Saturday, August 30, 2025
HomeUncategorizedನ. 8ರಂದು ತಿಮ್ಮಪ್ಪನ ದರ್ಶನವಿಲ್ಲ

ನ. 8ರಂದು ತಿಮ್ಮಪ್ಪನ ದರ್ಶನವಿಲ್ಲ

ನ. 8ರಂದು ಚಂದ್ರಗ್ರಹಣ ಹಿನ್ನೆಲೆ ಸುಮಾರು 12 ಗಂಟೆಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ನ. 8 ಮಂಗಳವಾರ ಮಧ್ಯಾಹ್ನ 2.39ರಿಂದ 6.27ರವರೆಗೆ ಚಂದ್ರಗ್ರಹಣವಿದ್ದು, ಈ ಕಾರಣಕ್ಕಾಗಿ ಶ್ರೀವಾರಿ ದೇವಸ್ಥಾನದ ಬಾಗಿಲುಗಳನ್ನು ಬೆಳಗ್ಗೆ 8.40 ರಿಂದ ಸಂಜೆ 7.20 ರವರೆಗೆ ಮುಚ್ಚಲಾಗುತ್ತಿದೆ. ಚಂದ್ರಗ್ರಹಣ ಪೂರ್ಣ ಮುಗಿದ ನಂತರ ರಾತ್ರಿ 8:30ಕ್ಕೆ ದೇವಾಯವನ್ನು ಮತ್ತೆ ತೆರೆಯಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಹಣ ಮುಗಿಯುವವರೆಗೆ ಅಡುಗೆ ಮಾಡುವುದಿಲ್ಲ. ತಿರುಮಲದಲ್ಲಿರುವ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಭವನ, ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಅನ್ನಪ್ರಸಾದ ವಿತರಣೆ ಕೂಡ ಇರುವುದಿಲ್ಲ.ಇನ್ನು ಗ್ರಹಣದ ನಂತರ ದೇಗುಲದ ಒಳಗೆ, ಹೊರಗೆ ಶುದ್ಧಿ ಕಾರ್ಯ ಮಾಡಿ ಮತ್ತೆ ತೆರೆಯಲಾಗುವುದು. ತಿರುಪತಿ ತಿಮ್ಮಪ್ಪನ ದರ್ಶನ ಮಾಡಬಯಸುವ ಭಕ್ತರು ಈ ಮಾಹಿತಿಯನ್ನು ತಿಳಿದು ಪ್ರಯಾಣಿಸಬೇಕು ಎಂದು ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments