Thursday, August 28, 2025
HomeUncategorizedಸೈನಾ, ಸಿದ್ದಾರ್ಥ್​​ ಟ್ವೀಟ್​​ ವಾರ್​

ಸೈನಾ, ಸಿದ್ದಾರ್ಥ್​​ ಟ್ವೀಟ್​​ ವಾರ್​

ತಮಿಳು ನಟ ಸಿದ್ದಾರ್ಥ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ಲೈಂಗಿಕ ಅವಹೇಳನಕಾರಿ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಕುರಿತಂತೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಯಾವುದೇ ರಾಷ್ಟ್ರದಲ್ಲಿ ಪ್ರಧಾನಮಂತ್ರಿಗೆ ಭದ್ರತೆ ಸಿಗದೇ ಇದ್ದರೆ, ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜಾಗರೂಕತೆಯನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ಸೈನಾ ನೆಹ್ವಾಲ್ ಅವರ ಈ ಟ್ವೀಟ್‍ಗೆ ಕಾಲಿವುಡ್ ನಟ ಸಿದ್ದಾರ್ಥ್, ವಿಶ್ವದ ಶಟ್ಲ್​​​​ ಕಾಕ್ ಚಾಂಪಿಯನ್. ದೇವರಿಗೆ ಧನ್ಯವಾದಗಳು, ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ಸೈನಾ ನಿಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಅವರೆ ಬಳಸಿದ ಪದ ಹೇಳುವುದಾದರೆ Subtle cock champion of the world ಎಂದರೆ ಹಗುರವಾದ ಕಾಕ್ ಜಗತ್ತಿನ ಚಾಂಪಿಯನ್ ಎಂದರ್ಥ ಅಷ್ಟೆ. ಅದನ್ನೇ ಮಾಧ್ಯಮಗಳು ಡಬಲ್ ಮೀನಿಂಗ್ ಅರ್ಥದಲ್ಲಿ ತೆಗೆದುಕೊಂಡಿರುವುದನ್ನು ನೋಡಿದರೆ ಬಹುಶಃ ಭಾರತದಲ್ಲಿ ಯಾರಿಗೂ ಮಾಡಲು ಸರಿಯಾಗಿ ಕೆಲಸವಿಲ್ಲ ಎನಿಸುತ್ತದೆ!

RELATED ARTICLES
- Advertisment -
Google search engine

Most Popular

Recent Comments