Tuesday, September 2, 2025
HomeUncategorizedಹಿಂದೂ ಪದದ ಬಗ್ಗೆ ಮಾತನಾಡಿದ್ದ ಸತೀಶ್​ ಜಾರಕಿಹೊಳಿ ವಿರುದ್ಧ ಖಾಸಗಿ ದೂರು ದಾಖಲು

ಹಿಂದೂ ಪದದ ಬಗ್ಗೆ ಮಾತನಾಡಿದ್ದ ಸತೀಶ್​ ಜಾರಕಿಹೊಳಿ ವಿರುದ್ಧ ಖಾಸಗಿ ದೂರು ದಾಖಲು

ಬೆಂಗಳೂರು: ಚಿಕ್ಕೋಡಿಯ ಕಾರ್ಯಕ್ರಮಯೊಂದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಅವರು ಮಾತನಾಡಿ ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಪರ್ಷಿಯನ್‌ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗ ಖಾಸಗಿ ದೂರು ದಾಖಲಾಗಿದೆ.

ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದ್ದು, ವಕೀಲ ದಿಲೀಪ್‌ ಕುಮಾರ್‌ ಅವರು ದಾಖಲಿಸಿದ್ದ ಖಾಸಗಿ ಅರ್ಜಿಯನ್ನು ವಿಚಾರಣೆಗೆ ದಾಖಲಿಸಿಕೊಳ್ಳಲು ಬೆಂಗಳೂರಿನ ಎಂಟನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎನ್‌ ಶಿವಕುಮಾರ್‌ ಅವರು ಆದೇಶಿಸಿದ್ದು, ವಿಚಾರಣೆಯನ್ನು ನವೆಂಬರ್‌ 18ಕ್ಕೆ ಮುಂದೂಡಿದ್ದಾರೆ.

ನಾನು ಮಾತನಾಡಿದ ಹಿಂದೂ ಬಗ್ಗೆ ವಿವಾದಕ್ಕೀಡಾಗಿದೆ. ಅಲ್ಲದೇ, ಅದನ್ನು ತಿರುಚಿ ಅಪಪ್ರಚಾರಗೊಳಿಸಲಾಗುತ್ತಿದೆ. ಆ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೇ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ನನ್ನ ಹೇಳಿಕೆ ಹಿಂಪಡೆಯುತ್ತೇನೆ ಎಂದು ಬುಧವಾರ ಸತೀಶ್​ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments