Wednesday, August 27, 2025
HomeUncategorizedಬಿರಿಯಾನಿ, ಹೆಂಡ, ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರಬೇಕಾ..? : ಕೆ ಎಸ್ ಈಶ್ವರಪ್ಪ

ಬಿರಿಯಾನಿ, ಹೆಂಡ, ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರಬೇಕಾ..? : ಕೆ ಎಸ್ ಈಶ್ವರಪ್ಪ

ಬೆಂಗಳೂರು : ನನಗೆ ಅಸಮಧಾನ ಇದೆ, ಅದಕ್ಕೆ ಸದನಕ್ಕೆ ಹೋಗ್ತಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಮುಚ್ಚು ಮರೆ ಏನು ಇಲ್ಲ, ನನಗೆ ಅಸಮಧಾನ ಇದೆ, ಅದಕ್ಕೆ ಸದನಕ್ಕೆ ಹೋಗ್ತಿಲ್ಲ. ಮಂತ್ರಿ ಆಗಿಯೇ ಸದನಕ್ಕೆ ಹೋಗ್ತೀರಾ ಎಂಬ ಪ್ರಶ್ನೆಗೆ, ಅದರ ಬಗ್ಗೆ ಚರ್ಚೆ ಬೇಡ, ಆದರೆ ನನ್ನ ಮೇಲೆ ಬಂದ ಆಪಾದನೆಯಿಂದ ನನಗೆ ಬೇಸರ ಇದೆ. ಹೀಗಾಗಿ ಆರೋಪ ಮುಕ್ತನಾಗಿ ಸದನಕ್ಕೆ ಹೋಗ್ತೀನಿ ಎಂದರು.

ಇನ್ನು,ಕೆಲಸ ಮಾಡಿದವರಿಗೆ ಮಾತ್ರ ಟಿಕೆಟ್ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಡಿಕ್ಟೇಟರ್‌ಶಿಪ್ ಪ್ರದರ್ಶನ ಮಾಡ್ತಿದ್ದಾರೆ. ಇಷ್ಟು ದಿನ ಕೇಡಿ ಡಿಕೆಶಿ ಆಗಿದ್ರು, ಈಗ ಡಿಕ್ಟೇಟರ್ ಡಿಕೆಶಿ ಆಗಲು ಹೊರಟಿದ್ದಾರೆ. ಡಿಕೆಶಿ ಹೇಳಿಕೆಯನ್ನು ಸ್ವಾಭಿಮಾನ ಕಾಂಗ್ರೆಸಿಗರ್ಯಾರೂ ಒಪ್ಪೋದಿಲ್ಲ. ಕಾಂಗ್ರೆಸ್​​ನವ್ರು ಅಷ್ಟೇ ಅಲ್ಲ, ಯಾವ ಪಕ್ಷದವರೂ ಒಪ್ಪಲ್ಲ. ಡಿಕೆಶಿ ಕಾಂಗ್ರೆಸ್ ಪಕ್ಷವನ್ನು ಕೊಂಡುಕೊಂಡಿದ್ದಾರಾ.? ದೇಶಪಾಂಡೆ ಸಿದ್ದರಾಮೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ರು. ಅದಕ್ಕಾಗಿ ದೇಶಪಾಂಡೆಗೆ ಭಾರತ್ ಜೋಡೋದಲ್ಲಿ ಡಿಕೆಶಿ ಜವಬ್ದಾರಿ ನೀಡಿಲ್ಲ. ಆದರೆ ಇದು ಅವರ ಆಂತರಿಕ ವಿಚಾರ. ಬಟ್ ಡಿಕೆಶಿಯ ನಿರ್ಧಾರ ಸರಿಯಲ್ಲ. ಏನು ಬಿರಿಯಾನಿ, ಹೆಂಡ, ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರಬೇಕಾ..? ಕೆಪಿಸಿಸಿ ಅಧ್ಯಕ್ಷ ಡಿಕೆಶಿಯ ಸಂಸ್ಕೃತಿ ಇದೇ ತಾನೇ ಎಂದು ಜನರನ್ನು ಕರೆತಂದ್ರೆ ಟಿಕೆಟ್ ಎಂಬ ಡಿಕೆಶಿ ಹೇಳಿಕೆಗೆ ಈಶ್ವರಪ್ಪ ಹರಿಹಾಯ್ದರು.

RELATED ARTICLES
- Advertisment -
Google search engine

Most Popular

Recent Comments