Monday, August 25, 2025
Google search engine
HomeUncategorizedಶಾಸಕ ರೇಣುಕಾಚಾರ್ಯ ಅಣ್ಣನ ಮಗನ ಮೃತದೇಹ ಪತ್ತೆ.!

ಶಾಸಕ ರೇಣುಕಾಚಾರ್ಯ ಅಣ್ಣನ ಮಗನ ಮೃತದೇಹ ಪತ್ತೆ.!

ಣಗೆರೆ; ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರ ಪುತ್ರ ಕಾಣೆಯಾದ ಪ್ರಕರಣಕ್ಕೆ ಟ್ವಿಸ್ಟ್​​ ಸಿಕ್ಕಿದ್ದು, ಕಾಲುವೆಯಲ್ಲಿ ಕಾರಿಜ ಜತೆಗೆ ಕಾಣೆಯಾದ ವ್ಯಕ್ತಿ ಮೃತದೇಹ ಪತ್ತೆಯಾಗಿದೆ.

ಕಳೆದ 5 ದಿನಗಳ ಹಿಂದೆ ರೇಣುಕಾಚಾರ್ಯ ಅಣ್ಣನ ಮಗ ಕಾರು ಸಮೇತ ಕಾಣೆಯಾಗಿದ್ದ​, ಈಗ ಕಾರು ಹೊನ್ನಾಳಿಯ ಹೆಚ್​.ಕಡೆದಕಟ್ಟೆ ಪಕ್ಕದ ಕಾಲುವೆಯಲ್ಲಿ ಪತ್ತೆಯಾಗಿದೆ. ಮೇಲೆ ತೆಗೆಯಲಾದ ಕಾರಿನಲ್ಲಿ ರೇಣುಕಾಚಾರ್ಯ ಅಣ್ಣನ ಮಗನ ಶವ ಪತ್ತೆಯಾಗಿದೆ.

ಇನ್ನು ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್​ ಅವರನ್ನ ಏನಾದ್ರೂ ಕಿಡ್ನಾಪ್​ ಮಾಡಿ ಕೊಲೆ ಮಾಡಲಾಯಿತಾ? ಆಕಸ್ಮಿಕವಾಗಿ ತಡೆಗೊಡೆಗೆ ಡಿಕ್ಕಿ ಹೊಡೆದು ಕಾಲುವೆಗೆ ಕಾರು ಬಿತ್ತಾ ಎಂಬ ಪ್ರಶ್ನೆ ವ್ಯಕ್ತವಾಗಿದೆ.

ಕಳೆದ ನಾಲ್ಕು ದಿನದ ಹಿಂದ ಶಾಸಕ ರೇಣುಕಾಚಾರ್ಯ ಅಣ್ಣನ ಮಗ 27 ವರ್ಷದ ಚಂದ್ರಶೇಖರ್ ವಿನಯ್ ಗುರೂಜಿ ಅವರನ್ನು ಭೇಟಿಯಾಗಲೆಂದು ಭಾನುವಾರ ಶಿವಮೊಗ್ಗ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟಾ ಗಾಡಿಯಲ್ಲಿ ತೆರಳಿದ್ದ. ಅಲ್ಲಿಂದ ವಿನಯ್ ಗುರೂಜಿ ಭೇಟಿ ಮಾಡಿ ಅವರ ಆರ್ಶೀವಾದ ಪಡೆದು, ನಂತರ ಅಲ್ಲಿಂದ ಚಂದ್ರು ಶಿವಮೊಗ್ಗದಲ್ಲಿ ತನ್ನ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಹೊತ್ತು ಅವರೊಂದಿಗೆ ಕಾಲ ಕಳೆದು ಮತ್ತೆ ವಾಪಸ್ ಹೊನ್ನಳಿಗೆ ಬಂದಿದ್ದರು.

ಅಂದೇ ತಡರಾತ್ರಿ 11:30ಕ್ಕೆ ಹೊನ್ನಾಳಿ ಸಂತೆ ಮೈದಾನದಲ್ಲಿ ಚಂದ್ರಶೇಖರ್ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿತ್ತು. ಆದ್ರೆ ಹೊನ್ನಾಳಿಯಿಂದ ಚಂದ್ರಶೇಖರ್ ಮನೆಗೆ ಬಂದಿಲ್ಲ ಎಂದು ಕುಟುಂಬಸ್ಥರು ಹಾಗೂ ಶಾಸಕರು ಕಣ್ಣೀರು ಇಟ್ಟು ಗೋಗೆರೆದಿದ್ದರು.

RELATED ARTICLES
- Advertisment -
Google search engine

Most Popular

Recent Comments