Tuesday, September 2, 2025
HomeUncategorizedಗ್ರಾಮೀಣ ಠಾಣೆಯಲ್ಲಿ ಆರೋಪಿ ಕಸ್ಟೋಡಿಯಲ್ ಡೆತ್

ಗ್ರಾಮೀಣ ಠಾಣೆಯಲ್ಲಿ ಆರೋಪಿ ಕಸ್ಟೋಡಿಯಲ್ ಡೆತ್

ಬೆಳಗಾವಿ: ಬೆಳಗಾವಿಯ ಗ್ರಾಮೀಣ ಠಾಣೆಯಲ್ಲಿ ಆರೋಪಿ ಕಸ್ಟೋಡಿಯಲ್ ಡೆತ್ ಸಂಬವಿಸಿದ್ದು, ಗಾಂಜಾ ಪ್ರಕರಣದಲ್ಲಿ ವಶಕ್ಕೆ ಪಡೆದ ಆರೋಪಿ ಅನುಮಾನಾಸ್ಪದ ಸಾವು.

ಬೆಳಗಾವಿ ಗ್ರಾಮೀಣ ಪೊಲೀಸರ ವಶದಲ್ಲಿದ್ದ ಬಸನಗೌಡ ಪಾಟೀಲ್(45) ಸಾವು ಸಂಬವಿಸಿದೆ. ಮೃತ ಬಸನಗೌಡ ಪಾಟೀಲ್, ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ನಿವಾಸಿ. ಗಾಂಜಾ ಪ್ರಕರಣದಲ್ಲಿ ಬಸನಗೌಡನ ವಶಕ್ಕೆ ಪಡೆದು ಬೆಳಗಾವಿ ಗ್ರಾಮೀಣ ಠಾಣೆಗೆ ಕರೆತಂದಿದ್ದ ಪೊಲೀಸರು.

ಬೆಲ್ಲದ ಬಾಗೇವಾಡಿಯಿಂದ ಬೆಳಗಾವಿಗೆ ಕರೆತಂದಿದ್ದ ಪೊಲೀಸರು, ವಿಚಾರಣೆ ವೇಳೆ ಅಸ್ವಸ್ಥಗೊಂಡಿದ್ದ ಬಸನಗೌಡ ಪಾಟೀಲ್‌ನನ್ನ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಸನಗೌಡ ಪಾಟೀಲ್ ಸಾವು. ಕಸ್ಟೋಡಿಯಲ್ ಡೆತ್ ಪ್ರಕರಣ ದಾಖಲಿಸಿಕೊಂಡು ಸಿಐಡಿಗೆ ವರ್ಗಾವಣೆ.

RELATED ARTICLES
- Advertisment -
Google search engine

Most Popular

Recent Comments