Monday, August 25, 2025
Google search engine
HomeUncategorizedಪ್ರೀತಿಸಿ ಮದುವೆಯಾಗಿದ್ದ ಮಹಿಳೆ ನಿಗೂಢ ಸಾವು..!

ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ನಿಗೂಢ ಸಾವು..!

ವಿಜಯನಗರ : ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ನಿಗೂಢ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ನಡೆದಿದೆ.

ಇನ್ನು, ಲೋ ಬಿಪಿ ಆಗಿದೆ ಅಂತ ಗಂಡನ ಮನೆಯವರು ಆಕೆಯ ಪಾಲಕರಿಗೆ ಫೋನ್ ಮಾಡಿದ್ದು. ಇಲ್ಲಿ ಬಂದು ನೋಡಿದ್ರೆ, ಹೀನಾಬಾನು ಕುತ್ತಿಗೆಯ ಬಳಿ ನೇಣು ಹಾಕಿದ ಹಾಗೆ ಮಾರ್ಕ್ ಇದೆ. ಹೀಗಾಗಿ ಇದು ಗಂಡನ ಮನೆಯವರ ಕೆಲಸ, ಅವರೇ ನೇಣು ಹಾಕಿದ್ದಾರೆ ಅಂತ ಮೃತಳ ಮನೆಯವರು ಆರೋಪ ಮಾಡ್ತಿದ್ದಾರೆ.

ಆದ್ರೆ, ಜಾಫರ್ ಸಾಧಿಕ್ ಮನೆಯವರು ಹೇಳೋದೇ ಬೇರೆ‌. ಹೀನಾಬಾನುಳನ್ನು ಪ್ರೀತಿಸಿದ್ದ ಎನ್ನೋ ಒಂದೇ ಕಾರಣಕ್ಕೆ ಎಲ್ರೂ ಒಪ್ಪಿ, ನಾವೇ ಖರ್ಚಿಟ್ಟು ಮದುವೆ ಮಾಡಿಕೊಂಡಿದ್ವಿ. ನಾವೇ ಏಕೆ ಕೊಲೆ ಮಾಡ್ತೀವಿ ಅಂತಾರೆ. ಅಲ್ದೆ, ಗಂಡ ಹೆಂಡತಿ ನಡುವೆ ಎಲ್ರ ಮನೆಯಲ್ಲಿದ್ದಂತೆ ಸಣ್ಣಪುಟ್ಟ ವಾದಗಳು ನಡೀತಿದ್ವು. ಅದೇನೂ ಹೊಸ ವಿಚಾರ ಅಲ್ಲ. ಆದ್ರೆ, ಮಂಗಳವಾರ ಕಂಪ್ಯೂಟರ್ ವರ್ಕ್ ಮಾಡ್ತಿದ್ದ ಗಂಡನನ್ನು ಹೀನಾಬಾನು ಊಟಕ್ಕೆ ಕರೆದಿದ್ದಾಳೆ. ಆದರೆ ಅವರು ಬಂದಿರಲಿಲ್ಲ.ಈ ಒಂದೇ ಕಾರಣಕ್ಕೆ ಆಕೆ ಈ ರೀತಿ ಸೂಸೈಡ್ ಮಾಡಿಕೊಂಡಿದ್ದಾಳೆ. ನಮಗೂ ಈ ಸಾವಿಗೂ ಸಂಬಂಧವೇ ಇಲ್ಲ ಅಂತಾರೆ ಜಾಫರ್ ಸಾಧಿಕ್ ಕಡೆಯವರು. ಇದು ಕೊಲೆಯೋ ಆತ್ಮಹತ್ಯೆಯೋ ಗೊತ್ತಿಲ್ಲ. ಗಂಡ ಹೆಂಡಿರ ಜಗಳದ ನಡುವೆ ಏನೂ ಅರಿಯದ 6 ತಿಂಗಳ ಕೂಸು ಅನಾಥವಾಗಿದೆ.

ಬಸವರಾಜ್ ಹರನಹಳ್ಳಿ ಪವರ್ ಟಿವಿ,ಬಳ್ಳಾರಿ

RELATED ARTICLES
- Advertisment -
Google search engine

Most Popular

Recent Comments