Saturday, August 23, 2025
Google search engine
HomeUncategorizedನಾಡೋಜ ಕವಿ ಚನ್ನವೀರ ಕಣವಿಯವರ ಸ್ಥಿತಿ ಗಂಭೀರ

ನಾಡೋಜ ಕವಿ ಚನ್ನವೀರ ಕಣವಿಯವರ ಸ್ಥಿತಿ ಗಂಭೀರ

ಧಾರವಾಡ: ಕರ್ನಾಟಕದ ಪ್ರಖ್ಯಾತ ಕವಿ ಸಾಹಿತಿ ಚನ್ನವೀರ ಕಣವಿಯವರ ಸ್ಥಿತಿ ಗಂಭೀರವಾಗಿದೆ. ಕಣವಿಯವರು ಹಲವು ದಿನಗಳಿಂದ ಕೊರೋನ ಸಂಕ್ರಮಣದಿಂದ ಬಳಲುತ್ತಿದ್ದಾರೆ. ಚನ್ನವೀರ ಕಣವಿಯವರಿಗೆ ಧಾರವಾಡದ SDM ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಕೃತಕ ಆಮ್ಲಜನಕವನ್ನು ಅಳವಡಿಸಲಾಗಿದೆ.

ಚನ್ನವೀರ ಕಣವಿಯವರು ಕರುನಾಡಿನ ಬೌದ್ಧಿಕ ಆಸ್ತಿಯಾಗಿದ್ದು ಅವರು ಬೇಗ ಗುಣಮುಖರಾಗಿ ಬರಲಿ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ. 1928ರ ಜೂನ್ 28 ರಂದು ಗದಗ ಜಿಲ್ಲೆಯಲ್ಲಿ ಜನಿಸಿರುವ ಕಣವಿಯವರಿಗೀಗ 93 ವರ್ಷಗಳು. ಕಣವಿಯವರು 16 ಕವನಸಂಕಲನಗಳು, ಹಲವು ವಿಮರ್ಶಾ ಲೇಖನಗಳು, ಪ್ರಬಂಧ ಸಂಕಲನಗಳು ಮತ್ತು ಮಕ್ಕಳ ಕವಿತೆಗಳನ್ನು ರಚಿಸಿದ್ದಾರೆ.

 

RELATED ARTICLES
- Advertisment -
Google search engine

Most Popular

Recent Comments