Friday, August 29, 2025
HomeUncategorizedಹೊಸಪೇಟೆ ಹೊಸ ಜಿಲ್ಲೆಯಾಗಿ ರಚನೆಯಾಗುವುದು ಖಂಡಿತ : ಸಚಿವ ಆನಂದ್ ಸಿಂಗ್

ಹೊಸಪೇಟೆ ಹೊಸ ಜಿಲ್ಲೆಯಾಗಿ ರಚನೆಯಾಗುವುದು ಖಂಡಿತ : ಸಚಿವ ಆನಂದ್ ಸಿಂಗ್

ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ 2021&22ಕ್ಕೆ ವಿಜಯನಗರ ಕ್ಷೇತ್ರವನ್ನು ಜಿಲ್ಲೆಯನ್ನಾಗಿಸುವುದಾಗಿ ಕ್ಷೇತ್ರದ ಜನರಿಗೆ ಜನರಿಗೆ ಭರವಸೆ ನೀಡಿದ್ದಾರೆ. ಈಗಾಗಲೇ ಬಳ್ಳಾರಿ ಜಿಲ್ಲೆಯನ್ನು ಇಬ್ಬಾಗ ಮಾಡುವುದುಕ್ಕೆ ಸ್ವಪಕ್ಷೀಯರಲ್ಲೇ ಭಿನ್ನಮತಗಳಿವೆ. ಬಳ್ಳಾರಿ ಜಿಲ್ಲೆಯನ್ನು ಇಭ್ಭಾಗ ಮಾಡುವುದು ಬೇಡ,ಅಖಂಡ ಬಳ್ಳಾರಿ ಆಗೇ ಉಳಿಯಲಿ ಎನ್ನುವುದು ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಅವರ ಭಿನ್ನರಾಗ. ಇದಕ್ಕೆ ಬಳ್ಳಾರಿ ಜಿಲ್ಲೆಯ ಕೆಲ ಸಂಘಟನೆಗಳು ಮತ್ತು ಕಾಂಗ್ರೆಸ್​ನ ಕೆಲ ಶಾಸಕರು ಸಹ ಸಹಮತ ವ್ಯಕ್ತಪಡಿಸಿದ್ದು, ಮುಸುಕಿನ ಗುದ್ದಾಟ ನಡೆದೇ ಇದೆ.

ಅದರೆ ಇದಕ್ಕೆ ವ್ಯತಿರಿಕ್ತವಾಗಿ ಸಚಿವ ಆನಂದ್ ಸಿಂಗ್ ಹೊಸಪೇಟೆಯನ್ನು ಬಳ್ಳಾರಿಯಿಂದ ಪ್ರತ್ಯೇಕಗೊಳಿಸಿ ಹೊಸ ಜಿಲ್ಲೆ ಮಾಡುವುದಕ್ಕೆ ಪಣ ತೊಟ್ಟಂತಿದೆ. ನಿನ್ನೆ ಸ್ವಾತಂತ್ರ್ಯ ದಿನದಂದು ಅವರು ನೀಡಿದ ಹೇಳಿಕಯು ಅದಕ್ಕೆ ಪುಷ್ಠಿ ನೀಡುತ್ತಿದೆ. ಮುಂದಿನ ವರ್ಷದೊಳಗೆ ವಿಜಯನಗರ ಹೊಸಜಿಲ್ಲೆಯಾಗಿ ಉದಯಸಿಲಿದೆ ಎಂಬರ್ಥದ ಹೇಳಿಕೆ ನೀಡಿದ್ದಾರೆ. 

ಇನ್ನು ಹಿಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಮುನ್ನ ಆನಂದ್ ಸಿಂಗ್ ವಿಜಯನಗರ ಹೊಸಪೇಟೆಯನ್ನು ಜಿಲ್ಲೆಯನ್ನಗಿಸಬೇಕು ಅಂತಾ ಸಿಎಂ ಯಡಿಯೂರಪ್ಪ ಅವರಿಗೆ ಬೇಡಿಕೆಯಿಟ್ಟಿದ್ದರು, ಅದರಂತೆ ಸಿಎಂ ಯಡಿಯೂರಪ್ಪ ಸಹ ಭರವಸೆ ನೀಡಿದ್ದರು. ಅದು ಕೆಲಕಾಲ ಜಿಲ್ಲೆಯಲ್ಲಿ ಒಂದಷ್ಟು ಜನಪ್ರತಿನಿಧಿಗಳ ಜಟಾಪಟಿಗೂ ಕಾರಣವಾಗಿತ್ತು. ಕೊರೋನಾ ಸಮಸ್ಯೆಯಿಂದಾಗಿ ಈ  ವಿವಾದ ಅಲ್ಲಿಗೆ ನಿಂತಿತ್ತು. ಇದೀಗ ಸ್ವಾತಂತ್ರ್ಯ ದಿನದಂದೇ ಹೊಸಪೇಟೆ ಹೊಸಜಿಲ್ಲೆ ವಿಷಯಕ್ಕೆ  ಆನಂದ್ ಸಿಂಗ್ ಮರುಜೀವ ನೀಡಿದ್ದಾರೆ.

ಈ ವಿಷಯ ಬಳ್ಳಾರಿಯ ಶಾಸಕರಾದ ಸೋಮಶೇಖರ್ ರೆಡ್ಡಿ, ನಾಗೇಂದ್ರ, ಆರೋಗ್ಯ ಸಚಿವ ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್ ಕೆಂಗಣ್ಣಿಗೆ ಗುರಿಯಾಗಿದೆ. ಆನಂದ್ ಹೊಸ ಜಿಲ್ಲೆಯ ಬಗ್ಗೆ ಮಾತನಾಡಿದ ಹಿನ್ನಲೆ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಸಚಿವರ ಮೇಲೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅನ್ನೋದು ರಾಜಕೀಯ ವಲಯದಲ್ಲಿ ಕೇಳಿಬರ್ತಿರೋ ವಿಶ್ಲೇಷಣೆ.

-ಅರುಣ್ ನವಲಿ 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments