Saturday, September 13, 2025
HomeUncategorizedಸಿಎಂ ಏಕನಾಥ ಶಿಂಧೆ ಪ್ರತಿಕೃತಿ ದಹಿಸಿ ಆಕ್ರೋಶ

ಸಿಎಂ ಏಕನಾಥ ಶಿಂಧೆ ಪ್ರತಿಕೃತಿ ದಹಿಸಿ ಆಕ್ರೋಶ

ಬೆಂಗಳೂರು : ಒಂದಲ್ಲ.. ಒಂದು ಕ್ಯಾತೆ ತೆಗೆದು ಕಿರಿಕ್​ ಮಾಡೋ MES ಪುಂಡಾಟ ಮತ್ತೆ ಮುಂದುವರಿದಿದೆ.. ಗಡಿ, ಭಾಷೆ ವಿಚಾರವಾಗಿ ಮಹಾರಾಷ್ಟ್ರದ ಪುಂಡಾಟಿಕೆ ವಿರುದ್ಧ ಕುಂದಾನಗರಿನಲ್ಲಿ ಅಕ್ಷರಶಃ ಆಕ್ರೋಶದ ಕಹಳೆಯೇ ಮೊಳಗಿದೆ.. ಪುಂಡಾಟ ಮೆರೆದ ಪುಂಡರ ವಿರುದ್ಧ ಬೆಳಗಾವಿಯಲ್ಲಿ ಕನ್ನಡಿಗರು ಆಕ್ರೋಶ ಹೊರ ಹಾಕಿದ್ರು.. ಮಹಾಂತೇಶ ನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ವಾಹನಗಳು ಕರ್ನಾಟಕಕ್ಕೆ ಸಂಚರಿಸಿದಂತೆ ತಡೆದ್ರು.. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅಣುಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಅಸ್ತವ್ಯಸ್ತವಾಯಿತು. ಈ ವೇಳೆ ಮಹಾರಾಷ್ಟ್ರ ವಾಹನಗಳಿಗೆ ಮಸಿ ಬಳಿದು ಆಕ್ರೋಶ ಹೊರಹಾಕಿದರು.

ಇತ್ತ, ಬೆಳಗಾವಿಯಲ್ಲಿ ಆಕ್ರೋಶದ ಕಹಳೆ ಮೊಳಗಿದ್ರೆ.. ಅತ್ತ ಮಹಾರಾಷ್ಟ್ರದ ಜತ್ತ ತಾಲೂಕಿನ ಗಡಿಯಲ್ಲಿನ ಹಳ್ಳಿಗಳನ್ನ ಕರ್ನಾಟಕಕ್ಕೆ ಪಡೆಯುತ್ತೇವೆ. ಒಂದಿಂಚು ಜಾಗ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲ್ಲ ಎಂದಿದ್ದ ಸಿಎಂ ಬೊಮ್ಮಾಯಿ ಹೇಳಿಕೆಗೆ ಧನ್ಯವಾದ ಹೇಳಿ ಕರ್ನಾಟಕಕ್ಕೆ ಬರಲು ಉತ್ಸಾಹ ತೋರಿಸಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ಸಿಎಂ ಬೊಮ್ಮಾಯಿ ಕಸರತ್ತು ನಡೆಸ್ತಿದ್ದಾರೆ. ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕ ಪರ ವಾದ ಮಂಡನೆ, ಸರ್ಕಾರದ ಮುಂದಿನ ನಿಲುವುಗಳ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.

ಅಣ್ಣಪ್ಪ ಬಾರ್ಕಿ, ಪವರ್ ಟಿವಿ, ಬೆಳಗಾವಿ

RELATED ARTICLES
- Advertisment -
Google search engine

Most Popular

Recent Comments