Thursday, August 28, 2025
HomeUncategorized‘ನಾನೊಬ್ಬ ಪಳಗಿದ ಹುಲಿ’ : ಎಂ.ಪಿ.ರೇಣುಕಾಚಾರ್ಯ

‘ನಾನೊಬ್ಬ ಪಳಗಿದ ಹುಲಿ’ : ಎಂ.ಪಿ.ರೇಣುಕಾಚಾರ್ಯ

ರಾಜ್ಯ : ಸಿಎಂ ಬಸವಾರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿಯಾಗಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆ ಕಿಡಿಕಾರಿದ್ದಾರೆ.

ತನಗೆ ಯಾವತ್ತೂ ಗಾಳಿಯಲ್ಲಿ ಮಾತಾಡಿ ಅಭ್ಯಾಸವಿಲ್ಲ, ಆಡಿದ ಮಾತಿಗೆ ಬದ್ಧನಾಗಿರುತ್ತೇನೆ.. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಮಾಡಿದ ಕಮೆಂಟ್​​​​ಗಳಿಗೆ ಮಾಧ್ಯಮಗಳ ಮೂಲಕ ಬೇಷರತ್ ಕ್ಷಮೆ ಕೇಳಿದರೂ ಕಾಂಗ್ರೆಸ್ ನಾಯಕರು ಕೇಸ್ ದಾಖಲಿಸುವ ಬಗ್ಗೆ ಮಾತಾಡಿ ದುರಹಂಕಾರ ಮೆರೆಯುತ್ತಿರೋದು ಅವರ ಭಂಡತನ. ನಾನು ಯಾವತ್ತೂ ಹುಲಿ, ಸಿಂಹ, ಕರಡಿ ಎಂದು ಹೇಳಿಕೊಂಡಿಲ್ಲ..ಹೊನ್ನಾಳಿ ಯುವಜನತೆ ಮತ್ತು ಬೆಂಬಲಿಗರು ನನ್ನನ್ನು ಹೊನ್ನಾಳಿ ಹುಲಿ, ಸಿಂಹ ಅಂತ ಕರೆಯುತ್ತಾರೆ. ಆದರೆ ತಾನೊಬ್ಬ ಸಾಮಾನ್ಯ ವ್ಯಕ್ತಿ ಅಂತ ಹೇಳಿದರು. ಹಾಗೆ ನೋಡಿದರೆ ಹುಲಿ, ಸಿಂಹ, ಆನೆ ಮೊದಲಾದವೆಲ್ಲ ಸೌಮ್ಯ ಸ್ವಭಾವದ ಪ್ರಾಣಿಗಳು. ಅವುಗಳನ್ನು ಪಳಗಿಸಿದರೆ ಸೌಮ್ಯ ಸ್ವಭಾವ ಧರಿಸಿಕೊಳ್ಳುತ್ತವೆ ಎಂದು ಹೇಳಿ ತಾನೊಬ್ಬ ಪಳಗಿದ ಹುಲಿ ಅಂತ ಎಂ.ಪಿ.ರೇಣುಕಾಚಾರ್ಯ ಹೇಳಿಕೊಂಡರು.

RELATED ARTICLES
- Advertisment -
Google search engine

Most Popular

Recent Comments