Wednesday, September 10, 2025
HomeUncategorizedರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಸಚಿವರು

ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಸಚಿವರು

ಮೈಸೂರು : ದಸರಾ ಪ್ರಯುಕ್ತ ನಗರದಲ್ಲಿಂದು ಆಯೋಜಿಸಿದ್ದ ರೈತ ದಸರಾ ಎಲ್ಲರ ಗಮನ ಸೆಳೆಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ರೈತ ದಸರಾ ಮೆರವಣಿಗೆ ಜೆ.ಕೆ.ಮೈದಾನದಲ್ಲಿ ಕೊನೆಗೊಂಡಿತು. ಎತ್ತಿನಗಾಡಿಯನ್ನು ಓಡಿಸುವ ಮೂಲಕ ರೈತ ದಸರಾ ಮೆರವಣಿಗೆಗೆ ಸಚಿವ ಎಸ್. ಟಿ ಸೋಮಶೇಖರ್ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲ್ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎತ್ತಿನ ಗಾಡಿಗಳನ್ನು ಹಾಗೂ ಎತ್ತುಗಳನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಮೆರವಣಿಗೆಗೆ ಹುಲಿ ವೇಷ, ಡೊಳ್ಳುಕುಣಿತ ಸೇರಿ ವಿವಿಧ ಜಾನಪದ ಕಲಾ ತಂಡಗಳು ಸಾಥ್ ನೀಡಿದವು. ಕೃಷಿಗೆ ಸಂಬಂಧಿಸಿ ಎಲ್ಲಾ ಸಲಕರಣೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ದೇಸೀಯ ತಳಿಗಳ ಮೇಳವನ್ನು ಆಯೋಜಿಸಲಾಗಿತ್ತು. ಇತ್ತ ವಿವಿಧ ತಳಿಯ ಕುರಿಗಳ ಪ್ರದರ್ಶನ ನೋಡುಗರನ್ನು ಮನಸೂರೆಗೊಳಿಸಿತು.

ಇನ್ನು ದಸರಾ ಹಿನ್ನೆಲೆ ಹಲವು ಕಾರ್ಯಕ್ರಮಗಳು ದಿನೇ ದಿನೇ ರಂಗೇರುತ್ತಾ ಇದ್ರೆ, ಇತ್ತ ಆಹಾರ ಮೇಳ ಕೂಡ ಎಲ್ಲರನ್ನೂ ಕೈಬೀಸಿ ಕರೀತಾ ಇದೆ. ಈ ಬಾರಿ ದಸರಾದ ಆಹಾರ ಮೇಳದಲ್ಲಿ ನಾಟಿ ಸ್ಟೈಲ್ ಬಂಬೂ ಬಿರಿಯಾನಿ ಎಲ್ಲರ ಬಾಯಲ್ಲಿ ನೀರೂರಿಸಿತ್ತು . ಪಕ್ಕಾ ನಾಟಿ ಸ್ಟೈಲ್​ನಲ್ಲಿ ತಯಾರಾಗ್ತಾ ಇರುವಂತಹ ಈ ಬಂಬೂ ಬಿರಿಯಾನಿಗೆ ಪ್ರಯಾಣಿಕರು ಮನಸೋತಿದ್ರು. ಅಷ್ಟೇ ಅಲ್ಲ ಶುಗರ್​, ನೆಗಡಿ, ಕೆಮ್ಮು ಇವುಗಳಿಗೆ ರಾಮಬಾಣವಾಗಿ ಕೆಲಸ ಮಾಡುವಂತಹ ಮಾಕಳಿ ಬೇರಿನ ಟೀ ಕೂಡ ಸೆಂಟರ್ ಆಫ್ ಅಟ್ರಾಕ್ಷನ್ ಆಗಿತ್ತು. ಇದರ ಜೊತೆಗೆ ಸಾಂಪ್ರದಾಯಿಕ ಅಡುಗೆಗಳಿಂದ ಹಿಡಿದು ದೇಶವಿದೇಶಿಯ ಎಲ್ಲಾ ತಿನಿಸುಗಳು ಕೂಡ ಆಹಾರ ಮೇಳದಲ್ಲಿ ಲಭ್ಯವಿತ್ತು.

ಇನ್ನು ಯುವ ದಸರಾದಲ್ಲಿ ಸ್ಯಾಂಡಲ್ವುಡ್‌ನ ನಟ ನಟಿಯರು ಭಾಗಿಯಾಗುತ್ತಿದ್ದಾರೆ. ಒಟ್ಟಾರೆ ಅರಮನೆ ನಗರಿಯಲ್ಲಿ ನಾಡಹಬ್ಬದ ವೈಭವ ಕಳೆಗಟ್ಟಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗ್ತಾ ಇದೆ.

ಸ್ವಾತಿ ಫುಲಗಂಟಿ ಪವರ್ ಟಿವಿ ಮೈಸೂರು

RELATED ARTICLES
- Advertisment -
Google search engine

Most Popular

Recent Comments