Monday, September 1, 2025
HomeUncategorizedIMA ಸಂಸ್ಥೆಯಲ್ಲಿ ಹೂಡಿಕೆದಾರರಿಗೆ ಗುಡ್​ ನ್ಯೂಸ್​

IMA ಸಂಸ್ಥೆಯಲ್ಲಿ ಹೂಡಿಕೆದಾರರಿಗೆ ಗುಡ್​ ನ್ಯೂಸ್​

ಬೆಂಗಳೂರು: ಐಎಂಎ ಸಂಸ್ಥೆಯಲ್ಲಿ ಹೂಡಿಕೆದಾರರಿಗೆ ಸಿಹಿ ಸುದ್ದಿ ಬಂದಿದೆ. ಜಪ್ತಿ ಮಾಡಿರುವ ಐಎಂಎಗೆ ಸೇರಿದ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹರಾಜು ಪ್ರಕ್ರಿಯೆ ನಡೆಸಿ ವಂಚನೆಗಳಗಾದ 53,100 ಠೇವಣಿದಾರರಿಗೆ ಶೀಘ್ರವೇ ಹಿಂತಿರುಗಿಸಲಿದೆ.

ಐಎಂಎನಲ್ಲಿ ಹಣ ಹೂಡಿಕೆ ಮಾಡಿದ ಸಾವಿರಾರು ಠೇವಣಿದಾರರು ಪರಿಹಾರಕ್ಕಾಗಿ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ರು. ಐಎಂಎ ಸಂಸ್ಥೆಯಲ್ಲಿ ಹೂಡಿಕೆದಾರರಿಗೆ ಸಿಹಿ ಸುದ್ದಿ ಬಂದಿದೆ. ಜಪ್ತಿ ಮಾಡಿರುವ ಐಎಂಎಗೆ ಸೇರಿದ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹರಾಜು ಪ್ರಕ್ರಿಯೆ ನಡೆಸಿ ವಂಚನೆಗಳಗಾದ 53,100 ಠೇವಣಿದಾರರಿಗೆ ಶೀಘ್ರವೇ ಹಿಂತಿರುಗಿಸಲಿದೆ.

ಚಿನ್ನ ಅಡವಿಟ್ಟಿದ್ದ ಗ್ರಾಹಕರಿಗೂ ಪೂರ್ಣ ಪ್ರಮಾಣದಲ್ಲಿ ಚಿನ್ನಾಭರಣ ವಾಪಸ್ಸಾಗಿದೆ. ಆದರೆ, 1 ಲಕ್ಷ ರೂಪಾಯಿನಿಂದ 60 ಲಕ್ಷ ರೂಪಾಯಿ ವರೆಗೂ ಹಣ ಹೂಡಿಕೆ ಮಾಡಿರುವ 53, 100 ಠೇವಣಿದಾರರಿಗೆ ಜಪ್ತಿ ಮಾಡಿರುವ ಐಎಂಎ ಆಸ್ತಿಗಳ ಹರಾಜು ಪ್ರಕ್ರಿಯೆ ಮುಗಿದ ಬಳಿಕ ಹಂತ ಹಂತವಾಗಿ ದುಡ್ಡು ಹಿಂತಿರುಗಿಸಲಾಗುವುದು. ಶೀಘ್ರದಲ್ಲೇ ಠೇವಣಿದಾರರಿಗೆ ಹೂಡಿಕೆ ಮರಳಲಿದೆ.

ಈ ಹಿಂದೆ ಪವರ್ ಟಿವಿ ಐಎಂಎ ಹಗರಣ ಬಯಲಿಗೆಳೆದಿತ್ತು. ನೊಂದ ಸಾವಿರಾರು ಠೇವಣಿದಾರರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಿತ್ತು. ಇದೀಗ ಹಂತ ಹಂತವಾಗಿ ದುಡ್ಡು ಠೇವಣಿದಾರರ ಕೈ ಸೇರುತ್ತಿದೆ.

RELATED ARTICLES
- Advertisment -
Google search engine

Most Popular

Recent Comments