Monday, August 25, 2025
Google search engine
HomeUncategorizedಪುಷ್ಪರಾಜ್​​ ಸ್ಟೈಲ್​ನಲ್ಲಿ ಗಣಪ ತಗ್ಗೆದೆಲೇ.. ಭಕ್ತರ  ಟೀಕೆ ಟಿಪ್ಪಣಿ

ಪುಷ್ಪರಾಜ್​​ ಸ್ಟೈಲ್​ನಲ್ಲಿ ಗಣಪ ತಗ್ಗೆದೆಲೇ.. ಭಕ್ತರ  ಟೀಕೆ ಟಿಪ್ಪಣಿ

ಇಡೀ ಭಾರತವೇ ಗಣೇಶ ಹಬ್ಬದ ಸಡಗರ ಸಂಭ್ರಮದಲ್ಲಿ  ಮುಳುಗಿದೆ. ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದ ಗಣೇಶನ ಮೂರ್ತಿಗಳು ಎಲ್ಲರ ಮನೆಯಲ್ಲಿ ಕಂಗೊಳಿಸ್ತಿವೆ. ಮಾರುಕಟ್ಟೆಯಲ್ಲಿ ಅಪ್ಪು ಗಣಪ , ಅಲ್ಲು ಗಣಪನ ಮೂರ್ತಿಗಳು ಈ ಬಾರಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಈ ಬಾರಿ ಪುಷ್ಪನ ತಗ್ಗೆದೆಲೇ ಗಣಪ ಸಖತ್​ ಹೈಪ್ ಕ್ರಿಯೇಟ್​ ಮಾಡಿದ್ರೂ ಕೂಡ ಕೆಲವು ಟೀಕೆಗಳಿಂದ್ಲೂ ಹೆಸ್ರು ಮಾಡಿದೆ. ಹೇಗಿದೆ ಪುಷ್ಪರಾಜ್​ ಗಣೇಶ ಗೊತ್ತಾ..? ಈ ಸ್ಟೋರಿ ಓದಿ.

  • ಅಲ್ಲು ಸ್ಟೈಲ್​ಗೆ ಸಖತ್​​ ಡಿಮ್ಯಾಂಡ್​​​.. ಪುನೀತ್​​ ಡೈಮಂಡ್​​..!

ಭಾರತೀಯ ಸಂಸ್ಕೃತಿಯಲ್ಲಿ ವಿಭಿನ್ನ ಆಚರಣೆಯ ಹಬ್ಬಗಳಲ್ಲಿ ಗಣೇಶನ ಹಬ್ಬವೂ ಹೌದು. ಮನೆ ಮನೆಗಳಲ್ಲೂ ಗಣೇಶನನ್ನು ಕೂರಿಸಿ ನಂತ್ರ ಆತನನ್ನು ಭಕ್ತಿ ಭಾವಗಳಿಂದ ವಿಸರ್ಜನೆ ಮಾಡುವ ವಿಶಿಷ್ಟ ಸಂಪ್ರದಾಯ ನಮ್ಮದು. ಆದ್ರೆ, ಕೇವಲ ಮಾರುಕಟ್ಟೆಯಲ್ಲಿ ಗಣೇಶನ ಆಕೃತಿಯ ಮೂರ್ತಿಗಳು ಮಾತ್ರ ಸದ್ದು ಮಾಡೋದಿಲ್ಲ. ಆತನನ್ನು ವಿಭಿನ್ನ ಭಂಗಿಯಲ್ಲಿ, ವಿಭಿನ್ನ ಶೈಲಿಯಲ್ಲಿ ರೂಪಿಸಲಾದ ಗಣಪನ ಮೂರ್ತಿಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ಈ ಸಾಲಿನಲ್ಲಿ ಪುಷ್ಪರಾಜ್​ ಗಣಪ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕರ್ನಾಟಕದಲ್ಲಿ ಈ ಬಾರಿಯ ಗಣೇಶ ಚತುರ್ಥಿಯಲ್ಲಿ ಅಪ್ಪು ಟ್ರೆಂಡಿಂಗ್​ನಲ್ಲಿದ್ರು. ಎಲ್ಲಾ ಕಡೆ ಅಪ್ಪು ಗಲ್ಲ ಹಿಡಿದ ಗಣಪ, ಮೋದಕ ತಿನ್ನಿಸ್ತಾ ಇರುವ ಗಣಪ, ಕೋಟ್ಯಾಧಿಪತಿ ಗಣಪ ಸದ್ದು ಮಾಡಿದ್ವು. ಈ ನಡುವೆ ಸಿಕ್ಕಾಪಟ್ಟೆ ಹೈಪ್​ ಕ್ರಿಯೇಟ್​ ಮಾಡಿದ್ದು, ತಗ್ಗೆದೆಲೇ ಗಣಪ. ಯೆಸ್​​.. ಅಲ್ಲು ಅರ್ಜುನ್​ ಅಭಿನಯದ ತಗ್ಗೆದೆಲೆ ಸ್ಟೈಲ್​ನಲ್ಲಿ ಗಣೇಶನಿಗೆ ರೂಪ ಕೊಡಲಾಗಿತ್ತು. ಇದಕ್ಕೆ ಕೆಲವರು ಭಕ್ತಿಯನ್ನು ಈ ರೀತಿ ವ್ಯಕ್ತಪಡಿಸುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

  • ಕುರ್ತಾ, ಪೈಜಾಮ್​​ ಧರಿಸಿ ಗಡ್ಡ ಸವರುತ್ತಿರೋ ಗಣೇಶ
  • ವಿನಾಯಕನ​​ ಆರ್ ​ಆರ್​ ಆರ್​ ಸ್ಟೈಲ್​​ಗೆ ಭಕ್ತರು ಫಿದಾ

ಸಿನಿಪ್ರಿಯರಿಗೆ ಮಾರುಕಟ್ಟೆಯಲ್ಲಿ ಇಷ್ಠವಾಗೋ ಸಾಕಷ್ಟು ಮೂರ್ತಿಗಳು ಈ ಬಾರಿ ಸದ್ದು ಮಾಡಿವೆ. ಅಪ್ಪು, ಅಲ್ಲು ಅರ್ಜುನ್​, ರಾಮ್​ಚರಣ್​​, ಬಾಹುಬಲಿ ಪ್ರಭಾಸ್​ ಹೀಗೆ ಸೂಪರ್​ ಸ್ಟಾರ್​​ ಸ್ಟೈಲ್​ನಲ್ಲಿ ಗಣೇಶ ವಿಭಿನ್ನ ಅವತಾರದಲ್ಲಿ ಮಿಂಚಿದ್ದಾನೆ. ಇದ್ರಲ್ಲಿ ಕುರ್ತಾ, ಪೈಜಾಮ್​ ಧರಿಸಿ ಅಲ್ಲು ಅರ್ಜುನ್​ ಸ್ಟೈಲ್​ನಲ್ಲಿ ಗಡ್ಡ ಸವರುತ್ತಿರೋ ಗಣೇಶ ಎಲ್ಲರ ಗಮನ ಸೆಳೆದಿದ್ದಾನೆ. ಇದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನೂ ರಾಜಮೌಳಿ ನಿರ್ದೇಶನದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ ಸೂಪರ್ ಹಿಟ್ ಸಿನಿಮಾ ಆರ್​ಆರ್​ಆರ್​. ಈ ಸಿನಿಮಾದಲ್ಲಿ ರಾಮ್​ಚರಣ್​ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ರಾಮ್​ಚರಣ್​​ ಅಭಿನಯವೂ ಮನೋಘ್ನವಾಗಿ ಮೂಡಿ ಬಂದಿತ್ತು. ಇದೀಗ ಅದೇ ಸ್ಟೈಲ್​ನಲ್ಲಿ ಗಣೇಶನ ಮೂರ್ತಿ ಸಿದ್ಧವಾಗಿದ್ದು, ರಾಮ್​ಚರಣ್​ ರೀತಿ ಓಡಿ ಬರ್ತಿರೋ ಭಂಗಿಯಲ್ಲಿ ನಿಲ್ಲಿಸಲಾಗಿದೆ. ಹೀಗೆ ಅತ್ಯಾಕರ್ಷಕ ಗಣೇಶನ ಮೂರ್ತಿಗಳು ಈ ಬಾರಿ ಎಲ್ಲರ ಕಣ್ಮನ ಸೂರೆ ಮಾಡಿವೆ.

ಕೆಲವರು ಕಲಾವಿದರ ಪ್ರತಿಭೆಯನ್ನು ಹೊಗಳಿದ್ದಾರೆ. ಇನ್ನು ಕೆಲವರು  ಇಷ್ಟಪಡದೇ ನೆಗೆಟಿವ್‌ ಕಮೆಂಟ್‌ ಮಾಡಿದ್ದಾರೆ.ದೇವ ಗಣಪನನ್ನು ನಾವು ದೇವರಂತೆಯೇ ಭಾವಿಸಬೇಕು. ನೀವು ಅಲ್ಲು ಅರ್ಜುನ್‌ ಅಭಿಮಾನಿಗಳಾಗಿದ್ದರೆ, ದಯವಿಟ್ಟು ಅಭಿಮಾನವನ್ನು ಹಾಗೆಯೇ ಇಟ್ಟುಕೊಳ್ಳಿ. ಈ ರೀತಿಯ ಕೆಲಸಗಳನ್ನು ಮಾಡಬೇಡಿ ನಿಂದಿಸಿದ್ದಾರೆ. ಏನೇ ಆಗಲಿ ಗಣೇಶ ಮಾತ್ರ ಎಲ್ಲಾ ರಂಗಗಳಲ್ಲೂ ಮಿಂಚ್ತಾ, ದೇವರಾಗಿಯೇ ಉಳಿದಿದ್ದಾನೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments