Thursday, August 28, 2025
HomeUncategorizedಕೊರೋನಾ 3ನೇ ಅಲೆ ಆರಂಭದಲ್ಲಿ ಕರುನಾಡು

ಕೊರೋನಾ 3ನೇ ಅಲೆ ಆರಂಭದಲ್ಲಿ ಕರುನಾಡು

ಬೆಂಗಳೂರು: ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ಅನ್ನೋ ಹಾಗೆ ಈ ಮಾಹಾಮಾರಿ ಕೊರೋನಾ ತೊಲಗೋ ಲಕ್ಷಣಾನೇ ಕಾಣಿಸ್ತಿಲ್ಲ. ಕಂಟ್ರೋಲ್ ಇಲ್ಲದೇ ಓಡಿ 2ನೇ ಅಲೆಯಲ್ಲಿ ಮರಣ ಮೃದಂಗ ಬಾರಿಸಿ ದಿಢೀರ್ ಅಂತ ತೆರೆಮರೆಗೆ ಸರಿದಿದ್ದ ವೈರಸ್ ಈಗ ಮತ್ತೆ ಜನರ ನಿದ್ದೆಗೆಡಿಸಿದೆ‌…ಕೊರೊನಾ ಏರಿಕೆಯಿಂದ ತಲೆಕೆಡಿಸಿಕೊಂಡಿರುವ ಬಿಬಿಎಂಪಿ ಮತ್ತೆ ಕೋವಿಡ್ ಸೆಂಟರ್ ರೀಓಪನ್ ಮಾಡುತ್ತಿದೆ..

ಕೊರೋನಾ ಏರಿಕೆಯಿಂದ ಬೆಚ್ಚಿಬಿದ್ದ ಬಿಬಿಎಂಪಿ; 3ನೇ ಅಲೆ ಆರಂಭದಲ್ಲಿ ಕರುನಾಡು; ಬೆಂಗಳೂರಿನಲ್ಲಿ ಕೊವಿಡ್ ಸೆಂಟರ್ ರೀ -ಓಪನ್

ರಾಜ್ಯದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವ ಕೊರೊನಾ ಪ್ರಕರಣಗಳು ಮತ್ತೆ ಜನರಲ್ಲಿ ಆತಂಕ ಹುಟ್ಟಿಸಿದೆ‌. ಕಳೆದ ಎಂಟು ತಿಂಗಳ ಬಳಿಕ ಸೋಂಕಿತರ ಸಂಖ್ಯೆ ರಾಜ್ಯ ರಾಜಧಾನಿಯಲ್ಲಿ ಹೆಚ್ಚಳವಾಗುತ್ತಿರೋದು ಬಿಬಿಎಂಪಿಗೆ ತಲೆನೋವು ತಂದಿದೆ. ಹೆಮ್ಮಾರಿ ಕೊರೋನಾ ಅಬ್ಬರ ಮತ್ತೆ ಹೆಚ್ಚಾಗುತ್ತದ್ದಂತೆ ಎಚ್ಚತ್ತ ಬಿಬಿಎಂಪಿ ನಗರದ ಹಲವು ಕಡೆಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಪುನಾರಂಭ ಮಾಡುತ್ತಿದೆ‌.

ಹೌದು ಈಗಾಗಲೇ ರಾಜ್ಯಕ್ಕೆ 3ನೇ ಅಲೆ ಎಂಟ್ರಿಯಾಗಿದೆ ಎಂದು ಸ್ವತಃ ಆರೋಗ್ಯ ಸಚಿವ ಡಾ. ಸುಧಾಕರ್​ ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಈಗಾಗಲೇ ರಾಜ್ಯದ ಜನತೆಯನ್ನ ಚಿಂತೆಗೀಡು ಮಾಡಿದೆ. ಇತ್ತ 3ನೇ ಅಲೆ ಎದುರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು ಕೊರೊನಾ ಸಹಾಯವಾಣಿ ಸಹ ಮತ್ತೆ ಆರಂಭವಾಗಿದೆ. ನಗರದ ಹಜ್ ಭವನ, ಹೆಚ್‌ಎಎಲ್, ಕೋರಮಂಗಲ,ಜ್ಞಾನ ಭಾರತಿ,ಜಿಕೆವಿಕೆ ಸೇರಿದಂತೆ ಇತರೆ ಕಡೆ ಕೋವಿಡ್ ಸೆಂಟರ್ ಗಳನ್ನ ರೀ ಓಪನ್​ ಮಾಡಲು ಸಿದ್ದತೆ ನಡೆಸಿದೆ. ಕೋರಮಂಗಲದ ಕೋವಿಡ್ ಕೇರ್ ಸೆಂಟರ್‌ 280 ಬೆಡ್‌ ಒಳಗೊಂಡಿದೆ. ಈ ಕೇಂದ್ರಗಳಿಗೆವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ನಿಯೋಜನೆ ಮಾಡಲಿದೆ.

ನಗರದಲ್ಲಿ ನಿತ್ಯ ಸೋಂಕಿತರ ಸಂಖ್ಯೆ 1000 ಗಡಿದಾಟಿ ಗಣನೀಯವಾಗಿ ಏರಿಕೆ ಆಗ್ತಿದೆ. ವಿದೇಶದಿಂದ ಬಂದವರು ಸಹ ರಾಜಧಾನಿಗೆ ಕಂಟಕವಾಗ್ತಿದಾರೆ. ಕಳೆದ ವರ್ಷ ನಗರದಲ್ಲಿ ಆರು ಕಡೆ ಬಹುದೊಡ್ಡ ಕೋವಿಡ್ ಕೇರ್ ಸೆಂಟರ್​ಗಳನ್ನು ಓಪನ್ ಮಾಡಿತ್ತು.‌ಯಾವಾಗ ಸೋಂಕಿತರ ಸಂಖ್ಯೆ ಕಡಿಮೆ ಆಯ್ತೋ ಆಗಲೇ ಕೋವಿಡ್ ಕೇರ್ ಸೆಂಟರ್ ಗಳನ್ನು ಮುಚ್ಚಲಾಗಿತ್ತು. ಆದ್ರೆ ಇದೀಗ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗ್ತಿರೋದ್ರಿಂದ ಮತ್ತೆ ರೀ ಓಪನ್ ಮಾಡಲು ಮಾಡಲಾಗುತ್ತಿದೆ.

ಒಟ್ಟಿನಲ್ಲಿ ನಗರದಲ್ಲಿ ಕೊರೋನಾ ಆಟ ಕಾಲ ಮುಗಿದೋಯ್ತು ಅನ್ನೋ ವೇಳೆಗೆ ಮತ್ತೆ ಮಾಹಾಮಾರಿಯ ಆತಂಕ ದಿನದಿನಕ್ಕೂ ಹೆಚ್ಚಾಗಲಾರಂಭಿಸಿದೆ. ಕೊರೊನಾ ಏರಿಕೆಯಿಂದ ತಲೆಕೆಡಿಸಿಕೊಂಡ ಪಾಲಿಕೆ ಕಳೆದ ವರ್ಷ ಆದ ಸಮಸ್ಯೆ ಆಗಬಾರದು, ಆ ದುಸ್ಥಿತಿ ರಾಜಕ್ಕೆ ಬರಬಾರದು ಅಂತ ಕೋವಿಡ್ ಸೆಂಟರ್ ಓಪನ್​ ಮಾಡುತ್ತಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments