Tuesday, September 9, 2025
HomeUncategorizedಬಡವರ ಅಕ್ಕಿ ಪಡೆಯುತ್ತಿದ್ದ ಅಧಿಕಾರಿಗಳಿಗೆ ಶಾಕ್

ಬಡವರ ಅಕ್ಕಿ ಪಡೆಯುತ್ತಿದ್ದ ಅಧಿಕಾರಿಗಳಿಗೆ ಶಾಕ್

ಧಾರವಾಡ : 339 ನೌಕರರಿಂದ 36.73 ಲಕ್ಷ ರೂಪಾಯಿ ವಸೂಲಿ ಮಾಡಿ ಸರ್ಕಾರದ ಸಂಬಳ ಪಡೆದುಕೊಂಡು ಜೀವನ ನಡೆಸುತ್ತಿರುವ ಸರ್ಕಾರಿ ನೌಕರರಿಗೆ ಬರ ಸಿಡಿಲು ಬಡಿದಿದೆ. ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಬಡತನ ರೇಖೆಗಿಂತ ಕೆಳಗಿನ ಕುಟುಂಬವೆಂದು ತಪ್ಪು ಮಾಹಿತಿ ನೀಡಿ ಪಡಿತರ ಪಡೆದುಕೊಂಡಿದ್ದವರಿಗೆ ಶಾಕ್ ನೀಡಲಾಗಿದೆ. ಧಾರವಾಡ ಜಿಲ್ಲೆಯ 339 ಜನ ಸರ್ಕಾರಿ ನೌಕರರನ್ನು ಪತ್ತೆ ಮಾಡಿದ ಆಹಾರ ಇಲಾಖೆ ತಪ್ಪಿತಸ್ಥ ವಿರುದ್ಧ ಕ್ರಮ ಕೈಗೊಂಡಿದೆ.

ಸರ್ಕಾರಿ ನೌಕರರಾಗಿದ್ದರೂ ವೇತನ, ಆದಾಯ ಮರೆಮಾಚಿ ಪಡಿತರ ಪಡೆಯುತ್ತಿರುವವರನ್ನು ಪತ್ತೆ ಮಾಡಲು ಅಂದೋಲನ ರೀತಿ ಕಾರ್ಯಾಚರಣೆ ನಡೆಸಲು ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಆದೇಶಿಸಿತ್ತು. ಇಂಥಾ ನೌಕರರು ಎಷ್ಟು ಪಡಿತರ ಪಡೆದಿದ್ದಾರೆ ಎಂಬುದನ್ನು ಲೆಕ್ಕ ಹಾಕಿ ಈವರೆಗೆ 36,73,774 ರೂ. ದಂಡ ಸಂಗ್ರಹಿಸಲಾಗಿದೆ. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅನರ್ಹರ ಮಾಹಿತಿ ಕಲೆ ಹಾಕಿ ನೋಟಿಸ್‌ ನೀಡಿ, ಅವರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ಪರಿವರ್ತಿಸಿಲಾಗಿದೆ.

ಒಟ್ಟಿನಲ್ಲಿ ಸರ್ಕಾರದ ಸಂಬಳ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದ ಸರ್ಕಾರಿ ನೌಕರರಿಗೆ ಇದೀಗ ಆಹಾರ ಇಲಾಖೆ ಶಾಕ್ ನೀಡಿದೆ. ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಬಡವರಿಗೆ ಸಿಗುವಂತೆ ಮಾಡಿದ ಆಹಾರ ಇಲಾಖೆ ಕ್ರಮಕ್ಕೆ ಜನಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಸ್ತಫಾ ಕುನ್ನಿಭಾವಿ ಪವರ್ ಟಿವಿ ಧಾರವಾಡ

RELATED ARTICLES
- Advertisment -
Google search engine

Most Popular

Recent Comments