Wednesday, August 27, 2025
HomeUncategorizedಪರಮ ಶಿವ ಅರ್ಧ ನಾರೀಶ್ವರ ರೂಪ ತಾಳಿದ್ದು ಹೇಗೆ ?

ಪರಮ ಶಿವ ಅರ್ಧ ನಾರೀಶ್ವರ ರೂಪ ತಾಳಿದ್ದು ಹೇಗೆ ?

ಶಿವ ಜ್ಞಾನದ ಪ್ರತೀಕ ಓಂಕಾರ ಸ್ವರೂಪ ನಾದರೂಪಿ ಲಯಕಾರಕ .ಈತ ಗೌರಿಗೆ ಅರ್ಥ ದೇಹವನ್ನೇ ಕೊಟ್ಟ ಸಮನ್ವಯವಾದಿ ಅರ್ಧನಾರೀಶ್ವರ ಶಿವ ಶಿವ ಎಂದರೆ ಭಯವಿಲ್ಲ ಆದಿ ಅಂತ್ಯಕ್ಕೂ ಶಿವ ಹಿಂದೂ ಪುರಾಣದ ಪ್ರಕಾರ ಶಿವನು ಮೂರು ಶ್ರೇಷ್ಠ ಮೂರ್ತಿಗಳಲ್ಲಿ ಒಬ್ಬನು ಪ್ರಪಂಚದ ಲಯಕರ್ತ ಈತ ಶಾಂತ ರೌದ್ರಗಳ ದ್ವಿ ಸ್ವರೂಪಿ ತಮೋಗುಣದ ಪ್ರತೀಕ ಭಕ್ತರು ಕೇಳಿದ್ದನ್ನು ಕೊಡುವ ಭೋಲೆನಾಥ ಜಗತ್ತನ್ನು ರಕ್ಷಿಸಲು ವಿಷ ಕುಡಿದು ನೀಲಕಂಠನಾದ ಅಪ್ಟಕ್ಕೂ ಶಿವ ಅರ್ಧನಾರೀಶ್ವರ ರೂಪ ತಾಳಿದ್ದು ಯಾಕೆ ಎನ್ನುವ ಕಥೆ ಇಲ್ಲಿದೆ.
ಸೃಷ್ಟಿಯ ಪ್ರಾರಂಭದಲ್ಲಿ ಬ್ರಹ್ಮ ದೇವರು ಮಅಡಿದ ಮಾನಸಿಕ ಸೃಷ್ಟಿಯನ್ನು ವಿಸ್ತರಿಸಲು ಸಾಧ್ಯವಾಗಲಿಲ್ಲ ಇದರಿಂದ ತೀವ್ರ ನಿರಾಸೆಗೊಂಡರು.ಆಗ ಅಶರೀರವಾಣಿಯೊಂದು ಮೈಥುನೀ ಸೃಷ್ಟಿ ಮಾಡೆಂದು ಅರ್ಪಿಸಿತು.

ಬ್ರಹ್ಮ ಈ ಮಾತುಗಳನ್ನು ಅನುಸರಿಸಿ ಮೈಥುನಿ ಸೃಷ್ಟಿಯನ್ನು ಮಾಡಲು ಹೊರಟಾಗ ಸ್ತ್ರೀ ಜನೋತ್ಪತ್ತಿ ಆಗದೆ,ಮತ್ತೆ ವಿಫಲನಾದನು ಶಿವನ ಸಹಕಾರವಿಲ್ಲದೆ ಸ್ತ್ರೀ ಜನೋತ್ಪತ್ತಿ ಸಾಧ್ಯವಿಲ್ಲ ಆದ್ದರಿಂದ ಶಿವನನ್ನು ಪ್ರಸನ್ನಗೊಳಿಸಲು ಬ್ರಹ್ಮ ದೇವನು ಕಠೋರ ತಪಸ್ಸಿಗೆ ಮೆಚ್ಚಿಕೊಂಡಿದ್ದೇನೆ ಎಂದು ಹೇಳಿದ.ತನ್ನ ಶರೀರದಿಂದ ಉಮಾ ದೇವಿಯನ್ನು ಬೇರ್ಪಡಿಸಿದ.ಹೀಗೆ ಶಿವನ ದೇಹದಿಂದ ಅರ್ಧ ಭಾಗವಾದ ಪರಾಶಕ್ತಿ ಅಮ್ಮನವರಿಗೆ ಬ್ರಹ್ಮದೇವ ಸಾಷ್ಟಾಂಗ ನಮಸ್ಕಾರ ಮಾಡಿ ಹೀಗೆ ಹೇಳಿದನು.ಆಗ ಬ್ರಹ್ಮ ಸೃಷ್ಟಿಯ ಆರಂಭದಲ್ಲಿ ನಿನ್ನ ಪ್ರಾಣನಾಥನಾದ ಆದಿದೇವ ನನ್ನನ್ನು ಸೃಷ್ಟಿಸಿದ.ಆತನ ಆದೇಶದ ಅನುಸಾರವಾಗಿಯೇ ಸಮಸ್ತ ದೇವತೆಗಳನ್ನು ಮಾನಸಿಕವಾಗಿ ಸೃಷ್ಟಿಸಿದೆ.

ನಾರಿ ಕುಲವನ್ನು ಸೃಷ್ಟಿಸುವ ಶಕ್ತಿಯನ್ನು ನನಗೆ ಕರುಣಿಸು ಚರಾಚರ ಸೃಷ್ಟಿ ವೃದ್ಧಿಸಲು ನನ್ನ ಪುತ್ರನಾದ ದಕ್ಷನಿಗೆ ಮಗಳಾಗಿ ಅವತಾರವೆತ್ತಿ ನನನ್ನು ಕರುಣಿಸು ತಾಯಿ ಎಂದು ಬ್ರಹ್ಮದೇವನನ್ನು ಬೇಡಿಕೊಂಡನು.ಬ್ರಹ್ಮನ ಕೋರಿಕೆಯನ್ನು ಮನ್ನಿಸಿದ ಶಿವಾನಿ ತಥಾಸ್ತು ಎಂದು ಸ್ತ್ರೀಯನ್ನು ಸೃಷ್ಟಿಸುವ ವರವನ್ನು ಬ್ರಹ್ಮನಿಗೆ ಕರುಣಿಸಿದಳು.ಪರಮೇಶ್ವರನ ಆಜ್ಞೆಯನ್ನು ಶಿರಸಾ ಪಾಲಿಸಿದ ಜಗನ್ಮಾತೆ ಬ್ರಹ್ಮನ ಕೋರಿಕೆಯಂತೆ ದಕ್ಷನ ಮಗಳಾಗಿ ಜನಿಸಿ ಮತ್ತೆ ಪರಮಾತ್ಮನನ್ನು ಒಲಿಸಿಕೊಂಡು ಅರ್ಧನಾರಿಶ್ವರನಾಗುವಂತೆ ಮಾಡಿದರು.

 

RELATED ARTICLES
- Advertisment -
Google search engine

Most Popular

Recent Comments