Monday, August 25, 2025
Google search engine
HomeUncategorizedಹೈಕೋರ್ಟ್ ಚಾಟಿ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್..!

ಹೈಕೋರ್ಟ್ ಚಾಟಿ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್..!

ಬೆಂಗಳೂರು : ಬಡವರ ಮನೆಗೆ ಜೆಸಿಬಿ ನುಗ್ಗಿಸಿ ಶ್ರೀಮಂತರ ಅಂಗಳದಲ್ಲಿ ಬರೀ ಗೋಡೆ ಅಥವಾ ಖಾಲಿ ಜಾಗ ಒಡೆದು ಬೃಹನ್ನಾಟಕ ಮಾಡಿದ್ದ ಬಿಬಿಎಂಪಿಗೆ ಈಗ ಹೈಕೋರ್ಟ್ ಚಾಟಿ ಬೀಸಿದೆ.ಅಕ್ಟೋಬರ್-25ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸೂಚನೆ ಕೊಟ್ಟಿದ್ದು. ಒತ್ತುವರಿ ತೆರವು ವಿಳಂಭದ ಬಗ್ಗೆ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ. ಇದ್ರ ಬೆನ್ನಲ್ಲೆ ಈಗ ನವರಾತ್ರಿ ಹಬ್ಬ ಕಳೆದ ಮೇಲೆ ತೆರವು ಕಾರ್ಯಚಾರಣೆ ಗೆ ಮುಹೂರ್ತ ಫಿಕ್ಸ್ ಮಾಡಿದೆ.

ನವರಾತ್ರಿ ಮುಗಿದ ತಕ್ಷಣ ಆಪರೇಷನ್ ಬುಲ್ಡೋಜರ್ ಎಲ್ಲಾ ವಲಯದಲ್ಲಿಯೂ ಶುರು ಮಾಡಲಿದ್ದು, ಕಂದಾಯ ಇಲಾಖೆಯ ಮೂಲ ದಾಖಲೆಗಳ ಪರಿಶೀಲನೆ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಸದ್ಯ 592 ರಾಜಕಾಲುವೆ ಒತ್ತುವರಿ ತೆರವು ಬಾಕಿ ಇದೆ. ಇನ್ನೂ ಕೆಲವರು ಕೋರ್ಟ್ ಸ್ಟೇ ತೆಗೆದುಕೊಂಡಿದ್ದು, ಅದನ್ನು ವೆಕೇಟ್ ಮಾಡಿಕೊಂಡು ಪಾಲಿಕೆ ಆಪರೇಷನ್ ಬುಲ್ಡೋಜರ್ ಶುರು ಮಾಡಲಿದೆ.

ಗುಂಡಿ ಮುಚ್ಚೋದಕ್ಕೆ ತೆರವು ಕಾರ್ಯಾಚರಣೆ ಹೀಗೆ ಎಲ್ಲದಕ್ಕೂ ಹೈಕೋರ್ಟ್ ಚಾಟಿ ಬೀಸಲೇಬೇಕು. ಶಂಖದಿಂದ ಬಂದ್ರೇ ಮಾತ್ರ ತೀರ್ಥ ಅನ್ನೋ ತರ ಹೈಕೋರ್ಟ್ ಮಂಗಳಾರತಿ ಮಾಡಿದ ಮೇಲಾದ್ರೂ BBMP ನೆಟ್ಟಗೆ ತೆರವು ಕಾರ್ಯಾಚರಣೆ ನಡೆಸುತ್ತಾ ಅಂತ ಕಾದು ನೋಡಬೇಕು.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments