ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ನಿನ್ನೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ -ರಾಧಿಕಾ ಫ್ಯಾಮಿಲಿಗೆ ದೀಪಾವಳಿಯ ಬಿಗ್ ಗಿಫ್ಟ್ ಆಗಿ ಜೂನಿಯರ್ ಯಶ್ ಬಂದಿದ್ದಾನೆ. ಹೀಗಾಗಿ ಯಶ್ – ರಾಧಿಕಾ ದಂಪತಿ ಮತ್ತು ಅವರ ಕುಟುಂಬದವ್ರು ಖುಷಿಯಲ್ಲಿದ್ದಾರೆ.
ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಯಶ್ ಆಪ್ತರು. ಸಂಸದೆ ಸುಮಲತಾ ಅಂಬರೀಶ್ ಯಶ್ರನ್ನು ತನ್ನ ಮಗನಂತೆ ಟ್ರೀಟ್ ಮಾಡ್ತಾರೆ. ಮೊಮ್ಮಗ ಹುಟ್ಟಿದ್ದಕ್ಕೆ ಸುಮಲತಾ ಅಂಬರೀಶ್ ಕೂಡ ಖುಷಿಯಲ್ಲಿದ್ದಾರೆ. ನಿಮ್ಮ ಮನೆಗೆ ಎರಡನೇ ಪುಟಾಣಿ ಅತಿಥಿಯ ಆಗಮನವಾಗಿದೆ. ಇಡೀ ಕುಟುಂಬಕ್ಕೆ ದೇವರು ಸುಖ, ಸಂತೋಷ ನೆಮ್ಮದಿ ಕರುಣಿಸಲಿ ಅಂತ ಸುಮಲತಾ ಶುಭಹಾರೈಸಿದ್ದಾರೆ.
ಯಶ್ -ರಾಧಿಕಾ ದಂಪತಿಗೆ ಸುಮಲತಾ ವಿಶ್
RELATED ARTICLES