Saturday, August 23, 2025
Google search engine
HomeUncategorizedತಂಟೆ-ತಕರಾರು ಮಾಡಿದ್ದಕ್ಕೆ ಕೈ ಕಟ್..!

ತಂಟೆ-ತಕರಾರು ಮಾಡಿದ್ದಕ್ಕೆ ಕೈ ಕಟ್..!

ಬೆಂಗಳೂರು : ಕಳೆದ ತಿಂಗಳ 27ನೇ ತಾರೀಕಿನ ಮಧ್ಯರಾತ್ರಿ ಬ್ಯಾಟರಾಯನಪುರದ ಬಾಪೂಜಿನಗರದಲ್ಲಿ ಸೋಯೆಬ್ ಎಂಬ ವ್ಯಕ್ತಿಯ ಕೈಯನ್ನು ದುಷ್ಕರ್ಮಿಗಳು ಕಟ್ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಪೊಲೀಸ್ರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮುಬಾರಕ್ ಖಾನ್, ಮಹಮ್ಮದ್ ಸಲೀಂ, ಅಬೂಬಕ್ಕರ್ ಸಿದ್ದಿಕಿ ಎಂಬ ಆರೋಪಿಗಳ ಕೈಗೆ ಕೋಳ ತೊಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ಇಲ್ಲಿ ಈ ಮಾರಣಾಂತಿಕ ಹಲ್ಲೆಯ ಹಿಂದೆ ಎರಡು ಕಾರಣ​ಗಳು ಆರೋಪಿಗಳನ್ನು ಪ್ರೇರೇಪಿಸಿತ್ತು.

ಹಲ್ಲೆಗೊಳಗಾದ ಸೋಯೆಬ್ ತನ್ನ ಚಿಕ್ಕಪ್ಪನ ಫ್ಯಾಕ್ಟರಿಯನ್ನು ನೋಡಿಕೊಂಡಿದ್ದ. ಹೀಗಿದ್ದ ಸೋಯೆಬ್ ಆರೋಪಿ ಮುಬಾರಕ್​ನ ಹೆಂಡತಿಯ ತಂಗಿಯನ್ನು ಚುಡಾಯಿಸ್ತಿದ್ದನಂತೆ. ಅಷ್ಟೇ ಅಲ್ಲ ಪ್ರೀತ್ಸೇ ಪ್ರೀತ್ಸೇ ಅಂತ ಪೀಡಿಸೋಕೆ ಶುರು ಮಾಡಿದ್ದನಂತೆ. ಯಾವಾಗ ಸೋಯೆಬ್ ತನ್ನ ನಾದಿನಿಯನ್ನೇ ಚುಡಾಯಿಸೋಕೆ ಶುರುವಾದ್ನೋ ಮುಬಾರಕ್​ನ ಕೋಪ ಎಲ್ಲೆ ಮೀರಿತ್ತು. ಇದೇ ಟೈಮಲ್ಲಿ ಸೋಯೆಬ್ ಮುಬಾರಕ್‌ನ ಸಂಬಂಧಿ ಜ್ಹಿಲಾನ್ ಎಂಬಾತನ ಮೇಲೆ ತನ್ನ ಗ್ಯಾಂಗ್ ಕರೆದುಕೊಂಡು ಬಂದು ಹಲ್ಲೆಯನ್ನು ನಡೆಸಿದ್ದ. ಬೆಂಕಿಗೆ ತುಪ್ಪ ಸುರಿದಂತೆ ಕೆಂಡಾಮಂಡಲನಾದ ಮುಬಾರಕ್, ತನ್ನ ಸಂಗಡಿಗರಾದ ಮಹಮ್ಮದ್ ಸಲೀಂ ಹಾಗೂ ಅಬೂಬಕ್ಕರ್​ನನ್ನು ಸೇರಿಸಿಕೊಂಡು ಸೋಯೆಬ್​ನ ಕೊಲೆಗೈಯಲು ಪ್ಲ್ಯಾನ್ ರೂಪಿಸಿ ಅಟ್ಯಾಕ್ ಕೂಡ ಮಾಡಿಸಿದ್ದ. ಅದೃಷ್ಟವಶಾತ್ ಸೋಯೆಬ್ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.

ಶಿಸ್ತಿನಿಂದ ಬದುಕನ್ನು ಕಟ್ಟಿಕೊಂಡು ತಾನಾಯ್ತು ತನ್ನ ಪಾಡಾಯ್ತು ಅಂತ ಸೋಯೆಬ್ ಕೆಲಸ ಮಾಡಿಕೊಂಡು ಸುಮ್ಮನೆ ಇದ್ದಿದ್ದರೆ ಆತನಿಗೆ ಈ ಸ್ಥಿತಿ ಬರ್ತಿರ್ಲಿಲ್ಲ. ಒಟ್ಟಿನಲ್ಲಿ ಏರಿಯಾದಲ್ಲಿ ಹವಾ-ಶೋಕಿ ಮಾಡೋಕೆ ಹೋಗಿ ಇದೀಗ ಸೋಯೆಬ್‌ ಆಸ್ಪತ್ರೆಯ ಬೆಡ್‌ ಮೇಲೆ ನರಳುವಂತಾಗಿರೋದು ವಿಪರ್ಯಾಸವೇ ಸರಿ.

ಅಶ್ವಥ್ ಎಸ್‌.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments