ಸಂವಿಧಾನ ಉಳಿಸುವ ಕೆಲಸ ಮಾಡಿ ಎಂದು ಕೈ ಮುಗಿದ ಸಿದ್ದರಾಮಯ್ಯ

ಬೆಂಗಳೂರು: ಕೈ ಮುಗಿದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾರತದ ಸಂವಿಧಾನ ಉಳಿಸುವ ಕೆಲಸ ಮಾಡಿ ಎಂದು ಹೇಳಿದರು.

ಇಂದು ರಾಜ್ಯ ಸರ್ಕಾರಿ ಎಸ್​ಸಿ-ಎಸ್​ಟಿ ನೌಕರರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಬಂದಿರೋದೇ ಸಂವಿಧಾನ ಬದಲಾವಣೆ ಮಾಡೋದಕ್ಕೆ ಎಂದು ಆಗ ಕೇಂದ್ರ ಮಂತ್ರಿಯಾಗಿದ್ದ ಅವರು ಹೇಳುತ್ತಾರೆ. ಅನಂತ್ ಕುಮಾರ್ ಹೆಗಡೆ ಈ ರೀತಿ ಹೇಳಿದ್ದರು. ಸಂವಿಧಾನ ಸುಟ್ಟು ಹಾಕ್ತೀವಿ ಇನ್ನು ಕೆಲವರು ಹೇಳ್ತಾರೆ, ಸಂವಿಧಾನದ ಮೇಲೆ ಗೌರವ ಇರುವವರು ಯಾರಾದರೂ ಈ ರೀತಿ ಮಾತನಾಡುತ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಂವಿಧಾನ ಆಶಯಗಳ ಅನುಗುಣವಾಗಿ ಸರ್ಕಾರ ನಡೆಯಬೇಕು. ಸಂವಿಧಾನದ ಮೇಲೆ ಗೌರವ ಇಲ್ದೇ ಇರೋರ ಜೊತೆ ಜನುರ ಇರಬೇಕವೇ, ಸಂವಿಧಾನ ವಿರುದ್ಧವಾಗಿರುವರ ಜತೆಗೆ ಕೆಲವರು ಹೋಗಿದ್ದಾರೆ, ಇದನ್ನ ನಾನು ಹೇಳಿದ್ರೆ ನನ್ನ ಮೈಮೇಲೆನೇ ಬರ್ತಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES