Wednesday, August 27, 2025
HomeUncategorizedನಾವೂ ನಮ್ಮ ರಾಜ್ಯದ ಗಡಿ, ಜನರನ್ನ ಉಳಿಸಿಕೊಳ್ಳುತ್ತೇವೆ : ಸಿಎಂ ಬೊಮ್ಮಾಯಿ

ನಾವೂ ನಮ್ಮ ರಾಜ್ಯದ ಗಡಿ, ಜನರನ್ನ ಉಳಿಸಿಕೊಳ್ಳುತ್ತೇವೆ : ಸಿಎಂ ಬೊಮ್ಮಾಯಿ

ಬೆಂಗಳೂರು : ಒಂದಲ್ಲಾ ಒಂದು ರೀತಿಯಲ್ಲಿ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ತಂಟೆ ತಕರಾರು ಮಾಡುತ್ತಲ್ಲೇ ಇದೆ. ಈ ಬಗ್ಗೆ CM ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಭಾರತ ರಾಜ್ಯಗಳಿಂದ ಕೂಡಿರುವುದು, ಪ್ರತಿ ರಾಜ್ಯ ಮತ್ತು ಉಭಯ ರಾಜ್ಯಗಳು ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಕಾನೂನಲ್ಲಿ ಸ್ಪಷ್ಟವಾಗಿ ಹೇಳುತ್ತದೆ,ಕಾನೂನು ಎಲ್ಲರಿಗೂ ಒಂದೇ.ರಾಜ್ಯಗಳನ್ನ ಬೇರ್ಪಡಿಸುವ ಕೆಲಸವನ್ನ ಮಹಾರಾಷ್ಟ್ರ ಸರ್ಕಾರ ಮೊದಲು ನಿಲ್ಲಿಸಬೇಕು ಈ ಬಗ್ಗೆ ಯಾರಾದ್ರು ಗಲಾಟೆ ಮಾಡಿದ್ರೆ ಖಂಡಿಸುತ್ತೇನೆ. ಮಹಾರಾಷ್ಟ್ರ ಸಿಎಂ ಹಾಗೂ ಹೋಂ ಮಿನಿಸ್ಟರ್ ಕೂಡಲೇ ಕ್ರಮಜರುಗಿಸಬೇಕು.

ಇನ್ನು, ಮಹಾರಾಷ್ಟ್ರ 2004 ಪ್ರಕರಣ ದಾಖಲಿಸಿದ್ದು. ನಾವೂ ಆಗಿಲಿಂದಲೂ ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೀದ್ದೇವೆ, ನಮಗೆ ನಂಬಿಕೆ ಇದೆ.ನ್ಯಾಯ ನಮ್ಮ ಪರ ಇದೆ. ನಮ್ಮ ರಾಜ್ಯದ ಗಡಿ, ಜನರನ್ನಉಳಿಸಿಕೊಳ್ಳುತ್ತೇವೆ .ನಾವು ಸುಪ್ರೀಂಕೋರ್ಟ್ ಮುಂದೆ ಕಾನೂನು ಸಮರ ಮಾಡ್ತಿದ್ದೇವೆ. ಮಹರಾಷ್ಟ್ರದ ಅರ್ಜಿ ಮೈಂಟೇನಬಲ್ ಅಲ್ಲ ಎಂದು ಆರ್ಟಿಕಲ್ ೩ ರಲ್ಲಿ ಸ್ಪಷವಾಗಿ ಹೇಳುತ್ತದೆ ಅಂತಿಮವಾಗಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಇತ್ಯರ್ಥ ಮಾಡಲಿದೆ. ನಾವೂ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಾನೂನು ಸಮರ ಮುಂದುವರಿಸುತ್ತೇವೆ.ಮುಂದಿನ ವಾರ ಆಲ್ ಪಾರ್ಟಿ ಮೀಟಿಂಗ್ ಕರೆದು ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular

Recent Comments