ನವದೆಹಲಿ: 17ನೇ ಲೋಕಸಭಾ ಚುನಾವಣೆಯ ಅಂತಿಮ ಸುತ್ತಿನ ಮತದಾನ ಇಂದು ನಡೆದಿದೆ. ಬಹುನಿರೀಕ್ಷಿತ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಟವಾಗಿದೆ. ಬಹುತೇಕ ಎಲ್ಲಾ ಸಂಸ್ಥೆಯ ಸಮೀಕ್ಷೆಗಳಲ್ಲೂ ಎನ್ಡಿಎ ಜಯಭೇರಿ ಬಾರಿಸಿದೆ. ಯಾವ ಯಾವ ಸಂಸ್ಥೆಯ ಸಮೀಕ್ಷೆಗಳು ಯಾರಿಗೆ ಎಷ್ಟು ಸ್ಥಾನ ನೀಡಿವೆ ಎಂಬ ಮಾಹಿತಿ ಇಲ್ಲಿದೆ.
ಚಾಣಕ್ಯ ಸಮೀಕ್ಷೆಯ ಪ್ರಕಾರ ಎನ್ಡಿಎಗೆ 340, ಕಾಂಗ್ರೆಸ್ 70, ಇತರೆ 133 ಸ್ಥಾನಗಳು ಲಭಿಸಿವೆ. ಟೈಮ್ಸ್ ನೌ ಸಮೀಕ್ಷೆಯಲ್ಲಿ ಎನ್ಡಿಎ 306, ಕಾಂಗ್ರೆಸ್ 132, ಇತರೆ 104 ಸ್ಥಾನ ಲಭಿಸಿದೆ. ನ್ಯೂಸ್ ಎಕ್ಸ್ ಸಮೀಕ್ಷೆ ಎನ್ಡಿಎ 298, ಕಾಂಗ್ರೆಸ್ 118, ಇತರೆ 126 ಸ್ಥಾನ ಗಳಿಸಿದೆ. ಡಿಎನ್ಎ ಸಮೀಕ್ಷೆ ಪ್ರಕಾರ ಎನ್ಡಿಎ 287, ಕಾಂಗ್ರೆಸ್ 128, ಇತರೆ 87 ಸ್ಥಾನ ಲಭಿಸಿದೆ. ಸಿ-ವೋಟರ್ ಸಮೀಕ್ಷೆಯಲ್ಲಿ ಎನ್ಡಿಎ 287, ಕಾಂಗ್ರೆಸ್ 128, ಇತರೆ 87 ಸ್ಥಾನ ಲಭಿಸಿದೆ. ಜೀ ನ್ಯೂಸ್ ಸಮೀಕ್ಷೆ ಪ್ರಕಾರ ಎನ್ಡಿಎ 300, ಕಾಂಗ್ರೆಸ್ 128, ಇತರೆ 114 ಸ್ಥಾನ ಲಭಿಸಿದೆ.
ಟುಡೇಸ್ ಚಾಣಕ್ಯ
ಎನ್ಡಿಎ – 340
ಯುಪಿಎ – 70
ಇತರೆ -133
ಟೈಮ್ಸ್ ನೌ
ಎನ್ಡಿಎ – 306
ಯುಪಿಎ – 132
ಇತರೆ – 104
ನ್ಯೂಸ್ ಎಕ್ಸ್
ಎನ್ಡಿಎ – 298
ಯುಪಿಎ – 118
ಇತರೆ -126
ಡಿಎನ್ಎ
ಎನ್ಡಿಎ – 287
ಯುಪಿಎ – 128
ಇತರೆ – 87
ಸಿ-ವೋಟರ್
ಎನ್ಡಿಎ – 287
ಯುಪಿಎ – 128
ಇತರೆ -87
ಜೀ ನ್ಯೂಸ್
ಎನ್ಡಿಎ – 300
ಯುಪಿಎ – 128
ಇತರೆ -114


