Saturday, August 23, 2025
Google search engine
HomeUncategorizedಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ

ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ

ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಭವಿಷ್ಯ ಅದರದ್ದೇ ಆದ ಮಹತ್ವವಿದೆ. ಅದರಂತೆ ಈ ಭಾರಿ ಕೋಡಿಮಠದ ಶ್ರೀ ಭಯಾನಕ ಭವಿಷ್ಯ ನುಡಿದಿರುವುದು ಎಲ್ಲರಲ್ಲಿಯೂ ಅಚ್ಚರಿಯನ್ನು ಮೂಡಿಸಿದೆ.

ಕೋಡಿಮಠದ ಶ್ರೀಗಳ ಭವಿಷ್ಯವಾಣಿಯಂತೆ, ಮಧ್ಯಬಾಗಿಲಿನಿಂದ ಪ್ರಾರಂಭವಾಗಿ ಕಾರ್ತಿಕ ಮಾರ್ಗಶಿರ, ಜನವರಿ ಪ್ರಥಮದಲ್ಲಿಯೂ ಲೋಕ‌ ಕಂಟಕವಿದೆ ಹಾಗೂ ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ ಇರಬಹುದು. ಭೂಕಂಟಕ ಇರಬಹುದು, ರಾಜಬೀದಿ ಇರಬಹುದು, ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು ಇನ್ನಿತರ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಯಿರುತ್ತದೆ.

ಇಷ್ಟೇಯಲ್ಲದೇ ಮುಂದುವರೆದ ಭಾಗವಾಗಿ ಭವಿಷ್ಯವಾಣಿ, ದೇಹ ಅಶಕ್ತಿಯಿಂದ ದಾರಿಯಲ್ಲಿ ಜನರು ಬಿದ್ದು ಸಾಯಿವುದು. ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ. ಜಾಗತೀಕ ದೋಷ, ರಾಷ್ಟ್ರೀಯ ದೋಷವೂ ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ಈ ಸಂದರ್ಭದಲ್ಲಿ ಎರಡು, ಮೂರು ತಿಂಗಳು ಮನುಷ್ಯರು ದೈವ, ಭಕ್ತಿಯಿಂದ,‌ ನಂಬಿಕೆಯಿಂದ ಇರುವುದು ಬಹಳ ಮುಖ್ಯ ಕಾರ್ತಿಕದವರೆಗೂ ಮಳೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಮಹಾರುದ್ರಜಪವನ್ನು ಪ್ರಾರಂಭ ಮಾಡುತ್ತಿದ್ದೀವಿ ಎಂದು ಕೊಡಿಮಠದ ಸ್ವಾಮಿಜಿ ನುಡಿದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments