Sunday, August 24, 2025
Google search engine
HomeUncategorizedಗೂಳಿ ಕಾಳಗದಿಂದ ರಣರಂಗವಾದ ರಸ್ತೆ

ಗೂಳಿ ಕಾಳಗದಿಂದ ರಣರಂಗವಾದ ರಸ್ತೆ

ವಿಜಯಪುರ: ಕಪ್ಪು-ಬಿಳುಪು ಬಣ್ಣಗಳುಳ್ಳ ಗೂಳಿಗಳ ಪರಸ್ಪರ ಗುದ್ದಾಟದ ದೃಶ್ಯವೊಂದು ವಿಜಯಪುರದಲ್ಲಿ ಜನರಿಗೆ ಸಖತ್ ಮನರಂಜನೆಯನ್ನು ನೀಡಿರುವ ಘಟನೆ ನಡೆದಿದೆ. ಗೂಳಿಗಳು ನಡು ರಸ್ತೆಯಲ್ಲೇ ಮದಗಜಗಳಂತೆ ಕಾದಾಡಿವೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಲ್​ನಲ್ಲಿ ಗೂಳಿಗಳು ಕಾದಾಟ ಮಾಡಿವೆ ಎನ್ನಲಾಗಿದೆ.
ಈ ಬ್ಯ್ಲಾಕ್ & ವೈಟ್ ಗೂಳಿಗಳ ಗುದ್ದಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ರಸ್ತೆಯ ಮದ್ಯದಲ್ಲೇ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಈ ಗೂಳಿಗಳು ಕಾದಾಟ ನಡೆಸಿವೆ. ನಿರಂತರ ವಾಹನ ಸಂಚಾರಗಳಿದ್ರೂ ಲೆಕ್ಕಿಸದೆ ಇವು ಪರಸ್ಪರ ಹೋರಾಟ ನಡೆಸಿವೆ. ವಾಹನ ಸವಾರರು ಹಾರ್ನ್ ಮಾಡಿದ್ರೂ, ಗೂಳಿಗಳು ರಸ್ತೆ ಮೇಲಿಂದ ಸರಿಯದೆ ಕಾದಾಡಿವೆ. ಗೂಳಿಗಳ ಕಾದಾಟ ಕಂಡು ಜನರೇ ರಸ್ತೆ ಬದಿಯಿಂದ ಸಂಚರಿಸುವಂತಾಗಿತ್ತು. ಮದವೇರಿದ ನ್ಯಾಚುರಲ್ ಗೂಳಿ ಕಾಳಗವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments