Sunday, August 24, 2025
Google search engine
HomeUncategorizedರೇಣುಕಾಚಾರ್ಯಗೆ ಆಶೀರ್ವಾದ ಮಾಡ್ತೀನಿ : ಯತ್ನಾಳ್‌

ರೇಣುಕಾಚಾರ್ಯಗೆ ಆಶೀರ್ವಾದ ಮಾಡ್ತೀನಿ : ಯತ್ನಾಳ್‌

ಬೆಂಗಳೂರು : ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಾನು ಅದರ ಬಗ್ಗೆ ಏನು ಹೇಳಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸಂಪುಟ ಪುನಾರಚನೆ ವಿಚಾರದಲ್ಲಿ ಬಿಜೆಪಿಯಲ್ಲಿ ಕಸರತ್ತು ನಡೆದಿದೆ. ಇತ್ತ, ಸಚಿವಾಕಾಂಕ್ಷಿಗಳು ತಮ್ಮದೇ ಲೆಕ್ಕಾಚಾರ ಮಾಡ್ಕೊಂಡಿದ್ದು, ಸ್ಥಾನ ಗಿಟ್ಟಿಸಿಕೊಳ್ಳೋಕೆ ಪ್ರಯತ್ನಿಸ್ತಿದ್ದಾರೆ. ಈ ಮಧ್ಯೆ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಭೇಟಿ ಮಾಡಿ ಪರಸ್ಪರ ಚರ್ಚಿಸಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಯತ್ನಾಳ್ ಅವರು, ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ವಿಚಾರವಾಗಿ ನಾನು ಏನು ಹೇಳಲು ಆಗಲ್ಲ ಎಂದಿದ್ದಾರೆ. ಪಂಚರಾಜ್ಯ ಚುನಾವಣೆ ಮುಗಿದ ಮೇಲೆ ಆಗುತ್ತೋ..? ಅಥವಾ ಅದಕ್ಕಿಂತ ಮೊದಲೇ ಸಂಪುಟ ಪುನಾರಚನೆ ಆಗುತ್ತೋ ನೋಡೋಣ. ಆದ್ರೆ, ಮಾತ್ರ ಒಳ್ಳೆಯ ಬೆಳವಣಿಗೆ ಆಗುತ್ತದೆ.

ರೇಣುಕಾಚಾರ್ಯ ಅವರು ಮಂತ್ರಿಯಾಗಲಿ ಅಂತ ಆಶೀರ್ವಾದ ಮಾಡುತ್ತೇನೆ,ರೇಣುಕಾಚಾರ್ಯ ಯಾರದರೂ ನಾಯಕತ್ವ ಒಪ್ಪಿಕೊಂಡ್ರೆ, ಅವರ ನಾಯಕತ್ವದಲ್ಲೇ ಇರ್ತಾರೆ ಎಂದು ಹೇಳಿದ್ರು. ಇನ್ನು, ಅಧಿಕಾರಕ್ಕೋಸ್ಕರ ಇದ್ದವರು, ಸ್ವಾರ್ಥಕ್ಕೋಸ್ಕರ ಇದ್ದವರನ್ನು ಕೈ ಬಿಡಬೇಕು. ನಾವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡ್ತೀವಿ ಅಂತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಪ್ರತಿಕ್ರಿಯಿಸಿದರು.

RELATED ARTICLES
- Advertisment -
Google search engine

Most Popular

Recent Comments