ಬೆಂಗಳೂರು : ‘ರಾಜಕೀಯ ಜೀವನದ ಹೊರತಾಗಿ ಯಡಿಯೂರಪ್ಪ ಮತ್ತು ನಾನು ಒಳ್ಳೆಯ ಗೆಳೆಯರು’ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಳಗ್ಗೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅಚಾನಕ್ ಆಗಿ ಒಂದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಸ್ತಲಾಘವ ಮಾಡಿ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ರು. ಈ ಬಗ್ಗೆ ಸಿದ್ದರಾಮಯ್ಯ ಅವರು, ‘ರಾಜಕೀಯ ಜೀವನದ ಹೊರತಾಗಿ ಯಡಿಯೂರಪ್ಪನವರು ಮತ್ತು ನಾನು ಒಳ್ಳೆಯ ಗೆಳೆಯರು. ಇಲ್ಲಿ ಅಧಿಕಾರ, ಅಂತಸ್ತು ಯಾವುದೂ ಶಾಶ್ವತವಲ್ಲ. ಕೊನೆಗೊಂದು ದಿನ ಗೆಲ್ಲುವುದು ನಮ್ಮ ನಡುವಿನ ಮಾನವೀಯ ಸಂಬಂಧಗಳು ಮಾತ್ರ’ ಎಂದು ಟ್ವೀಟ್ ಮಾಡಿದ್ದಾರೆ. ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಮಾಜಿ ಮುಖ್ಯಮಂತ್ರಿ @BSYBJP ಅವರನ್ನು ಭೇಟಿಯಾದ ಕ್ಷಣ ಅಂತ ಫೋಟೋವನ್ನು ಕೂಡ ಲಗತ್ತಿಸಿದ್ದಾರೆ.
https://twitter.com/siddaramaiah/status/1099927675211264000