Saturday, August 23, 2025
Google search engine
HomeUncategorizedಭ್ರಷ್ಟಾಚಾರ ಹೆಚ್ಚಲು ಕಾಂಗ್ರೆಸ್ ಕಾರಣ : ಅಶ್ವತ್ಥ್​ ನಾರಾಯಣ್

ಭ್ರಷ್ಟಾಚಾರ ಹೆಚ್ಚಲು ಕಾಂಗ್ರೆಸ್ ಕಾರಣ : ಅಶ್ವತ್ಥ್​ ನಾರಾಯಣ್

ಬೆಂಗಳೂರು : RSS ಮುಖಂಡ ದತ್ತಾತ್ರೇಯ ಹೊಸಬಾಳೆಯವರ ಅಸಮಾನತೆ ಹೇಳಿಕೆ ವಿಚಾರಕ್ಕೆ ಸಚಿವ ಅಶ್ವತ್ಥ್​ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊವಿಡ್-19 ನಂತರ ಸಮಾಜದಲ್ಲಿ ಹಲವು ಚಟುವಟಿಕೆಗಳು ನಿಂತಿದ್ದವು‌. ಆಗ ಬೇಡಿಕೆ ಕೊರತೆ, ನಿಷ್ಕ್ರಿಯತೆ ಆಗಿತ್ತು. ಸವಾಲಿನ ಸಂದರ್ಭದಲ್ಲಿ ತಮ್ಮ ವಹಿವಾಟು ಮಾಡಿಕೊಳ್ಳಲು ಅವಕಾಶ ಇತ್ತು. ಸವಾಲುಗಳನ್ನ ಬಗೆಹರಿಸೋ ಕ್ರಮ ಆಗಿದೆ. ಆರ್ಥಿಕವಾಗಿ ಇಂಗ್ಲೆಂಡ್‌ಗಿಂತ ಮುಂದೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶ ಇದೆ. ಬೇರೆ ಬೇರೆ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಆದ್ರೆ ಭಾರತದಲ್ಲಿ ಆ ಪರಿಸ್ಥಿತಿ ಇಲ್ಲ. ಮುಂದಿನ ದಿನದಲ್ಲಿ ಹೆಚ್ಚಿನ ಉದ್ಯೋಗ ಸಿಗಲಿದೆ.

ಇನ್ನು, ಐಟಿ ವಂಚನೆ ಆಗ್ತಿತ್ತು, ಅದನ್ನ ತಡೆಯಲಾಗಿದೆ. ಎಲ್ಲವನ್ನೂ ಸರಿಪಡಿಸೋ ಮೂಲಕ ಸಮಸ್ಯೆ ಬಗೆಹರಿಸೋ ಕೆಲಸ ಮಾಡಲಾಗ್ತಿದೆ ಎಂದರು. ಇನ್ನು ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಪ್ರಸ್ತುತವಾಗಿರೋ ಪಕ್ಷ. ಜನ ತಿರಸ್ಕಾರ ಮಾಡಿದ್ದಾರೆ‌. ಭಾರತ್ ತೋಡೋ ಮಾಡಿದ್ದಾರೆ. ಸಮಾಜದ ವಿರುದ್ಧವಾಗಿ ನಿಲುವು ತೆಗೆದುಕೊಂಡ್ರು. ಎಲ್ಲಾ ಕ್ಷೇತ್ರದಲ್ಲಿ ವಿಫಲವಾಗಿರೋ ಪಕ್ಷ ಕಾಂಗ್ರೆಸ್. ಭ್ರಷ್ಟಾಚಾರ ಹೆಚ್ಚಲು ಕಾರಣವಾದ ಪಕ್ಷ ಕಾಂಗ್ರೆಸ್. ಅಧಿಕಾರ ದುರುಪಯೋಗ ಮಾಡಿಕೊಂಡವರು ಇವರು. ಮುಂದೆ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದರು.

RELATED ARTICLES
- Advertisment -
Google search engine

Most Popular

Recent Comments