Wednesday, September 3, 2025
HomeUncategorizedಸಿಂಗಾಪುರ ಲೇಔಟ್ ನಲ್ಲಿ ಜೆಸಿಬಿ ಘರ್ಜನೆ ಮುಂದುವರಿಕೆ

ಸಿಂಗಾಪುರ ಲೇಔಟ್ ನಲ್ಲಿ ಜೆಸಿಬಿ ಘರ್ಜನೆ ಮುಂದುವರಿಕೆ

ಬೆಂಗಳೂರು : ಮಳೆ ತಂದ ಅನಾಹುತದಿಂದ ಈಗ ಇಡೀ ಬೆಂಗಳೂರಿನಲ್ಲಿ ಜೆಸಿಬಿಗಳ ಘರ್ಜನೆ ಜೋರಾಗಿದೆ.ಯಲಹಂಕ ವಲಯದಲ್ಲಿ ಸರ್ವೆ ನಂ‌4 ರಲ್ಲಿ ಬೆಳಗ್ಗೆ 10 ಗಂಟೆಯಿಂದ ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಲಾಯ್ತು. ಬುಧವಾರ 3 ಕಡೆ ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳು. ಗುರುವಾರ ಮುಂದುವರೆಸಿದ್ದು, ಸಿಂಗಾಪುರ ಲೇಔಟ್ ನಲ್ಲಿ ಜೆಸಿಬಿಗಳು ಘರ್ಜಿಸಿವೆ. ಮೂರನೇ ದಿನವೂ ಯಲಹಂಕ ವಲಯದಲ್ಲಿ ಮುಂದುವರಿದ ಒತ್ತುವರಿ ತೆರವು ಕಾರ್ಯದಲ್ಲಿ ಸಿಂಗಾಪುರದ ಲ್ಯಾಂಡ್ ಮಾರ್ಕ್ ಅಪಾರ್ಟ್ಮೆಂಟ್ ಸೇರಿ ಸುಮಾರು ನಾಲ್ಕೈದು ಕಡೆ ರಾಜಕಾಲುವೆಗಳ ಒತ್ತುವರಿ ತೆರವು ಮಾಡಲಾಗಿದೆ.

ಅದೇ ರೀತಿ ದಾಸರಹಳ್ಳಿ ವಲಯದಲ್ಲೂ ಕೂಡ ಜೆಸಿಬಿಗಳ ಆರ್ಭಟ ಜೋರಾಗಿದ್ದು, ರಾಜಕಾಲುವೆ ಒತ್ತುವರಿ ಮಾಡಿ ಮನೆಗಳ ನಿರ್ಮಾಣದ ಜೊತೆ ಸಾಲು ಸಾಲಾಗಿ ಅಂಗಡಿ ಮುಗ್ಗಟ್ಟುಗಳನ್ನು ನಿರ್ಮಿಸಿದ್ದ ಹತ್ತಾರು ಕಟ್ಟಡಗಳನ್ನು ಬಿಬಿಎಂಪಿ ಅಧಿಕಾರಿಗಳ ನೆಲಕ್ಕುರುಳಿಸಿದ್ದಾರೆ.

ಅದೇ ರೀತಿ ಬೆಂಗಳೂರು ದಕ್ಷಿಣ ವಲಯದಲ್ಲೂ ಕೂಡ ಎರಡು ಕಡೆ ಒತ್ತುವರಿ ತೆರವು ನಡೆದಿದ್ದು.ಶುಕ್ರವಾರವೂ ಒತ್ತುವರಿ ತೆರವು ಕಾರ್ಯ ನಡೆಯಲಿದೆ.

ಒಂದು ಕಡೆ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಮಾಡ್ತಿದ್ರೆ ಮತ್ತೊಂದು ಕಡೆ ಜಿಲ್ಲಾಡಳಿತದಿಂದ ಸರ್ಕಾರಿ ಜಮೀನು ಒತ್ತುವರಿ ತೆರವು ನಡೆಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಕುದುರಗೆರೆ ಗ್ರಾಮದ ಸರ್ವೇ ನಂಬರ್ 55 ರಲ್ಲಿ. ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದ ಸುಮಾರು ಒಂದು ಎಕರೆ ಗೋಮಾಳ ಜಮೀನನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬೆಂಗಳೂರು ಯಲಹಂಕ ತಹಶೀಲ್ದಾರ್ ರಾಮಲಕ್ಷ್ಮಯ್ಯ ಅವರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದೆ.

ಆದ್ರೆ ಒತ್ತುವರಿ ತೆರವು ವಿಚಾರದಲ್ಲಿ ಶ್ರೀಮಂತರು ಹಾಗೂ ಪ್ರಭಾವಿಗಳಿಗೆ ಮೊದಲೇ ನೋಟೀಸ್ ಕೊಡುವುದರ ಜೊತೆ ಮಾರ್ಕಿಂಗ್ ಕಾರ್ಯ ಕೂಡಾ ಮಾಡ್ತಿದ್ದಾರೆ. ಇದ್ರಿಂದ ಪ್ರಭಾವಿಗಳು ಕೋಟ್೯ ಮೊರೆ ಹೋಗಿ ಸ್ಟೇ ತರೋದಕ್ಕೆ ಮುಂದಾಗ್ತಿದ್ದಾರೆ. ಆದ್ರೆ, ಬಡಬಗ್ಗರ ಮನೆಗಳಿಗೆ ಯಾವುದೇ ನೋಟೀಸು ಇಲ್ಲ. ಯಾವುದೇ ಮಾರ್ಕಿಂಗ್ ಕೂಡಾ ಇಲ್ಲದೆ. ನಿರ್ಧಾಕ್ಷಿಣ್ಯವಾಗಿ ಒತ್ತುವರಿ ಮಾಡುತ್ತಿದ್ದು. ಭೂ ಗಳ್ಳರ ರಕ್ಷಣೆಗೆ ಅಧಿಕಾರಿಗಳೇ ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಂತಿದೆ ಅನ್ನೋ ಮಾತುಗಳು ಕೇಳಿ ಬರ್ತಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments