Monday, August 25, 2025
Google search engine
HomeUncategorizedKGF ಗೋಲ್ಡನ್ ಪಾತ್ರಗಳ ನೋವು, ನಲಿವಿನ ಕಥೆ..!

KGF ಗೋಲ್ಡನ್ ಪಾತ್ರಗಳ ನೋವು, ನಲಿವಿನ ಕಥೆ..!

ರೆಕಾರ್ಡ್ಸ್​ ಕಾ ಬಾಪ್ ಆಗಿ ಧೂಳೆಬ್ಬಿಸ್ತಿರೋ ರಾಕಿಭಾಯ್​ನ ಚಿನ್ನದ ಸಾಮ್ರಾಜ್ಯದ ಹಿಂದಿನ ಕಷ್ಟ ಕಾರ್ಪಣ್ಯಗಳು ಇದೀಗ ಒಟಿಟಿ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಆದ್ರೆ ಆ ಸಿನಿಮಾದಲ್ಲಿರೋ ಗೋಲ್ಡನ್ ಪಾತ್ರಗಳು ಸಿನಿಮಾ ಬಗ್ಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿವೆ. ಜೊತೆಗೆ ತೂಫಾನ್ ಸಾಂಗ್ ಕೂಡ ಹಲ್​ಚಲ್ ಎಬ್ಬಿಸ್ತಿದೆ.

  • ರಿಲೀಸ್ ಆಯ್ತು ರಾಕಿಭಾಯ್ ತೂಫಾನ್ ಸಾಂಗ್
  • KGF ಗೋಲ್ಡನ್ ಪಾತ್ರಗಳ ನೋವು, ನಲಿವಿನ ಕಥೆ..!
  • ಬಾಲಿವುಡ್​ನಲ್ಲಿ 500 ಕೋಟಿ ಗಡಿ ದಾಟಿದ ಕೆಜಿಎಫ್-2
  • ದಾಖಲೆಗಳ ಸರಮಾಲೆ.. ಬಾಕ್ಸ್ ಆಫೀಸ್ ಕಿಂಗ್ ಯಶ್

ಕೆಜಿಎಫ್ ಸಿನಿಮಾ ಸಾವಿರದ ಐದನೂರು ಕೋಟಿಯ ಗಡಿ ದಾಟಿದೆ ಅನ್ನೋದು ಲೇಟೆಸ್ಟ್ ಖಬರ್. ಆದ್ರೆ ಅದರಲ್ಲಿ ಬಾಲಿವುಡ್ ಒಂದರಲ್ಲೇ ಬರೋಬ್ಬರಿ 500 ಕೋಟಿ ಗಳಿಸಿದೆ ಅನ್ನೋದು ನಿಜಕ್ಕೂ ಗ್ರೇಟ್ ನ್ಯೂಸ್. ಕಥೆಯಲ್ಲಿ ಗಟ್ಟಿತನ, ಪಾತ್ರಗಳಲ್ಲಿ ಸತ್ವ, ಮೇಕಿಂಗ್​​ನಲ್ಲಿ ವಿಭಿನ್ನತೆ ಇದ್ರೆ ಜನ ನಿರೀಕ್ಷೆಗೂ ಮೀರಿ ಇಷ್ಟ ಪಡ್ತಾರೆ ಅನ್ನೋದಕ್ಕೆ ಕೆಜಿಎಫ್-2 ಗಿಂತ ಮತ್ತೊಂದು ಲೈವ್ ಎಕ್ಸಾಂಪಲ್ ಬೇಕಿಲ್ಲ.

ಸಿನಿಮಾ ಥಿಯೇಟರ್​​ನಲ್ಲೂ ಕಮಾಲ್ ಮಾಡ್ತಿದೆ, ಇತ್ತ ಒಟಿಟಿಗೆ ಲಗ್ಗೆ ಇಟ್ಟು ಹಲ್​ಚಲ್ ಎಬ್ಬಿಸ್ತಿದೆ. ಇಂದಿಗೂ ಪ್ರತೀ ದಿನ ರಾಕಿಭಾಯ್ ಹಾಗೂ ಕೆಜಿಎಫ್-2 ಹೆಸರಲ್ಲಿ ಒಂದಿಲ್ಲೊಂದು ನೂತನ ದಾಖಲೆ ಆಗ್ತಾನೇ ಇದೆ. ಅಷ್ಟರ ಮಟ್ಟಿಗೆ ಎಲ್ಲರನ್ನ ಮಂತ್ರಮುಗ್ಧಗೊಳಿಸಿದೆ ಈ ಮೈಲಿಗಲ್ಲು ಸಿನಿಮಾ.

ತಾಯಿ- ಮಗನ ಸೆಂಟಿಮೆಂಟ್, ಎಮೋಷನ್ಸ್ ಜೊತೆ ವಿಶ್ವವನ್ನೇ ಆಳಬೇಕು ಅನ್ನೋ ರಾಕಿಭಾಯ್ ಮಹದಾಸೆ ಆತನ ಕನಸುಗಳ ಜೊತೆ ಸಾಮ್ರಾಜ್ಯವನ್ನೂ ವಿಸ್ತರಿಸುತ್ತಾ ಹೋಗುತ್ತೆ. ಆ ರೋಚಕ ಹಾಗೂ ರೋಮಾಂಚಕ ಜರ್ನಿಯಲ್ಲಿ ಸಾಕಷ್ಟು ಗೋಲ್ಡನ್ ಪಾತ್ರಗಳಿವೆ. ಅವೆಲ್ಲವೂ ಈಗ ಮಾತನಾಡಿವೆ.

ವಿಶೇಷ ಅಂದ್ರೆ ಮಾಸ್ ಪ್ರಿಯರ ಹಾರ್ಟ್​ ಫೇವರಿಟ್ ಸಾಂಗ್ ಆಗಿದ್ದ ರಾಕಿಭಾಯ್ ಗತ್ತು, ಗಮ್ಮತ್ತನ್ನು ಸಾರುವಂತಹ ತೂಫಾನ್ ವಿಡಿಯೋ ಸಾಂಗ್ ಕೂಡ ರಿಲೀಸ್ ಆಗಿದೆ. ಈ ಕಂಟೆಂಟ್​ಗಳು ಇನ್ನೂ ಸಿನಿಮಾ ನೋಡದೇ ಇರೋ ಅಂತಹ ಜನರನ್ನ ಥಿಯೇಟರ್​ನತ್ತ ಕರೆತರಲು ಅಥ್ವಾ ಒಟಿಟಿಯಲ್ಲೇ ಸಿನಿಮಾ ನೋಡಲು ಪ್ರೇರೇಪಿಸ್ತಿವೆ. ಅದೇನೇ ಇರಲಿ, ಕೆಜಿಎಫ್ ನಮ್ಮ ಕನ್ನಡದ ಹೆಮ್ಮೆ, ಭಾರತೀಯ ಚಿತ್ರರಂಗದ ಗರಿಮೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments