Saturday, August 23, 2025
Google search engine
HomeUncategorizedದೇಶದಲ್ಲಿ 6,401 ಒಮೈಕ್ರಾನ್ ಕೇಸ್​​

ದೇಶದಲ್ಲಿ 6,401 ಒಮೈಕ್ರಾನ್ ಕೇಸ್​​

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,68,833 ಪ್ರಕರಣಗಳು ವರದಿಯಾಗಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ.

ಶುಕ್ರವಾರಕ್ಕಿಂತ 4,631 ಹೆಚ್ಚು ಪ್ರಕರಣಗಳು ದೇಶದಲ್ಲಿ ಕಂಡುಬಂದಿವೆ. ಈ ಮೂಲಕ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 14,17,820ಕ್ಕೆ ಏರಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.16.66 ಇದೆ. ಕಳೆದ 24 ಗಂಟೆಗಳಲ್ಲಿ 402 ಕೊವಿಡ್ ಸೋಂಕಿತರು ಮರಣ ಹೊಂದಿದ್ದಾರೆ.

ಈ ಮೂಲಕ ದೇಶದಲ್ಲಿ ಕೊವಿಡ್​​ನಿಂದ ಮರಣ ಹೊಂದಿದವರ ಸಂಖ್ಯೆ 8,85,752ಕ್ಕೆ ತಲುಪಿದೆ. ಕಳೆದ ಒಂದು ದಿನದ ಅವಧಿಯಲ್ಲಿ 1,22,684 ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗೂ ಒಮೈಕ್ರಾನ್ ಪ್ರಕರಣಗಳಲ್ಲೂ ಏರಿಕೆಯಾಗಿದ್ದು, ದೇಶದಲ್ಲಿ ಇದುವರೆಗೆ ಒಟ್ಟು 6,401 ಪ್ರಕರಣಗಳು ದೃಢಪಟ್ಟಿವೆ.

ಅಲ್ಲದೇ ರಾಜ್ಯದಲ್ಲಿ ಕೊವಿಡ್ ಮೂರನೇ ಅಲೆ‌ ತೀವ್ರಗೊಂಡಿದೆ. ದಿನ ದಿನಕ್ಕೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ನಿನ್ನೆ ಕೊರೋನಾ ಸೋಂಕಿನ ಸುನಾಮಿ ಬೀಸಿದೆ. ಕರುನಾಡಿನಲ್ಲಿ ನಿನ್ನೆ ಒಂದೇ ದಿನ 30 ಸಾವಿರ ಸನಿಹಕ್ಕೆ ಬಂದಿದೆ.

ರಾಜ್ಯದಲ್ಲಿ ಸಾವಿನ ಸಂಖ್ಯೆ ಸಹ ನಿಧಾನವಾಗಿ ಏರಿಕೆ ಕಾಣುತ್ತಿದೆ. ನಿನ್ನೆ ರಾಜ್ಯದಲ್ಲಿ 14 ಮಂದಿಯನ್ನು ಕೊರೋನಾ ಬಲಿ ಪಡೆದುಕೊಂಡಿದೆ. ನಿಧಾನವಾಗಿ ಸಾವಿನತ್ತ ಮುಖ ಮಾಡಿರುವ ಕೊರೋನಾ ಮೂರನೇ ಅಲೆಯೂ ಕರುನಾಡಲ್ಲಿ ಮತ್ತಷ್ಟು ಭೀತಿ ಹೆಚ್ಚಿಸಿದೆ.

RELATED ARTICLES
- Advertisment -
Google search engine

Most Popular

Recent Comments