Sunday, August 24, 2025
Google search engine
HomeUncategorizedED ಮುಖ್ಯಸ್ಥರ ಅಧಿಕಾರದ ಅವಧಿ ಮೂರನೇ ಬಾರಿಗೆ ವಿಸ್ತರಣೆ

ED ಮುಖ್ಯಸ್ಥರ ಅಧಿಕಾರದ ಅವಧಿ ಮೂರನೇ ಬಾರಿಗೆ ವಿಸ್ತರಣೆ

ನವದೆಹಲಿ: ಜಾರಿ ನಿರ್ದೇಶನಾಲ(ಇಡಿ)ಯದ ಮುಖ್ಯಸ್ಥರಾಗಿ ಮೂರನೇ ಬಾರಿಗೆ ಮತ್ತೊಂದು ಅವಧಿಗೆ ಎಸ್‌.ಕೆ ಮಿಶ್ರಾ ಅವರನ್ನ ನೇಮಕ ಮಾಡಿ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.

ಈ ವಿಸ್ತರಣೆಯೊಂದಿಗೆ, ಈ ಮೂಲಕ ಮುಂದಿನ ಐದು ವರ್ಷಗಳನ್ನು ಅವರ ಇಡಿ ಮುಖ್ಯಸ್ಥರಾಗಿ ಪೂರ್ಣಗೊಳಿಸುತ್ತಾರೆ. 2020 ರಲ್ಲಿ ಎಸ್​.ಕೆ ಮಿಶ್ರಾ ಅವರು ಸೇವೆಯಲ್ಲಿ ಒಂದು ವರ್ಷದ ಅವಧಿಗೆ ವಿಸ್ತರಣೆಯನ್ನು ಪಡೆದ ಮೊದಲಿಗರಾದರು. ತನಿಖಾ ಸಂಸ್ಥೆಯ ಮುಖ್ಯಸ್ಥರ ಅಧಿಕಾರಾವಧಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ಕಾರ್ಯಕಾರಿ ಆದೇಶವನ್ನು ಅಂಗೀಕರಿಸಿದ ಕೆಲವು ದಿನಗಳ ನಂತರ ಎರಡನೇ ವಿಸ್ತರಣೆಯಾಗಿದೆ.

ಯಾವುದೇ ಕೇಂದ್ರ ಏಜೆನ್ಸಿಗಳ ಮುಖ್ಯಸ್ಥರು ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿದ್ದರು. ಸುಗ್ರೀವಾಜ್ಞೆ ಹೊರಡಿಸುವುದರೊಂದಿಗೆ ಅವರಿಗೆ ಐದು ವರ್ಷಗಳ ಹುದ್ದೆಯನ್ನು ನೀಡಲು ಸಾಧ್ಯವಾಗಿಸಿತು. ನ. 18 ರಂದು ನಿವೃತ್ತಿಯಾಗುತ್ತಾರೆ ಎನ್ನಾವಾಗ ನಿನ್ನೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಈ ಮೊದಲಿನ ನ. 13, 2020 ರಂದು ಮೊದಲು ಬಂದ ಅವರ ಮೊದಲ ವಿಸ್ತರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆದರೆ ನ್ಯಾಯಾಧೀಶರು ಮಧ್ಯಪ್ರವೇಶಿಸಲು ನಿರಾಕರಿಸಿದರು.

RELATED ARTICLES
- Advertisment -
Google search engine

Most Popular

Recent Comments