸಿ ಮುಟ್ಟಿಸಿದ್ದಾರೆ. ಸದನದಲ್ಲಿ‌ ಮಲಗಿ ವಿಧಾನಸೌಧದ ಹೊರಭಾಗದಲ್ಲಿ ವಾಕಿಂಗ್ ಮಾಡುವುದರ ಮೂಲಕ ಕೈ‌ನಾಯಕರು ಬಿಜೆಪಿ ‌ನಿದ್ದೆಕೆಡಿಸಿದ್ದಾರೆ. ನಾವು ಸದನ ಮುಗಿಯುವವರೆಗೂ ಈಶ್ವರಪ್ಪ ರಾಜೀನಾಮೆ ‌ಕೊಡೋವರೆಗೂ ಅಹೋರಾತ್ರಿ ಧರಣಿ‌ ಮುಂದುವರಿಸೋದಾಗಿ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಹಾಗೇ ಸದನ ಮುಂದೂಡಿದ್ರೆ ಪ್ರತಿ ತಾಲೂಕಿನಲ್ಲೂ ಹೋರಾಟ ಮುಂದುವರಿಸೋದಾಗಿ ಎಚ್ಚರಿಸಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಯು ಟಿ ಖಾದರ್ ಇವತ್ತು ಕೂಡಾ ಅಹೋ ರಾತ್ರಿ ಧರಣಿ ನಡೆಸಲು ಸಿಎಲ್ ಪಿ ಅಧ್ಯಕ್ಷರು ನಿರ್ಧಾರ ಮಾಡಿದ್ದಾರೆ. ಎರಡು ದಿವಸಗಳ ಕಾಲ ಅವಕಾಶ ಕೊಟ್ಟಿದ್ದೆವು. ಈ ಸರ್ಕಾರ ಭಾರತ ಧ್ವಜಕ್ಕೆ ಮಾಡಿರುವ ಅವನಮಾನ ಇದು ಈ ರೀತಿ ಮಾಡಿದ್ರೂ ಸರ್ಕಾರ ಭಾರತ ಜನಕ್ಕೆ ಕ್ಷಮೆ ಕೂಡ ಕೇಳಲಿಲ್ಲ ಅಲ್ಲದೇ  ಎರಡು ದಿನಗಳ ಕಾಲ ಅವಕಾಶ ಕೂಡ ಕೊಡಲಾಗಿತ್ತು.

ಈಶ್ವರಪ್ಪ ರಾಜಿನಾಮೆ ವಿಚಾರವಾಗಿ ಮಾತನಾಡಿ ಬಿಜಿಪಿ ಪಕ್ಷ ಅವರ ಅಜೆಂಡಾ ಹೇಳಿದ್ದಾರೆ. ಈಶ್ವರಪ್ಪರನ್ನ ಸಮರ್ಥನೆ ಮಾಡಿಕೊಳ್ಳಬೇಕಲ್ಲ ಅವರು ಬಿಜೆಪಿ ಅಜೆಂಡಾ ಈ ದೇಶದ ತತ್ವ ಸಿದ್ದಾಂತವನ್ನ ಬದಲಾವಣೆ ಮಾಡುವುದು. ಆದರೆ ಕಾಂಗ್ರೆಸ್ ಪಕ್ಷಕ್ಕೆ ವಂದೇ ಮಾತರಂ, ಸಂವಿಧಾನ ರಚನೆ, ಈ ದೇಶದ ಬಗ್ಗೆ ಬಹಳ ವಿಶೇಷವಾದ ಗೌರವವಿದೆ ಎಂದು ಯು ಟಿ ಖಾದರ್ ಹೇಳಿಕೆ ನೀಡಿದರು.

 

RELATED ARTICLES
- Advertisment -
Google search engine

Most Popular

Recent Comments