Saturday, September 13, 2025
HomeUncategorizedಒಟ್ಟಿಗೆ ಕಳ್ಳತನದ ಕೈಚಳಕ ತೋರುತ್ತಿದ್ದ ಕುಚುಕು ಗೆಳೆಯರು ಕೊನೆಗೂ ಅಂದರ್...

ಒಟ್ಟಿಗೆ ಕಳ್ಳತನದ ಕೈಚಳಕ ತೋರುತ್ತಿದ್ದ ಕುಚುಕು ಗೆಳೆಯರು ಕೊನೆಗೂ ಅಂದರ್…

ರಾಮನಗರ : ವೃತ್ತಿ ಕೂಲಿ‌ ಕೆಲಸವಾದರೂ ಪ್ರವೃತ್ತಿ ದ್ವಿಚಕ್ರವಾಹನಗಳ ಕಳ್ಳತನ ಮಾಡುತಿದ್ದ, ಕುಚುಕು ಗೆಳೆಯರಿಬ್ಬರು ಜೊತೆಯಾಗಿಯೇ ಜೈಲು ಸೇರಿದ್ದಾರೆ. ಆರೋಪಿಗಳಾದ ಪ್ರತಾಪ್.ವಿ ಹಾಗೂ ಯೋಗೇಶ್ ಇಬ್ಬರು ಒಂದೇ ಊರಿನವರು ಅಲ್ದೆ, ಇಬ್ಬರು ಗಾರೆ ಕೆಲಸ, ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿಕೊಂಡು ಜೊತೆಯಾಗಿಯೇ ಇದ್ದವರು. ಯಾವತ್ತು ಕೂಲಿ‌ ಕೆಲಸ ಸಿಗುವುದಿಲ್ಲವೋ ಅವತ್ತು ತಮ್ಮ ಪ್ರವೃತ್ತಿ ಬೈಕ್ ಕಳವು ಮಾಡಿ ಪಕ್ಕಾ ಸಕಸ್ಸ್ ಆಗುತ್ತಿದ್ದರು ಹಾಗೇ, ಕಳವು ಮಾಲಿನಿಂದ ಬಂದ ಪಾಲನ್ನು ಇಬ್ಬರು ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ಸದ್ಯ ಚನ್ನಪಟ್ಟಣ ತಾಲೂಕಿನ ಅಕ್ಕೂರು ಪೊಲೀಸರ ಆತಿಥ್ಯ ಸ್ವೀಕರಿಸಿ ಇದೀಗ ಜೈಲು ಸೇರಿದ್ದಾರೆ.

ಬೈಕ್ ಕಳವು ಪ್ರಕರಣ ನೆಗ್ಲೆಟ್ ಮಾಡದ ಖಾಕಿಪಡೆ ; 7 ಲಕ್ಷ ಮೌಲ್ಯದ 20 ಬೈಕ್ ಗಳು ಜಪ್ತಿ

ಇನ್ನೂ ಜುಲೈ 11ರಂದು ಶಿವಣ್ಣ ಎಂಬುವವರು ತಮ್ಮ ಬೈಕ್ ಕಳುವಾಗಿದ್ದರ ಬಗ್ಗೆ, ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತಾರೆ. ಕೊರೋನಾ ಎಫೆಕ್ಟ್, ಲಾಕ್ಡೌನ್, ಸೀಲ್ ಡೌನ್ ಅಂತ ಹೈರಾಣಾಗಿದ್ದ ಖಾಕಿಪಡೆ ಸಾರ್ವಜನಿಕರೊಬ್ಬರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳೆದುಕೊಂಡ ಬಗ್ಗೆ ಬಂದ ದೂರುನ್ನು ತಾತ್ಸಾರ ಮಾಡದೆ ತ್ವರಿತವಾಗತಿಯ ತನಿಖೆಗೆ ಮುಂದಾಗಿ, ಆರೋಪಿಗಳಿಂದ ಸುಮಾರು 7ಲಕ್ಷಕ್ಕೂ ಅಧಿಕ ಮೊತ್ತದ 20 ವಿವಿಧ ಬಗೆಯ ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ದೆ ಚನ್ನಪಟ್ಟಣ ಗ್ರಾಮಾಂತರ ಭಾಗದ ಹಲವು ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 20 ಬೈಕ್ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಾಕಿಪಡೆ ಕದ ತಟ್ಟಿದಾಗಲೇ ಗೊತ್ತಾಗಿದ್ದು ; ಇಷ್ಟದ ದಿನ ಜಾನುವಾರುಗಳಿಗೆ ಮೇವು ಸಾಗಿಸಿದ್ದು ಕದ್ದ ಬೈಕ್ ಗಳಿಂದಾನಾ ಅಂತ.!

ಈ ಆರೋಪಿಗಳಿಬ್ಬರು ಅಷ್ಟೇನೂ ಪ್ರೋಪೆಷನಲ್ ಕಳ್ಳರಾಗದಿದ್ದರೂ ಸಹ ಕಳ್ಳರೆ. ಅದೇ ಆಗಿದ್ದು ಎಡವಟ್ಟು ಕದ್ದ ಅಷ್ಟೂ ಬೈಕ್ ಗಳು ಸದ್ಯ ಸೇಫ್ ಆಗಿ ಪೊಲೀಸರ ಕೈಸೇರಿದ್ದು, ಮುಂದಿನ ದಿನಗಳಲ್ಲಿ ಮಾಲೀಕರನ್ನು ಸೇರಿಕೊಳ್ಳಲಿವೆ. ಈ ಆಸಾಮಿಗಳು ಕೂಲಿಗೆಂದು ಹೊರಟು ಕೆಲಸ ಸಿಗದಿದ್ದರೆ, ಬೈಕ್ ಕದ್ದು ವಾಪಸ್ ಮನೆಗಳತ್ತ ಬರುತಿದ್ದರು. ಹಾಗೆ ಕದ್ದು ತಂದ ಬೈಕ್ ಗಳನ್ನು ಅಷ್ಟೇ ಜಾಗೃತೆಯಿಂದ ತಮಗೆ ಪರಿಚಯ ಇರುವವರ ಬಳಿ, ಅಥವಾ ಕೆಲವೋಮ್ಮೆ ತಮಗೆ ಪರಿಚಯ ಇದ್ದವರಿಗೆ ಪರಿಚಯಸ್ತರ ಬಳಿ ಅಡಮಾನವಿಡುತಿದ್ದರು. ನಮ್ಮ ಮನೆಯವರಿಗೆ ಆರೋಗ್ಯದಲ್ಲಿ ವ್ಯತ್ಸಾಸವಾಗಿದೆ, ಸದ್ಯ ನಮ್ಮ ಬಳಿ ಈ ಬೈಕ್ ಮಾತ್ರ ಇದೆ ಅಂತ ಹೇಳಿ ತಕ್ಷಣಕ್ಕೆ ಹಣ ಪೀಕಿ ತಮ್ಮ ವ್ಯಸನಗಳಿಗೆ ಬಳಸಿಕೊಳ್ಳುತ್ತಿದ್ದರು. ಗ್ರಾಮೀಣ ಭಾಗದ ಜನರು ಸಾಮನ್ಯವಾಗಿ ಆರೋಗ್ಯದ ವಿಚಾರ ಅಂತ ಬೈಕ್ ಗಳ ದಾಖಲೆಗಳನ್ನು ಮೊದಲು ಕೇಳೆದೆ ಹಣ ನೀಡುತ್ತಿದ್ದರು. ನಂತರ ದಾಖಲೆಗಳನ್ನು ಕೇಳಿದರೆ ಆಸ್ಪತ್ರೆಯಿಂದ ಬಂದು ಕೊಡುತ್ತವೆ ಅಲ್ಲಿವರೆಗೆ ಬೈಕ್ ನೀವು ಬಳಸಿಕೊಳ್ಳಿ ಎಂದು ಹೇಳೆ ಎಸ್ಕೇಪ್ ಆಗುತ್ತಿದ್ದರು. ಯಾವಗ ಬೈಕ್ ಕಳವು ಪ್ರಕರಣವೊಂದರಲ್ಲಿ ಅಂದರ್ ಆಗಿ, ಪೊಲೀಸರು ತಮ್ಮ ಶೈಲಿಯಲ್ಲಿ ತನಿಖೆ ಶುರು ಮಾಡಿದರೂ ಆಗ ಕದ್ದ ಬೈಕ್ ಗಳ ಲಿಸ್ಟ್, ಅಡಮಾನವಿಟ್ಟ ಪ್ಲೇಸ್ ಒಟ್ಟಿಗೆ ಹೇಳಿದ್ದಾರೆ. ಆದರೆ ಪಾಪ ಇವರನ್ನು ನಂಬಿ ದಾಖಲೆಗಳನ್ನು ಕೇಳದೆ ಬೈಕ್ ಇಟ್ಟುಕೊಂಡು ಹಣ ಕೊಟ್ಟು, ಅದೇ ಬೈಕ್ ನಲ್ಲಿ ಹಳ್ಳಿಗಾಡಿನಲ್ಲಿ ದನಕರುಗಳಿಗೆ ಮೇವು ಸಾಗಿಸುತಿದ್ದವರಿಗೆ ಕೊನೆಗೂ ಗೊತ್ತಾಗಿದೆ, ನಮ್ಮ ಬಳಿ‌ ಇಷ್ಟು ದಿನ‌ ಇದ್ದ ಬೈಕ್ ಗಳ ಅಸಲಿ‌ ಮಾಲೀಕರು ಅಡಮಾನವಿಟ್ಟವರಲ್ಲ ಬದಲಿಗೆ ಕದ್ದ ಮಾಲ್ ಅಂತ.

ಹಳ್ಳಿಗಳ ಭಾಗದಲ್ಲಿ ಈಗಲೂ ಒಂದು ಗಾದೆ ಮಾತಿದೆ, ಕೊಟ್ಟವನು ಕೋಡಂಗಿ ಇಸ್ಕೊಂಡ್ ಅವನು ವೀರಭದ್ರ ಅಂತ ಬಹುಶಃ ಈ ಸ್ಟೋರಿಗೆ ಅದು ಸೂಕ್ತ ಅನಿಸುತ್ತದೆ. ಬೈಕ್ ತಂದು ಅಡಮಾನಕ್ಕಿಟ್ಟ ಕೂಡಲೇ, ಕಷ್ಟಕ್ಕೆ ಅಂತ ನಂಬಿ ಅಂದು ಹಣ ಕೊಟ್ಟವರು ಇಂದು ಪೊಲೀಸರ ಕೈಗೆ ಅಡಮಾನವಿಟ್ಟುಕೊಂಡಿದ್ದ ಬೈಕ್ ಕೊಟ್ಟು ಅತ್ತ ಹಣವನ್ನು ಕಳೆದುಕೊಂಡು ಕಣ್ಣು ಕಣ್ಣು ಬಿಡುತ್ತಾ ಯಾರನ್ನ ನಂಬೋದು ಯಾರನ್ನ ಬಿಡೋದು ಅಂತಿದ್ದಾರೆ.

ಪ್ರವೀಣ್ ಗೌಡ ಪವರ್ ಟಿವಿ ರಾಮನಗರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments