Wednesday, August 27, 2025
Google search engine
HomeUncategorized37 ವರ್ಷದ ನಂತ್ರ ‘ಬಂಧನ’ ಸೀಕ್ವೆಲ್​ಗೆ ಸಿಂಗ್ ಮುನ್ನುಡಿ

37 ವರ್ಷದ ನಂತ್ರ ‘ಬಂಧನ’ ಸೀಕ್ವೆಲ್​ಗೆ ಸಿಂಗ್ ಮುನ್ನುಡಿ

80ರ ದಶಕದ ಕನ್ನಡದ ಮಾಸ್ಟರ್​ಪೀಸ್ ಸಿನಿಮಾ ಬಂಧನ, ದಶಕಗಳೇ ಕಳೆದರೂ ಮರೆಯಲಾಗದ ಬಂಧ. ಕಾರಣ ಡಾಕ್ಟರ್ ಹರೀಶ್- ಮಿಸ್ ನಂದಿನಿ. ಟ್ರಯಾಂಗಲ್ ಪ್ರೇಮ ದೃಶ್ಯಕಾವ್ಯ ಇಂದಿಗೂ ಹತ್ತು ಹಲವು ಕಾರಣಗಳಿಂದ ದಿ ಬೆಸ್ಟ್ ಸಿನಿಮಾ. ಇದೀಗ ಅದರ ಸೀಕ್ವೆಲ್ ಚಿತ್ರ ಬರ್ತಿದೆ. ಆದರೆ ಇಲ್ಲಿ ವಿಷ್ಣುದಾದಾ ಮಾತ್ರ ಮಿಸ್ಸಿಂಗ್.

ಬಂಧನ.. 1984ರ ಚಂದನವನದ ಮರೆಯಲಾಗದ ಪ್ರೇಮದ ಕಾದಂಬರಿ. ಮೂರೂವರೆ ದಶಕ ಕಳೆದರೂ ಆ ಪ್ರೇಮ ದೃಶ್ಯಕಾವ್ಯವನ್ನ ಯಾರೂ ಮರೆಯಲು ಸಾಧ್ಯವಾಗಿಲ್ಲ. ಕಾರಣ ಚಿತ್ರಕಥೆ, ಉತ್ತಮ ಸ್ಕ್ರೀನ್​ಪ್ಲೇ, ಕಲಾವಿದರ ಅದ್ಭುತವಾದ ನಟನೆ, ಸೊಗಸಾದ ಹಾಡುಗಳು. ಚಿತ್ರದಲ್ಲಿನ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಅಭಿನಯವಂತೂ ಪ್ರೇಕ್ಷಕರಿಂದ ಅಪಾರವಾದ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾ ರಾಜ್ಯದ ಅದೆಷ್ಟೋ ಚಿತ್ರಮಂದಿರಗಳಲ್ಲಿ 25 ವಾರಕ್ಕಿಂತಲೂ ಹೆಚ್ಚು ದಿನ ಯಶಸ್ವೀ ಪ್ರದರ್ಶನ ಕಂಡಿತ್ತು.

ಬಂಧನ ಸಿನಿಮಾ ಈಗಲೂ ಟಿವಿಯಲ್ಲಿ ಹಾಕಿದರು, ಸಿನಿಪ್ರಿಯರು ಇಷ್ಟಪಟ್ಟು ವೀಕ್ಷಿಸುತ್ತಾರೆ. ಆ ಸಿನಿಮಾ ಮತ್ತೊಂದು ಭಾಗದಲ್ಲಿ ಮೂಡಿಬಂದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ವಿಷ್ಣುದಾದಾ ಅಭಿಮಾನಿಗಳು ಆಸೆ ಪಟ್ಟಿದ್ದರು. ಅಲ್ಲದೆ ಈ ಬಗ್ಗೆ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಬಳಿ ಸಾಕಷ್ಟು ಬಾರಿ ಬೇಡಿಕೆ ಕೂಡ ಇಟ್ಟಿದ್ದರು. ಇದೀಗ ಸಾಹಸಸಿಂಹನ ಅಭಿಮಾನಿಗಳ ಆಸೆ ನೆರವೇರೋ ಸಮಯ ಬಂದಿದೆ. ಅದೇ ಡೈರೆಕ್ಟರ್, ಅದೇ ಟೀಂ ಜೊತೆ ಬಂಧನ 2 ಮಾಡೋಕೆ ಮುಂದಾಗಿದ್ದಾರೆ.

ಇತ್ತೀಚೆಗೆ ನಿರ್ದೇಶಕ ಸಿಂಗ್ ಬಾಬು ತಮ್ಮ ಪುತ್ರ ಡೆಡ್ಲಿ ಆದಿತ್ಯ ಜೊತೆ ಬಂಧನ 2 ಮಾಡೋದಾಗಿ ಹೇಳಿದರು. ಆಗ್ಲಿಂದಾನೇ ಈ ಸಿನಿಮಾ ಬಗ್ಗೆ ದೊಡ್ಡ ದೊಡ್ಡ ಚರ್ಚೆಗಳು ಶುರುವಾಗಿದ್ವು. ಇದೀಗ ಆ ಸಿನಿಮಾ ಅಫಿಶಿಯಲಿ ಸೆಟ್ಟೇರಿದೆ. ವಿಷ್ಣುದಾದಾ ಇಲ್ಲ ಅನ್ನೋದು ಒಂದು ಬಿಟ್ಟರೆ, ಸುಹಾಸಿನಿ, ಜೈ ಜಗದೀಶ್ ಈ ಚಿತ್ರದಲ್ಲಿ ಇರಲಿದ್ದಾರೆ. ವಿಶೇಷ ಅಂದರೆ ಸುಧಾರಾಣಿ, ಸಾಧು ಕೋಕಿಲಾ, ಕಾಮಿಡಿ ಕಿಲಾಡಿ ಜಿಜಿ ಕೂಡ ಇದರ ಭಾಗವಾಗಲಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಬಂಧನ 2 ಸಿನಿಮಾ ಮುಹೂರ್ತ ನೆರವೇರಿತು. ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಭಾರತಿ ವಿಷ್ಣುವರ್ಧನ್, ಸುಹಾಸಿನಿ, ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್, ಆದಿತ್ಯ ಹಾಗೂ ಸಿನಿಮಾಟೋಗ್ರಫರ್ ಅಣಜಿ ನಾಗರಾಜ್ ಭಾಗಿಯಾಗಿದ್ದರು. ನಾಯಕ ಆದಿತ್ಯ ಹಾಗೂ ಸುಹಾಸಿನಿ ಡಾ.ವಿಷ್ಣುವರ್ಧನ್ ಅವರ ಫೋಟೋಗೆ ನಮಸ್ಕರಿಸಿ, ನಂತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕ್ಲಾಪ್ ಮಾಡಿ ಆಕ್ಷನ್ ಹೇಳುವ ಮೂಲಕ, ಚಿತ್ರಕ್ಕೆ ಚಾಲನೆ ನೀಡಿದರು.

ಅಂದಹಾಗೆ ಬಂಧನ 2 ಸಿನಿಮಾದಲ್ಲಿ ನಟ ಆದಿತ್ಯ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಸುಹಾಸಿನಿ, ಜೈಜಗದೀಶ್ ಈ ಸಿನಿಮಾದಲ್ಲೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಈ ಸಮಯದಲ್ಲಿ ವಿಷ್ಣುವರ್ಧನ್ ಅವರನ್ನಮಿಸ್ ಮಾಡಿಕೊಂಡ ಚಿತ್ರತಂಡ, ಅವ್ರು ಬಂಧನ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಅದೆಷ್ಟು ಜೀವ ತುಂಬಿದ್ರು, ಕ್ಯಾಮೆರಾ ಹಿಂದೆ ಏನೆಲ್ಲಾ ತರ್ಲೆ ತಮಾಷೆಗಳನ್ನು ಮಾಡ್ತಿದ್ರು ಅನ್ನೋದನ್ನ ಕ್ಯಾಮೆರಾ ಮುಂದೆ ಬಿಚ್ಚಿಟ್ರು.

ಸದ್ಯ ಚಿತ್ರದ ಮುಹೂರ್ತ ನೆರವೇರಿಸಿರೋ ಚಿತ್ರತಂಡ, ಈ ತಿಂಗಳ ಕೊನೆಯ ವಾರದಲ್ಲಿ ಚಿತ್ರದ ಶೂಟಿಂಗ್ ಆರಂಭಿಸುವ ಯೋಜನೆಯಲ್ಲಿದೆ. ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಸಿನಿಮಾ ತೆರೆ ಕಾಣಲಿದೆ ಎನ್ನಲಾಗ್ತಿದೆ. ಕನ್ನಡ ಚಿತ್ರರಂಗದಲ್ಲಿ ಬಂಧನ 2 ಸಿನಿಮಾ ಮೂಡಿಬರ್ತಿರೋದು ವಿಷ್ಣುದಾದಾ ಅಭಿಮಾನಿಗಳ ದಿಲ್​ಖುಷ್ ಆಗುವಂತೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments