Monday, August 25, 2025
Google search engine
HomeUncategorizedJDS ಪಕ್ಷದ ಮೊದಲ ಪಟ್ಟಿ ಅಂತಿಮವಲ್ಲ-ಹೆಚ್​ಡಿ ದೇವೇಗೌಡ

JDS ಪಕ್ಷದ ಮೊದಲ ಪಟ್ಟಿ ಅಂತಿಮವಲ್ಲ-ಹೆಚ್​ಡಿ ದೇವೇಗೌಡ

ಮೈಸೂರು : ರಾಜ್ಯದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ಲಾನ್ ರೂಪಿಸಿ ಮತದಾರರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ.

ಸದ್ಯ JDS ಪಕ್ಷದ ಮೊದಲ ಪಟ್ಟಿ ಅಂತಿಮ ಅಲ್ಲ. ಪ್ರತಿದಿನ ಪಟ್ಟಿ ಬದಲಾವಣೆ ಆಗುತ್ತೆ, ನಿತ್ಯ ಸರ್ವೆ ನಡೆಯುತ್ತಿದೆ ಎಂದು ಮೈಸೂರಿನಲ್ಲಿ JDS ವರಿಷ್ಠ H.D. ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ, ಮಾಜಿ ಪ್ರಧಾನಿ H.D. ದೇವೇಗೌಡ ಅವರು ಜನವರಿಯಿಂದ ಚುನಾವಣಾ ಪ್ರಚಾರಕ್ಕೆ ಇಳಿಯುವುದಾಗಿ ತಿಳಿಸಿದರು. ಈ ವೇಳೆ JDS​​ ಪಕ್ಷದ ಮೊದಲ ಪಟ್ಟಿ ಅಂತಿಮ ಅಲ್ಲ. ಪ್ರತಿದಿನ ಪಟ್ಟಿ ಬದಲಾವಣೆ ಆಗುತ್ತೆ, ನಿತ್ಯ ಸರ್ವೆ ನಡೆಯುತ್ತಿದೆ. ಕುಮಾರಸ್ವಾಮಿ ಜೊತೆ ಶಿವಲಿಂಗೇಗೌಡ ಮಾತನಾಡಿದ್ದಾರೆ. ದ್ವಂದ್ವ ಇದೆ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಪ್ರೀತಂಗೌಡಗೆ ಯಡಿಯೂರಪ್ಪ ಸರ್ಕಾರ ಸರ್ವಶಕ್ತಿ ಕೊಟ್ಟಿದೆ. ಕಾಮಗಾರಿಗಳಿಗೆ ನೀಡಿದ ಅನುದಾನದಿಂದ ಹಣ ಸಂಪಾದಿಸಿದ್ದಾರೆ.

ಪ್ರೀತಂಗೌಡ ಬೆದರಿಕೆಗೆ ನಾವು ಬಗ್ಗುವುದಿಲ್ಲ. ಹಾಸನ ನಗರದಲ್ಲಿ JDSನಿಂದ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಮಾಜಿ ಸಿಎಂ H.D ಕುಮಾರಸ್ವಾಮಿ, ಮಾಜಿ ಸಚಿವ H.D.ರೇವಣ್ಣ ಚರ್ಚಿಸಿ ಅಂತಿಮವಾಗಿ ನಿರ್ಣಯ ಮಾಡ್ತಾರೆ. ಯಾರು ಮುಖ್ಯಮಂತ್ರಿಯಾಗಬೇಕೆಂಬುದು ಜನ ತೀರ್ಮಾನಿಸ್ತಾರೆ ಎಂದರು.

RELATED ARTICLES
- Advertisment -
Google search engine

Most Popular

Recent Comments