Monday, August 25, 2025
Google search engine
HomeUncategorizedನಾನು ಸೋಲನ್ನು ಒಪ್ಪಿಕೊಳ್ಳುವುದಿಲ್ಲ : ಬಜರಂಗ್ ಪುನಿಯಾ

ನಾನು ಸೋಲನ್ನು ಒಪ್ಪಿಕೊಳ್ಳುವುದಿಲ್ಲ : ಬಜರಂಗ್ ಪುನಿಯಾ

ಕೊನೆಯವರೆಗೂ ನಾನು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿ ಯುವ ಕ್ರೀಡಾ ಪಟುಗಳಿಗೆ ಬಜರಂಗ್ ಪುನಿಯಾ ಸ್ಪೂರ್ತಿ ತುಂಬಿದ್ದಾರೆ.

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಬಜರಂಗ್ ಪುನಿಯಾ ಸೋಷಿಯಲ್​​​ ಮಿಡಿಯಾದಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 65 ಕೆಜಿ ಕಂಚಿನ ಪದಕವನ್ನು ಗೆದಿದ್ದರು.

ಪಂದ್ಯದಲ್ಲಿ ಪೋರ್ಟೊ ರಿಕೊದ ಸೆಬಾಸ್ಟಿಯನ್ ಅವರನ್ನು ಸೋಲಿಸಿ ಬೆಲ್‌ಗ್ರೇಡ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ನಾಲ್ಕನೇ ಪದಕವನ್ನು ಪಡೆದಿದ್ದರು. ಇದು ಬೆಳ್ಳಿ ಹೊರತುಪಡಿಸಿ ಅವರ ಮೂರನೇ ಕಂಚಿನ ಪದಕವಾಗಿದೆ. ಬಜರಂಗ್ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಲೆಗೆ ಗಾಯ ಮಾಡಿಕೊಂಡಿದ್ದರು ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಜಾನ್ ಡಯಾಕೋಮಿಹಾಲಿಸ್ ವಿರುದ್ಧ ಸೋತಿದ್ದರು.

RELATED ARTICLES
- Advertisment -
Google search engine

Most Popular

Recent Comments