ಬೆಂಗಳೂರು: ನಾಳೆ ನಟ, ನಿರೂಪಕ ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ರಮೇಶ್ ಅರವಿಂದ್ ಅವರು ಆಫರ್ ನೀಡಿದ್ದು, ಅಭಿಮಾನಿಗಳು ನೇರವಾಗಿ ರಮೇಶ್ ಅರವಿಂದ್ ಅವರಿಗೆ ಕಾಲ್ ಮಾಡಿ ವಿಶ್ ಮಾಡಬಹುದಾಗಿದೆ.
ಈ ವೇಳೆ ರಮೇಶ್ ಅರವಿಂದ್ ಅವರಿಗೆ ಅಭಿಮಾನಿಗಳು ಏನಾದರೂ ಪ್ರಶ್ನೆಗಳನ್ನೂ ಕೇಳಬಹುದಾಗಿದೆ. ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು.
ಇನ್ನು ಮೆಸೇಜ್ ಮಾಡಿದ ಪ್ರತಿ ಅಭಿಮಾನಿಗಳಿಗೂ ಸ್ವತಃ ರಮೇಶ್ ಅರವಿಂದ್ ಅವರೇ ಪ್ರತಿಕ್ರಿಯೆ ನೀಡಲಿದ್ದಾರೆ. ಅಭಿಮಾನಿಗಳು 8951599009 ಮತ್ತು 8951699009 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಸಂದೇಶ ಕಳಿಸುವ ಮೂಲಕ ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಶುಭ ಕೋರಬಹದು.
— Ramesh Aravind (@Ramesh_aravind) September 9, 2022


