Sunday, September 28, 2025
HomeUncategorizedಜಕ್ಕೂರು ಬಡಾವಣೆ ಕಂಪ್ಲೀಟ್ ಕೊಳಚೆ ನೀರಿನಿಂದ ಜಲಾವೃತ

ಜಕ್ಕೂರು ಬಡಾವಣೆ ಕಂಪ್ಲೀಟ್ ಕೊಳಚೆ ನೀರಿನಿಂದ ಜಲಾವೃತ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಾರ್ಯದೆ ಹೆಜ್ಜೆ ಹೆಜ್ಜೆಗೂ ಹಾಳಾಗ್ತಿದೆ. ನಗರವನ್ನು ಉದ್ದಾರ ಮಾಡ್ತೀನಿ ಎನ್ನುತ್ತಿರೋ ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳು ರಾಜಧಾನಿಯ ಮಾರ್ಯಾದೆ ಮೂರು ಕಾಸಿಗೆ ಹರಾಜು ಹಾಕ್ತಿದ್ದಾರೆ.

ಯಸ್ ಬಿಬಿಎಂಪಿ ಕಮಿಷನರ್ ವಾಸ ಮಾಡೋ ಜಕ್ಕೂರು ಲೇಔಟ್‌ನ ಗಲ್ಲಿ ಗಲ್ಲಿಯಲ್ಲಿಯೂ ಒಳಚರಂಡಿ ಮ್ಯಾನ್ ಹೋಲ್ ಕೊಳಚೆ ನೀರು ತುಂಬಿ ಹರಿಯುತ್ತಿದ್ದರೂ ಜಲಮಂಡಳಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಒಳಚರಂಡಿಗಳನ್ನ ನಿರ್ಮಾಣ ಮಾಡಿದ್ದರೂ ಮ್ಯಾನ್ ಹೋಲ್ ಗಳಲ್ಲಿ ಕೊಳಚೆ ನೀರು ರಸ್ತೆಗಳಿಗೆ ಹರಿಯುವುದು ಮಾತ್ರ ನಿಂತಿಲ್ಲ. ಕಳೆದ ಹಲವು ದಿನಗಳಿಂದ ಬಿಬಿಎಂಪಿ ಕಮಿಷನರ್ ವಾಸ ಮಾಡೋ ಜಕ್ಕೂರು ಅಪಾರ್ಟ್ಮೆಂಟ್ ಸುತ್ತಮುತ್ತಲಿನ ರಸ್ತೆಗಳಿಗೆ ನದಿಯಂತೆ ಕೊಳಚೆ ನೀರು ಹರಿದು ಇಡೀ ಬಡಾವಣೆ ದುರ್ವಾಸನೆ ಬೀರುತ್ತಿದೆ.

ಭೂಮಿ ಒಳಗೆ ಪೈಪ್ ಗಳ ಮೂಲಕ ಹರಿಯಬೇಕಾದ ಕೊಳಚೆ ನೀರು ಮ್ಯಾನ್ ಹೋಲ್ ಗಳ ಮೂಲಕ ನಿತ್ಯ ಹರಿಯುತ್ತಿದೆ. ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಕಟ್ಟಡಗಳಿಂದ ಬರುವ ತ್ಯಾಜ್ಯ ನೀರು ರಸ್ತೆಗಳಲ್ಲಿ ಹರಿದು ಜಕ್ಕೂರು ಕೆರೆ ಸೇರಿ ಪಾಶಾಣವಾಗ್ತಿದೆ‌. ಈ ಬಗ್ಗೆ ಎಷ್ಟೇ ಅಧಿಕಾರಿಗಳ ಗಮನಕ್ಕೆ ತಂದ್ರೂ ಕ್ಯಾರೇ ಅಂತಿಲ್ಲ ಅಂತಾ ನಿವಾಸಿಗಳು ಕಿಡಿ ಕಾಡ್ತಿದ್ದಾರೆ.

ಇನ್ನು ಪವರ್ ಟಿವಿ ಈ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಇದ್ರ ಬೆನ್ನಲ್ಲೇ ಜಲಮಂಡಳಿ ಇಂಜಿನಿಯರ್ ಗಳ ಟೀಂ ಸ್ಥಳಕ್ಕೆ ಖುದ್ದು ಭೇಟಿ ಮಾಡಿ ಪರಿಶೀಲನೆ ಮಾಡಿದೆ. ಸ್ಯಾನಿಟರಿ ನೀರು ಚರಂಡಿ ಮೂಲಕ ಕೆರೆಗೆ ಸೇರುತ್ತಿರುವುದು ದೃಢಪಟ್ಟಿದೆ.

ಮತ್ತೊಂದೆಡೆ ಕೊಳಕು ನೀರಿನಿಂದಾಗಿ ಸುತ್ತಲಿನ ಮನೆಗಳಲ್ಲಿ ಸೊಳ್ಳೆ ಕಾಟ ವಿಪರೀತವಾಗಿದೆ. ತ್ಯಾಜ್ಯ ನೀರಿನಿಂದ ಕೆರೆ ಪರಿಸರ ಹಾಳಾಗಿದ್ದು, ರೋಗ-ರುಜಿನ ಬರುವ ಮುನ್ನ ಪಾಲಿಕೆ, ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಬೇಕಿದೆ. ಒಟ್ಟಿನಲ್ಲಿ ಜಲಮಂಡಳಿ ಶ್ರೀಮಂತರಿಗೆ ರಕ್ಷೆ ಬಡವರಿಗೆ ಶಿಕ್ಷೆ ನೀಡುವ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿ ಕಡೆ ಬೊಟ್ಟು ಮಾಡ್ತಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

RELATED ARTICLES
- Advertisment -
Google search engine

Most Popular

Recent Comments

ylichnie kashpo_daKn on
SamuelDoulk on
Michaeljet on
gorshok s avtopolivom_qqot on
tele_bmmr on
Mohammeddlix on
tele_hfmr on
gorshok s avtopolivom_mqMl on
GeorgeEvisy on
Michaelhop on
Michaelhop on
Michaelcib on
dizainerskie kashpo_uimr on
Rogerciz on
Rogerciz on
XRumer23jinly on