Sunday, August 31, 2025
HomeUncategorizedPSI ಡೀಲ್ Video; ಅರ್ಧಕ್ಕೆ ಸುದ್ದಿಗೋಷ್ಠಿ ಮೊಟಕುಗೊಳಿಸಿ ಪರಸಪ್ಪ ಎಸ್ಕೇಪ್​

PSI ಡೀಲ್ Video; ಅರ್ಧಕ್ಕೆ ಸುದ್ದಿಗೋಷ್ಠಿ ಮೊಟಕುಗೊಳಿಸಿ ಪರಸಪ್ಪ ಎಸ್ಕೇಪ್​

ಬೆಂಗಳೂರು: ಪಿಎಸ್​ಐ ಡೀಲ್​ ಬಗ್ಗೆ ಬಿಜೆಪಿ ಶಾಸಕ ಬಸವರಾಜ ದಡೇಸೂಗುರು ಹಾಗೂ ಪಿಎಸ್​ಐಗೆ ಹಣ ನೀಡಿದ ಪರಸಪ್ಪ ಆಡಿಯೋ ವೈರಲ್ ಬಗ್ಗೆ ಇಂದು ಶಾಸಕರ ಜತೆಗೆ ಮಾತನಾಡಿದ ಪರಸಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಶಾಸಕ ಬಸವರಾಜ ದಡೇಸೂಗುರು ನಮ್ಮ ಕುಲಭಾಂದವರು. ಈಗ ನಾಲ್ಕೈದು ದಿನಗಳಿಂದ ಪಿಎಸ್ ಐ ಹಗರಣದ ಬಗ್ಗೆ ವರದಿಯಾಗಿತ್ತು. ಶಾಸಕರು ಅವರ ಸಂಬಂಧಿಕರಾದ ಆನಂದಪ್ಪ ಇದ್ದರು. ಅವರ ನಮ್ಮ ನಡುವೆ ಜಮೀನಿನ ವ್ಯವಹಾರವಿತ್ತು. ಇದರ ಬಗ್ಗೆ ನಾವೂ ಶಾಸಕರ ಬಳಿ ಹೋಗಿದ್ವಿ, ಆಗ ನಮ್ಮ ನಡುವೆ ಕೂರಿಸಿ ಮಾತುಕತೆ ನಡೆಸಿ ಈ ಬಗ್ಗೆ ಹಣ ನೀಡಿದ್ದೇವೆ. ಆದರೆ, ರಾಜಕೀಯ ಷಡ್ಯಂತ್ರದಿಂದ ನಮ್ಮ ನಡುವೆ ನಡೆದ ವ್ಯವಹಾರದ ಆಡಿಯೋ ವೀಡೀಯೋಗಳನ್ನ ತಿರುಚಿದ್ದಾರೆ. ಇದರಲ್ಲಿ ಶಾಸಕರ ಪಾತ್ರ ಏನೂ ಇಲ್ಲ ಎಂದರು.

ನಿನ್ನೆ ಕಾಂಗ್ರೆಸ್​ ನಮ್ಮ ನಡುವೆ ನಡೆದ ಹಣದ ಬಿಡುಗಡೆ ಮಾಡಿದೆ. ಈ ಬ್ಯಾಗಲ್ಲಿ ನಾವು ಪೇರಳೆ ಹಣ್ಣು ಕೊಟ್ಟಿದ್ವಿ, ಹಣ್ಣು ಇದ್ದ ಬ್ಯಾಗ್ ಕೊಟ್ಟು ಫೋಟೋ ಶಾಸಕರ ಜತೆಗೆ ತೆಗೆಸಿಕೊಂಡಿದ್ದೇವೆ. ಶಾಸಕರ ಆಪ್ತ ಆನಂದಪ್ಪ ಅನ್ನೋರ ಜೊತೆಗೆ ವ್ಯಾಜ್ಯ ಇತ್ತು. ನಾವೆಲ್ಲಾ ಸಂಬಂಧಿಕರು ಸಮಸ್ಗೆ ಬಗೆಹರಿಸಿಕೊಂಡಿದ್ದೇವೆ. 10 ರಿಂದ 12 ಲಕ್ಷ ಮೌಲ್ಯದ ಗದ್ದೆ ವಿಚಾರಕ್ಕೆ ಗಲಾಟೆ ಆಗಿತ್ತು. ಆ ಹಣಕಾಸಿನ ವಿಚಾರ ದಡೇಸಗೂರು ಅವ್ರಿಗೆ ಹೇಳಿದ್ವಿ, ಅವ್ರು ಏರುಧ್ವನಿಯಲ್ಲಿ ಮಾತನಾಡಿದ್ರು, ಆ ವೀಡಿಯೋ, ಆಡಿಯೋಗಳನ್ನ ಈ ತಿರುಚಿದ್ದಾರೆ ಎಂದು ಪರಸಪ್ಪ ತಿಳಿಸಿದರು.

ಇದ್ರಲ್ಲಿ ನಮಗೆ ಮಾನಹಾನಿ ಆಗಿದೆ. ಈ ಬಗ್ಗೆ ಪೊಲೀಸ್ ಕಮಿಶನರ್ ಗೆ ದೂರು ಕೊಡ್ತೀನಿ, ಮಂಪರು ಪರೀಕ್ಷೆ ನಡೆಸಿದ್ರೂ ನಾವು ಹೋಗ್ತೀವಿ ಎಂದು ಪರಸಪ್ಪ ಹೇಳಿದರು.

ಇನ್ನು ಮಂಪರು ಪರೀಕ್ಷೆ ಎಂದ ತಕ್ಷಣ, ಸ್ಪಷ್ಟವಾಗಿ ಏನನ್ನೂ ಹೇಳದ ಪರಸಪ್ಪ ತಡಬಡಾಯಿಸಿದ್ದಾನೆ. ಅರ್ಧಕ್ಕೆ ಸುದ್ದಿಗೋಷ್ಠಿ ಮೊಟಕುಗೊಳಿಸಿ ಎಸ್ಕೇಪ್​ ಆಗಿದ್ದಾನೆ. ಈ ಸುದ್ದಿಗೋಷ್ಠಿಯಲ್ಲಿ ಶಾಸಕ ದಡೇಸಗೂರು ಆಪ್ತ ಭಾಗಿಯಾಗಿದ್ದರು. ದಡೇಸಗೂರು ಆಪ್ತನ ಕಾರಿನಲ್ಲಿ ಪರಸಪ್ಪ ಹೊರಟಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments