Wednesday, August 27, 2025
HomeUncategorizedಕಾಣೆ ಮೀನು ರವಾ ಫ್ರೈ; ಮಾಡಿ ಕಲಿಯಿರಿ! ತಿಂದು ನಲಿಯಿರಿ!!

ಕಾಣೆ ಮೀನು ರವಾ ಫ್ರೈ; ಮಾಡಿ ಕಲಿಯಿರಿ! ತಿಂದು ನಲಿಯಿರಿ!!

ಮಂಗಳೂರು: ಕರಾವಳಿ ಊಟದ ವಿಚಾರದ ಬಗ್ಗೆ ಯಾವಾಗಲೂ ಹೊಗಳುವವ ನಾನು. ಯಾಕಂದ್ರೆ ಅಲ್ಲಿನ ಊಟಗಳು ನೀಡುವ ಮಜವೇ ಬೇರೆ. ಮೀನಿನ ಖಾದ್ಯದ ಮಜಲಗೆ ಮನಸೋಲದ ಸೊಗಸುಗಾರನಿಲ್ಲ ಅನ್ನೋ ಮಾತು ಕರಾವಳಿಯಲ್ಲಿ ಆಗಾಗ ಸುದ್ದಿಗೆ ಬರುತ್ತೆ. ವಿಶೇಷ ಅಂದ್ರೆ ಆ ಉದ್ಘಾರ ಬರೋದು ನಾನ್-ಕರಾವಳಿಯನ್ಸ್​ ಗಳಿಂದ. ಸೋ, ದೇಶದ ಯಾವುದೇ ಮೂಲೆಯಲ್ಲಿ ತಿನ್ನುವ ಮೀನಿಗೂ, ಕರ್ನಾಟಕ ಕರಾವಳಿಯಲ್ಲಿ ತಿನ್ನುವ ಮೀನಿಗೂ ಅಜಗಜಾಂತರ ವ್ಯತ್ಯಾಸ…

ಮೀನುಗಳಲ್ಲೂ ಬೇರೆ ಬೇರೆ ತರಹದ ಪ್ರಭೇಧಗಳಿವೆ.. ಮುಳ್ಳೇ ಇಲ್ಲದ ಮೀನುಗಳನ್ನು ಇಷ್ಟಪಡುವ ಸಮುದಾಯ ಒಂದಾದರೆ, ಮುಳ್ಳುಗಳು ಇಲ್ಲದ ಮೀನನ್ನ ಮುಟ್ಟದೇ ಇರುವ ಜನರೂ ಇದಾರೆ. ಒಟ್ಟಾರೆ ಮೀನಿನ ವಿವಿಧ ಖಾದ್ಯಗಳಲ್ಲಿ ಎನೇ ಮಾಡಿದರೂ, ಅದು ಅತ್ಯುತ್ಕೃಷ್ಟ. ಕರಾವಳಿ ಭಾಗದ ಕಾಣೆ ಮೀನು ಯಾರಿಗೆ ಗೊತ್ತಿಲ್ಲ ಹೇಳಿ. ಕಾಣೆ ಮೀನಿನ ರುಚಿಯ ಮುಂದೆ ಯಾವ ಮೀನು ಕೂಡ ನಿಲ್ಲೋದಿಲ್ಲ. ಹಾಗೆ ಕಾಣೆ  ರವಾ ಫ್ರೈ ಒಂಥರಾ ಅಮಲು.. ಇವತ್ತು ಆ ಕಾಣೆ ರವಾ ಡೀಪ್ ಫ್ರೈ ಮಾಡೋದು ಕಲಿಯೋಣ.

ಮೊದಲು ಮೀನನ್ನು ಸರಿಯಾಗಿ ಸ್ವಚ್ಚಗೊಳಿಸಿಕೊಳ್ಳಿ. ಅದಾದ ನಂತರ ರೆಡಿಮೇಡ್ ಮೀನಿನ ಫ್ರೈ ಹುಡಿ ಜೊತೆಗೆ ಒಂದು ಮೊಟ್ಟೆ ಬೆರೆಸಿಕೊಳ್ಳಿ. ನಂತರ ಮೀನಿನ ಜೊತೆಗೆ ಬೆರೆಸಿ ಅರ್ಧಗಂಟೆ ನೆನೆಯಲು ಬಿಡಿ. ಒಂದು ದೊಡ್ಡ ಪಾತ್ರೆಯಲ್ಲಿ, ತೆಂಗಿನ ಎಣ್ಣೆ ( ಬೇರೆ ಯಾವುದಾದರು ಎಣ್ಣೆ ಆಗುತ್ತೆ) ಕಾಯಲು ಇಡಿ. ಬಾಂಬೇ ರವಾ ಮೇಲೆ ನೆನೆಸಿರುವ  ಮೀನನ್ನು ಎರಡು ಬಾರಿ ಹೊರಳಿಸಿ ಕಾದ ಎಣ್ಣೆಗೆ ಬಿಡಿ.. 15 ನಿಮಿಷ ಮಧ್ಯಮ ಬಿಸಿಯೊಂದಿಗೆ ಬೇಯಿಸಿ, ನಂತರ ಬಿಸಿಬಿಸಿ ಗಂಜಿಯ ಜೊತೆಗೆ ಸವಿಯಲು ನೀಡಿ.. ಬಿಸಿ ಬಿಸಿ ಕ್ರಿಸ್ಪಿ ಗರಂ ಗರಂ ಕಾಣೆ ಮೀನಿನ ಡೀಪ್ ಫ್ರೈ ರೆಡಿ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments