Thursday, August 28, 2025
HomeUncategorizedಹಾಸಿಗೆಯಿಂದ ಎದ್ದ ತಕ್ಷಣ ಅಂಗೈ ನೋಡುವುದೇಕೆ

ಹಾಸಿಗೆಯಿಂದ ಎದ್ದ ತಕ್ಷಣ ಅಂಗೈ ನೋಡುವುದೇಕೆ

ನಮ್ಮ ಖುಷಿ ಮುನಿಗಳು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ಹಸ್ತದ ದರ್ಶನವನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಬೆಳಗ್ಗೆ ಎದ್ದಾಕ್ಷಣದ ಸಮಯ ಅತ್ಯಂತ ಅಮೂಲ್ಯ. ಇದು ಇಡೀ ದಿನದ ಭವಿಷ್ಯವನ್ನೇ ಹಿಡಿದಿಟ್ಟುಕೊಂಡಿರುತ್ತದೆ.

ಹಾಸಿಗೆಯಿಂದ ಎದ್ದ ತಕ್ಷಣ ನಮ್ಮ ಮನಸ್ಸು ಯಾವ ಸ್ಧಿತಿಯಲ್ಲಿರುತ್ತದೆಯೋ ಅದು ಇಡೀ ದಿನವನ್ನು ನಿರ್ಧರಿಸುತ್ತದೆ. ಹೀಗಾಗಿ ದಿನದ ಆರಂಭ ಖುಷಿ, ಸಂತೋಷದಿಂದಾಗಬೇಕು. ಬೆಳಗಿನ ಸಮಯದಲ್ಲಿ , ನೀವು ಧನಾತ್ಮಕ ಶಕ್ತಿಯನ್ನು ಪಡೆಯುವಂತಹ ಕೆಲಸಗಳನ್ನು ಮಾಡಬೇಕು. ಈ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಮತ್ತು ಮನಸ್ಸಿನಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬಲು ನಮ್ಮ ಖುಷಿ ಮುನಿಗಳು ಬೆಳಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ಹಸ್ತದ ದರ್ಶನವನ್ನು ಮಾಡುವಂತೆ ಸಲಹೆ ನೀಡಿದ್ದಾರೆ.

ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಮತ್ತು ಮನಸ್ಸಿನಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬಲು ಖುಷಿ ಮುನಿಗಳು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ಹಸ್ತದ ದರ್ಶನವನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕಣ್ಣು ತೆರೆದ ತಕ್ಷಣ ಮೊದಲು ನಿಮ್ಮ ಅಂಗೈಗಳನ್ನು ನೋಡಿಕೊಳ್ಳಬೇಕು.ಅಂಗೈಗಳಲ್ಲಿ ಮೂಡಿರುವ ರೇಖೆಗಳು ಅದೃಷ್ಟವನ್ನು ತಂದುಕೊಡುತ್ತವೆ ಎನ್ನಲಾಗುತ್ತದೆ.

ಅಂಗೈ ನೋಡುವ ಧಾರ್ಮಿಕ ನಂಬಿಕೆ

ಕರಾಗ್ರೇ ವಸತೇ ಲಕ್ಷ್ಮೀ , ಕರ್ವಧೇ ಸರಸ್ವತಿ, ಕರ್ಮೂಲೇ ತು ಗೋವಿಂದಾ : ಪ್ರಭಾತೇ ಕರದರ್ಶನಂ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ನನ್ನ ಕೈಗಳ ಮುಂಭಾಗದಲ್ಲಿ ಸಂಪತ್ತಿನ ದೇವತೆ, ಮಧ್ಯದಲ್ಲಿ ಜ್ಞಾನವನ್ನು ನೀಡುವ ತಾಯಿ ನೆಲೆಸಿದ್ದಾಳೆ ಮತ್ತು ಗೋವಿಂದ ಅಮದರೆ ಭಗವಾನ್ ವಿಷ್ಣುವು ಮೂಲದಲ್ಲಿ ನೆಲೆಸಿದ್ದಾನೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಅಂಗೈಯನ್ನು ನೋಡುವುದರಿಂದ ಮೂರು ದೇವತೆಗಳ ದರ್ಶನ ಮಾಡಿ ಅವರ ಅನುಗ್ರಹವನ್ನು ಪಡೆಯಬಹುದು , ಇದರಂದ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ,ಕೌಶಲ್ಯ, ಕೀರ್ತಿಯನ್ನು ನಾವು ಪಡೆಯಬಹುದು.

ಶ್ಲೋಕ
ಕರಾಗ್ರೇ ವಸತೇ ಲಕ್ಷ್ಮೀ
ಕರಮಧ್ಯೇ ಸರಸ್ವತಿ
ಕರಮೂಲೇ ತು ಗೋವಿಂದಃ
ಪ್ರಭಾತೇ ಕರದರ್ಶನಂ
ಅರ್ಥ :ಕೈಯ ಬೆರಳುಗಳ ತುದಿಯಲ್ಲಿ ಲಕ್ಷ್ಮೀಯು ನೆಲೆಸಿದ್ದಾಳೆ. ಕೈಯ ಮಧ್ಯೆ ಸರಸ್ವತಿ ಇದ್ದಾಳೆ, ಕೈಯ ಬುಡದಲ್ಲಿ ಗೋವಿಂದನು ನೆಲೆಸಿದ್ದಾನೆ, ಈ ಬೆಳಗಿನ ಸಮಯದಲ್ಲಿ ನಾನು ಅಂಗೈಯಲ್ಲಿ ಈ ದೇವರುಗಳ ದರ್ಶನ ಮಾಡುತ್ತೇನೆ.

RELATED ARTICLES
- Advertisment -
Google search engine

Most Popular

Recent Comments