Friday, August 29, 2025
HomeUncategorizedವಿಶ್ವವಿದ್ಯಾಲಯದ ಕುಲಪತಿ, ಉಪಕುಲಪತಿ ನೇಮಕಾತಿಯಲ್ಲಿ ಕೋಟಿ, ಕೋಟಿ ಡೀಲ್: ಯತ್ನಾಳ್ ಬಾಂಬ್​​

ವಿಶ್ವವಿದ್ಯಾಲಯದ ಕುಲಪತಿ, ಉಪಕುಲಪತಿ ನೇಮಕಾತಿಯಲ್ಲಿ ಕೋಟಿ, ಕೋಟಿ ಡೀಲ್: ಯತ್ನಾಳ್ ಬಾಂಬ್​​

ವಿಜಯಪುರ: ರಾಜ್ಯದ ವಿಶ್ವ ವಿದ್ಯಾಲಯದಲ್ಲಿ ಕುಲಪತಿ, ಉಪಕುಲಪತಿ ನೇಮಕವಾಗಲು ನಾಲ್ಕೈದು ಕೋಟಿ ನೀಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ.

ಜಿಲ್ಲೆಗೊಂದು ವಿಶ್ವವಿದ್ಯಾಲಯದಲ್ಲಿ ಅವ್ಯವಹಾರದ ಬಗ್ಗೆ ಮಾತನಾಡಿದ ಯತ್ನಾಳ್, ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಒಂದು ವಿವಿ ಇದೆ. ಇನ್ನು ಎಷ್ಟು ವಿಶ್ವವಿದ್ಯಾಲಯ ಮಾಡುವುದು. ನನ್ನ ಅಭಿಪ್ರಾಯದಲ್ಲಿ ಜಿಲ್ಲೆಗೊಂದು ವಿವಿ ಮಾಡಬಾರದು. ಎರಡೆರಡು ಸಾವಿರ ಕೋಟಿ ವಿವಿ ಗಳಿಗೆ ಹಾಕುತ್ತೀರಿ ಅದು ವ್ಯರ್ಥ ಎಂದರು.

ನಮ್ಮ ಸರ್ಕಾರವಿದ್ರೆ ಅವರು ಹೇಳಿದ್ದಕ್ಕೆಲ್ಲ ಹೌದಪ್ಪಗಳ ಹೌದಪ್ಪ ಹೂ ಎನ್ನಬೇಕೆಂದೆನಿಲ್ಲ. ಹೊಸ ವಿಶ್ವವಿದ್ಯಾಲಯ ಹೆಸರಿನಲ್ಲಿ 200, 300 ಎಕರೆ ಜಮೀನು ಹೊಡೆದುಕೊಂಡು ಕುಳಿತು ಬಿಡ್ತಾರೆ. ರಾಣಿ ಚೆನ್ನಮ್ಮ ವಿವಿ ಇದೆ, ಅಕ್ಕಮಹಾದೇವಿ ವಿವಿ ಇದೆ. ವಿದ್ಯಾರ್ಥಿಗಳ ಸಂಖ್ಯೆ, ಸಾಮರ್ಥ್ಯದ ಮೇಲೆ ಮುಂದೆ ಬೇಕಾದ್ರೆ ಆಗಲಿ ಎಂದು ಯತ್ನಾಳ್ ನುಡಿದರು.

ಹೊಸ ಶಿಕ್ಷಣ ನೀತಿ ಪ್ರಕಾರ ಏನು ಆಗಬೇಕು ಆಗಲಿ, ಅದಕ್ಕೆ ಅನುದಾನ ಇರುತ್ತದೆ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏನು ಅವ್ಯವಹಾರ ಆಗುತ್ತದೆ ಎಂಬುದು ನನಗೆ ಗೊತ್ತಿದೆ. ನಾನು ಅಸುರನ್ಸ ಕಮೀಟಿ ಚೇರ್ಮನ್ ಇದ್ದಾಗ ಎಲ್ಲಾ ವಿವಿಯ ನೋಡಿದ್ದೇನೆ.

ಮಂಗಳೂರು ವಿವಿ, ಮೈಸೂರು ವಿವಿ, ಬೀದರ್ ವಿವಿ, ಯುಟಿಯುಯಲ್ಲಿ ಅವ್ಯವಹಾರ ನಡೆದಿದ್ದು, ವೈಸ್ ಚಾನ್ಸಲರ್ ಆಗಬೇಕಾದ್ರೆ ನಾಲ್ಕೈದು ಕೋಟಿ ಕೊಟ್ಟೆ ಬಂದಿರುತ್ತಾರೆ. ಬಂದ್ಮೇಲೆ ಅವರು ಅದನ್ನು ತೆಗೆದುಕೊಳ್ಳಬೇಕಲ್ಲ. ಶಿಕ್ಷಣ ಏನು ಕೊಡ್ತಾರೆ. ವಿಸಿ ನೇಮಕದಲ್ಲಿ ಪಾರದರ್ಶಕ ಆಗಬೇಕು. ಒಳ್ಳೆ, ಪ್ರಾಮಾಣಿಕ ವಿಸಿ ನೇಮಕ ಆಗಬೇಕು, ಈಗ ಇದೊಂದು ಉದ್ಯೋಗ ಆಗಿದೆ ಎಂದ ಯತ್ನಾಳ್ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments