Sunday, August 24, 2025
Google search engine
HomeUncategorizedಶಾಮಿನಿಸಂ ಪ್ರಭಾವದಿಂದ ಬೆಂಗಳೂರಿನ 17 ವರ್ಷದ ಬಾಲಕಿ ನಾಪತ್ತೆ

ಶಾಮಿನಿಸಂ ಪ್ರಭಾವದಿಂದ ಬೆಂಗಳೂರಿನ 17 ವರ್ಷದ ಬಾಲಕಿ ನಾಪತ್ತೆ

ಬೆಂಗಳೂರು : ಶಾಮಿನಿಸಂನೆಡೆ ಆಕರ್ಷಿತಳಾಗಿ ಆತ್ಮಗಳ ಜೊತೆ ಮಾತನಾಡುತ್ತೇನೆ ಎಂದು ವ್ಯಕ್ತಪಡಿಸಿದ ಬಾಲಕಿ ಏಕಾಏಕಿ ನಾಪತ್ತೆಯಾಗಿರುವ ಪ್ರಕರಣ ಸುಬ್ರಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಕಳೆದ ಎರಡು ತಿಂಗಳಿನಿಂದ ಕಣ್ಮರೆಯಾಗಿದ್ದು, ಈ ಪ್ರಕರಣವು ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ಅಕ್ಟೋಬರ್ 31 ರಂದು ಮನೆ ಬಿಟ್ಟು ಹೊರ ಹೋಗಿರುವ 17 ವರ್ಷದ ಯುವತಿ ಅನುಷ್ಕಾ ಎರಡು ತಿಂಗಳಾದರೂ ಮನೆಗೆ ಬಂದಿಲ್ಲ. ಮಾನಸಿಕವಾಗಿ ಕುಗ್ಗಿದ್ದ ಈಕೆ ಎರಡು ಜತೆ ಬಟ್ಟೆ ಹಾಗೂ 2500 ರೂಪಾಯಿ ತೆಗೆದುಕೊಂಡು ಮನೆ ಬಿಟ್ಟಿದ್ದಾಳೆ ಆದರೆ ಪೋಷಕರು ತಮ್ಮ ಮಗಳ ನಾಪತ್ತೆಯ ಹಿಂದೆ ಮಾಟ- ಮಂತ್ರದ ಕೈವಾಡವಿದೆ ಎಂದು ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ.

12ನೇ ತರಗತಿಯಲ್ಲಿ ತೇರ್ಗಡೆಯಾದ ಬಳಿಕ ಶಾಮಿನಿಸಂನತ್ತ ಆಕರ್ಷಿತಳಾಗಿದ್ದಾಳೆನ್ನಲಾಗಿದೆ. ಆಕೆಯ ಪೋಷಕರು ಆಧ್ಯಾತ್ಮಿಕ ಜೀವನ ತರಬೇತುದಾರರಾಗಿದ್ದು, ಸೈಕೆಡೆಲಿಕ್ ಶಿಕ್ಷಣ ತಜ್ಞರಿಂದ ಪ್ರಭಾವಿತಳಾಗಿ ಯುವತಿ ಶಾಮಿನಿಸಂ ಅಭ್ಯಾಸ ಮಾಡುವ ಬಯಕೆಯ ಬಗ್ಗೆ ತನ್ನ ತಂದೆ- ತಾಯಿಯ ಜೊತೆ ಮಾತನಾಡಿದ್ದಳು.
ಈ ಘಟನೆ ಸಂಬಂಧ ಪೊಲೀಸರು ಭಾರೀ ತಲೆಕೆಡಿಸಿಕೊಂಡಿದ್ದು, ಹಲವು ಸ್ಧಳಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆಯ ಚಲನಾವಲನಗಳನ್ನು ಸಿಸಿಟಿವಿ ಕ್ಯಾಮರಾದಲ್ಲಿ  ವಿಶ್ಲೇಷಿಸಿದ್ದೇವೆ ಎಂದು ಬೆಂಗಳೂರಿನ ಉಪ ಪೊಲೀಸ್ ಆಯುಕ್ತ ವಿನಾಯಕ ಪಾಟೀಲ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments