Monday, August 25, 2025
Google search engine
HomeUncategorizedಹೇಗಿದೆ ಪಡ್ಡೆಹುಲಿಯ​ ‘ರಾಣ’..? ಪ್ರೇಕ್ಷಕ ಪ್ರಭು ಏನಂದ..?

ಹೇಗಿದೆ ಪಡ್ಡೆಹುಲಿಯ​ ‘ರಾಣ’..? ಪ್ರೇಕ್ಷಕ ಪ್ರಭು ಏನಂದ..?

ಮೂರೂವರೆ ವರ್ಷಗಳ ಬಳಿಕ ಸ್ಯಾಂಡಲ್​ವುಡ್ ಪಡ್ಡೆಹುಲಿಯ ಬಾಕ್ಸ್ ಆಫೀಸ್ ಬೇಟೆ ಮತ್ತೆ ಶುರುವಾಗಿದೆ. ಯೆಸ್.. ಶ್ರೇಯಸ್ ಮಂಜು ಮತ್ತೆ ಬೆಳ್ಳಿತೆರೆ ಮೇಲೆ ಮಿಂಚ್ತಿದ್ದಾರೆ. ರಾಣನ ಖದರ್, ಯೂತ್ ಪವರ್ ಹೇಗಿದೆ ಅನ್ನೋದ್ರ ಜೊತೆ ರಾಜ್ಯಾದ್ಯಂತ ಪ್ರೇಕ್ಷಕಪ್ರಭು ಕೊಟ್ಟ ಮಾರ್ಕ್ಸ್ ಎಷ್ಟು ಅನ್ನೋದ್ರ ಡಿಟೈಲ್ಡ್ ರಿವ್ಯೂ ರಿಪೋರ್ಟ್​ ನಿಮ್ಮ ಮುಂದೆ.

  • ಸ್ಯಾಂಡಲ್​ವುಡ್​ಗೆ ಮತ್ತೊಬ್ಬ ಌಕ್ಷನ್ ಹೀರೋ ಮಾಸ್ ಎಂಟ್ರಿ

ಪಡ್ಡೆಹುಲಿಯಾಗಿ ಸ್ಯಾಂಡಲ್​ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟು, ಭರವಸೆಯ ಸ್ಟಾರ್ ಆಗೋ ಮನ್ಸೂಚನೆ ನೀಡಿದ್ದ ನಟ ಶ್ರೇಯಸ್ ಮಂಜು, ಕೊರೋನಾ ಎಲ್ಲಾ ಮುಗಿಸಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ರಾಣ ಚಿತ್ರದ ಮೂಲಕ ರಾಕ್ ಮಾಡ್ತಿರೋ ಶ್ರೇಯಸ್​ಗೆ ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ರಾಜ್ಯಾದ್ಯಂತ ಬಿಗ್ ಓಪನಿಂಗ್ ಪಡೆದಿರೋ ರಾಣ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮನರಂಜನೆ ನೀಡ್ತಿದೆ.

ಮೊದಲ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಶ್ರೇಯಸ್, ಇದೀಗ ಏಕ್ಧಮ್ ಮಾಸ್ ಹೀರೋ ಆಗಿ ಌಕ್ಷನ್ ಖದರ್ ತೋರಿದ್ದಾರೆ. ಇಷ್ಟಕ್ಕೂ ಸಿನಿಮಾ ಹೇಗಿದೆ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ರಾಣ ಸ್ಟೋರಿಲೈನ್

ಅಪ್ಪನ ಕೊನೆಯ ಆಸೆಯಂತೆ ಪೊಲೀಸ್ ಆಫೀಸರ್ ಆಗಲು ಸಿಟಿಗೆ ಬರೋ ನಾಯಕನಟ ರಾಣ. ಊರಲ್ಲೇ ಪ್ರಿಯಾ ಲವ್​ನಲ್ಲಿ ಬೀಳೋ ನಾಯಕ, ಪ್ರೀತಿ ಜೊತೆ ಪೊಲೀಸ್ ಗೆಲಸ ಗೆಲ್ಲಲು ಮುಂದಾಗ್ತಾನೆ. ಸಿಟಿಗೆ ಬರ್ತಿದ್ದಂತೆ ಕಪಾಲಿ ಅನ್ನೋ ಗ್ಯಾಂಗ್​ಸ್ಟರ್​​ ಹಾಗೂ ಆತನ ಉಗ್ರಾವತಾರ ಪರಿಚಯ ಆಗುತ್ತೆ. ತಾನು ಪೊಲೀಸ್ ಆಗಿ ಮಾಡೋ ಕೆಲಸ, ಖಾಕಿ ಧರಿಸೋಕೂ ಮೊದ್ಲೇ ಪರೋಕ್ಷವಾಗಿ ಕಪಾಲಿ ಟೀಂನ ಮಟ್ಟ ಹಾಕಲು ಕೈಹಾಕೋ ನಾಯಕನಟ. ಅಷ್ಟರಲ್ಲೇ ಕಪಾಲಿಯನ್ನ ಮುಗಿಸೋ ಅನಾಮಿಕ.

ಟ್ಯಾಕ್ಸಿ ಡ್ರೈವರ್ ಆಗಿದ್ದುಕೊಂಡು ಪೊಲೀಸ್ ಅಕಾಡೆಮಿಯಲ್ಲಿ ಟ್ರೈನ್ ಆದ ರಾಣನೇ ಕಪಾಲಿಯನ್ನ ಹೊಡೆದ ಅಂತ ರಾಣನ ಮೇಲೆ ಎರಗುವ ಕಪಾಲಿ ಸಹೋದರ ಸೂರಿ. ಆ ಮಧ್ಯೆ ರಾಣನ ಗೆಳೆಯನನ್ನ ಬಲಿ ಪಡೆಯೋ ಸೂರಿ. ಕೊನೆಗೆ ಕಪಾಲಿಯನ್ನ ಹೊಡೆದದ್ದು ಯಾರು..? ಆತ ರಾಣಾನೇನಾ ಅಥ್ವಾ ಬೇರೆನಾ..? ಕೊನೆಗೆ ಸೂರಿ ಕಥೆ ಏನಾಗುತ್ತೆ ಅನ್ನೋದೇ ಚಿತ್ರದ ಸ್ಟೋರಿ ಲೈನ್.

ರಾಣ ಆರ್ಟಿಸ್ಟ್ ಪರ್ಫಾಮೆನ್ಸ್

ಶ್ರೇಯಸ್ ಮಂಜು ನಟನೆಯಲ್ಲಿ ಪಕ್ವತೆ ಎದ್ದು ಕಾಣ್ತಿದೆ. ಡ್ಯಾನ್ಸ್, ಫೈಟ್ಸ್, ಸ್ಟೈಲು ಮ್ಯಾನರಿಸಂನಿಂದ ಶಿಳ್ಳೆ ಚಪ್ಪಾಳೆ ತರಿಸ್ತಾರೆ ಶ್ರೇಯಸ್. ಮಾರ್ಷಲ್ ಆರ್ಟ್ಸ್ ಕರಗತ ಮಾಡಿಕೊಂಡಿರೋ ಶ್ರೇಯಸ್, ರಿಯಲ್ ಸ್ಟಂಟ್ಸ್​ನಿಂದ ಈ ಚಿತ್ರದಲ್ಲೂ ಶಹಬ್ಬಾಸ್ ಅನಿಸಿಕೊಂಡಿದ್ದಾರೆ. ಒಟ್ಟಾರೆ ಕನ್ನಡಕ್ಕೆ ಮತ್ತೊಬ್ಬ ಮಾಸ್ ಹೀರೋ ಸಿಕ್ಕ ಅನ್ನೋ ಭರವಸೆ ಮೂಡಿಸಿದ್ದಾರೆ.

ರೀಷ್ಮಾ ನಾಣಯ್ಯ ಗ್ಲಾಮರ್ ಚಿತ್ರಕ್ಕೆ ಮತ್ತಷ್ಟು ಜೋಶ್ ನೀಡಿದ್ದು, ಆಕೆಯ ಜೊತೆ ರಜನಿ ಅನ್ನೋ ಪಾತ್ರದ ಮೂಲಕ ಹೊಸ ಪ್ರತಿಭೆ ಗಮನ ಸೆಳೆಯಲಿದ್ದಾಳೆ. ಇನ್ನು ಕೋಟೆ ಪ್ರಭಾಕರ್, ಮೋಹನ್ ಅನ್ನೋ ಖಡಕ್ ಖಳನಾಯಕನ ಪಾತ್ರದಾರಿ ಅಬ್ಬರಿಸಿದ್ದಾರೆ. ಅಶೋಕ್ & ಗಿರಿ ಇಬ್ಬರೂ ನಾಯಕನಟನ ಗೆಳೆಯನ ಪಾತ್ರಗಳಲ್ಲಿ ಸ್ನೇಹದ ಮಹತ್ವ ಸಾರಿದ್ದಾರೆ.

ರಾಣ ಪ್ಲಸ್ ಪಾಯಿಂಟ್ಸ್

ಶ್ರೇಯಸ್ ಮಂಜು ನಟನೆ

ಸಾಂಗ್ಸ್ & ಌಕ್ಷನ್ ಸೀಕ್ವೆನ್ಸ್

ರೀಷ್ಮಾ, ರಜನಿ ಗ್ಲಾಮರ್

ಸೆಕೆಂಡ್ ಹಾಫ್​ನಲ್ಲಿರೋ ಟ್ವಿಸ್ಟ್ & ಟರ್ನ್ಸ್

ರಾಣ ಮೈನಸ್ ಪಾಯಿಂಟ್ಸ್

ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿರೋ ನಿರ್ದೇಶಕ ನಂದಕಿಶೋರ್, ಈ ಚಿತ್ರ ಕೂಡ ತುಂಬಾ ರಿಚ್ ಆಗಿಯೇ ಕಟ್ಟಿಕೊಟ್ಟಿದ್ದಾರೆ. ಆದ್ರೆ ಕಥೆ ಮೇಲೆ ಕೊಂಚ ಜಾಸ್ತಿ ಎಫರ್ಟ್​ ಹಾಕಿದ್ರೆ ಇದು ಅದ್ಭುತ ಮಾಸ್ ವೆಂಚರ್ ಆಗ್ತಿತ್ತು. ಮೊದಲಾರ್ಧ ಮಂದಗತಿಯಲ್ಲಿ ಸಾಗುತ್ತೆ ಹಾಗೂ ಸವಕಲು ಕಥೆ ಅನ್ನೋದು ಬಿಟ್ರೆ ದ್ವಿತಿಯಾರ್ಧದ ವೇಗ ಆ ಕೊರಗನ್ನ ನೀಗಿಸುತ್ತೆ.

ರಾಣಗೆ ಪವರ್ ಟಿವಿ ರೇಟಿಂಗ್: 3/5

ರಾಣ ಫೈನಲ್ ಸ್ಟೇಟ್​ಮೆಂಟ್

ಕಮರ್ಷಿಯಲ್ ಎಲಿಮೆಂಟ್ಸ್​ ಇರೋ ಪಕ್ಕಾ ಎಂಟರ್​ಟೈನರ್ ಸಿನಿಮಾ ಸ್ಯಾಂಡಲ್​ವುಡ್ ಅಂಗಳದಲ್ಲಿ ಇತ್ತೀಚೆಗೆ ಯಾವುದೂ ಬರಲಿಲ್ಲ. ಆದ್ರೆ ರಾಣ ಆ ಎಲ್ಲಾ ಕೊರಗನ್ನ ನೀಗಿಸಲಿದೆ. ಕಾರಣ ಇಲ್ಲಿ ಮಾಸ್ ಎಲಿಮೆಂಟ್ಸ್ ಜೊತೆ ಫ್ಯಾಮಿಲಿ ಎಮೋಷನ್ಸ್ ಇದೆ. ಯೂತ್ ಗೋಲ್ ಇದೆ. ಬೆಂಗಳೂರು ಸಿಟಿಯಲ್ಲಿ ನಡೆಯೋ ಭೂಗತಲೋಕವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗುಜ್ಜಾಲ್ ಪುರುಷೋತ್ತಮ್​ರ ಪ್ರೊಡಕ್ಷನ್ ಕ್ವಾಲಿಟಿ ಇಂಪ್ರೆಸ್ಸೀವ್ ಆಗಿದೆ. ನಂದಕಿಶೋರ್ ಅವ್ರ ಪಾತ್ರಗಳ ಆಯ್ಕೆ, ಅವ್ರಿಂದ ಪರ್ಫಾಮೆನ್ಸ್ ತೆಗೆದಿರೋ ಪರಿ ವ್ಹಾವ್ ಫೀಲ್ ಕೊಡುತ್ತೆ. ಒಟ್ಟಾರೆ ಈ ವಾರಾಂತ್ಯಕ್ಕೆ ಥಿಯೇಟರ್ ಅಂಗಳಕ್ಕೆ ಹೋಗೋ ಮನಸ್ಸು ಮಾಡೋರು ಅತೀವ ನಿರೀಕ್ಷೆಗಳಿಲ್ಲದೆ ಒಮ್ಮೆ ರಾಣ ಸಿನಿಮಾನ ತೆರೆಮೇಲೆ ನೋಡಿ ಖುಷಿ ಪಡಬಹುದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments