Tuesday, August 26, 2025
Google search engine
HomeUncategorizedಏನಿದು CAMPA ನಿಧಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಏನಿದು CAMPA ನಿಧಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

CAMPA, ಅಂದ್ರೆ ‘ಪರಿಹಾರಾತ್ಮಕ ಅರಣ್ಯೀಕರಣ ನಿಧಿ ಮತ್ತು ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ’ವು (Compensatory Afforestation Fund and Compensatory Afforestation Fund Management and Planning Authority)ಎಂದರ್ಥ. ಇದುವರೆಗೆ 48,606 ಕೋಟಿ ಮೊತ್ತವನ್ನು ‘ಪರಿಹಾರಾತ್ಮಕ ಅರಣ್ಯೀಕರಣ ನಿಧಿ ಮತ್ತು ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ’ವು 32 ರಾಜ್ಯಗಳಿಗೆ ವಿತರಿಸಿದೆ. CAMPA ನಿಧಿಯ ಅಡಿಯಲ್ಲಿ, ಗರಿಷ್ಠ ಮೊತ್ತವನ್ನು ಛತ್ತೀಸ್‌ಗಢ ಮತ್ತು ಒಡಿಶಾಗೆ ವರ್ಗಾಯಿಸಲಾಗಿದೆ, ಈ ಪ್ರತಿಯೊಂದು ರಾಜ್ಯವು ಕ್ರಮವಾಗಿ ಸುಮಾರು 5,700 ಕೋಟಿ ರೂ.ಗಳನ್ನು ಪಡೆದಿವೆ,ನಂತರದ ಸ್ಥಾನದಲ್ಲಿ ಜಾರ್ಖಂಡ್ ಮತ್ತು ಮಹಾರಾಷ್ಟ್ರ ಗಳಿದ್ದು, ಸುಮಾರು 3,000 ಕೋಟಿ ರೂ.ಗಳನ್ನು ಪಡೆಯುತ್ತಿವೆ.

‘ಪರಿಹಾರ ಅರಣ್ಯೀಕರಣ ನಿಧಿ ಕಾಯಿದೆ, 2016’ (Compensatory Afforestation Fund Act, 2016) ಅಥವಾ CAF ಕಾಯಿದೆ 2016 ಅಡಿಯಲ್ಲಿ ಸ್ವತಂತ್ರ ಪ್ರಾಧಿಕಾರ – ‘CAMPA ಫಂಡ್’ ಅನ್ನು ಕಾರ್ಯಗತಗೊಳಿಸಲು ‘ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ’ (Compensatory Afforestation Fund Management and Planning Authority – CAMPA) ವನ್ನು ಸ್ಥಾಪಿಸಲಾಗಿದೆ. ಆದಾಗ್ಯು, ಕಳೆದ ಆಗಸ್ಟ್‌ವರೆಗೆ ನಿಧಿಯ ನಿರ್ವಹಣೆಯ ನಿಯಮಗಳಿಗೆ ಅಂತಿಮ ರೂಪ ನೀಡಲಾಗಿಲ್ಲ.

‘ಪರಿಹಾರ ಅರಣ್ಯೀಕರಣ’ ಎಂದರೇನು?

ಪರಿಹಾರಾತ್ಮಕ ಅರಣ್ಯೀಕರಣ ಎಂದರೆ ಪ್ರತಿ ಬಾರಿ ಅರಣ್ಯ ಭೂಮಿಯನ್ನು ಗಣಿಗಾರಿಕೆ ಅಥವಾ ಉದ್ಯಮದಂತಹ ಅರಣ್ಯೇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಆಗ ಈ ಅರಣ್ಯ-ಭೂಮಿಗೆ ಸಮನಾದ  ಅರಣ್ಯೇತರ ಭೂಮಿಯಲ್ಲಿ ಅರಣ್ಯೀಕರಣವನ್ನು ಮಾಡಲು ಬಳಕೆದಾರ ಏಜೆನ್ಸಿಯು ಪಾವತಿಸಬೇಕಾಗುತ್ತದೆ, ಅಥವಾ ಅರಣ್ಯೇತರ ಭೂಮಿಯು ಇದಕ್ಕೆ ಲಭ್ಯವಿಲ್ಲದಿದ್ದಾಗ, ಪಾಳು ಬಿದ್ದ ಅರಣ್ಯ ಭೂಮಿಯ ದುಪ್ಪಟ್ಟು ವಿಸ್ತೀರ್ಣದ ಪ್ರದೇಶವನ್ನು ಪಾವತಿಸಬೇಕಾಗುತ್ತದೆ.
 
ನಿಧಿ ಹಂಚಿಕೆ ಆಗುವುದು ಹೇಗೆ..??

ನಿಯಮಗಳ ಪ್ರಕಾರ, 90% ನಷ್ಟು ಪರಿಹಾರ ಅರಣ್ಯೀಕರಣ ನಿಧಿ (CAF) ಅನ್ನು ರಾಜ್ಯಗಳಿಗೆ ವಿತರಿಸಬೇಕು ಮತ್ತು 10% ಕೇಂದ್ರವು ಉಳಿಸಿಕೊಳ್ಳಬೇಕು. ಜಲಾನಯನ ಪ್ರದೇಶಗಳ ನಿರ್ವಹಣೆ, ನೈಸರ್ಗಿಕ ಪುನರುತ್ಪಾದನೆ, ಅರಣ್ಯ ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆ, ಸಂರಕ್ಷಿತ ಪ್ರದೇಶಗಳಿಂದ ಗ್ರಾಮಗಳ ಸ್ಥಳಾಂತರ, ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆ, ತರಬೇತಿ ಮತ್ತು ಜಾಗೃತಿ ಮೂಡಿಸುವಿಕೆ, ಮರ ಉಳಿಸುವ ಉಪಕರಣಗಳ ಪೂರೈಕೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಈ ಮೊತ್ತವನ್ನು ಬಳಸಬಹುದು.

ಸಿಂಧೂರ , ಪವರ್​ ಟಿವಿ 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments