Thursday, September 11, 2025
HomeUncategorizedಒಂದೇ ರಾತ್ರಿಯ ಮಳೆಗೆ ರೈತರ ಬೆಳೆಗಳು ಹಾಳು

ಒಂದೇ ರಾತ್ರಿಯ ಮಳೆಗೆ ರೈತರ ಬೆಳೆಗಳು ಹಾಳು

ಚಿಕ್ಕಬಳ್ಳಾಪುರ : ಬರದನಾಡು ಚಿಕ್ಕಬಳ್ಳಾಪುರ ಈಗ ಆಕ್ಷರಶಃ ಮಲೆನಾಡು. ಧಾರಾಕಾರ ಮಳೆಗೆ ವರ್ಷಕ್ಕೆ ಒಂದಲ್ಲ ಎರಡಲ್ಲ ಮೂರ್ನಾಲ್ಕು ಬಾರಿ ಕೆರೆ ಕುಂಟೆಗಳು ತುಂಬಿ ತುಳುಕುತ್ತಿವೆ. ಭಾರೀ ಮಳೆಗೆ ಗುಡಿಬಂಡೆಯ ಅಮಾನಿಭೈರಸಾಗರ ಕೆರೆ ಮೈದುಂಬಿ ಕೋಡಿ ಹರಿಯುತ್ತಿದೆ.ಕೆರೆ ನೀರು ರೈತರ ಜಮೀನುಗಳಿಗೆ ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಗುಡಿಬಂಡೆ ರೈತ ಶಂಕರ್ ಎಂಬುವವರು ಉಪ್ಪಾರಹಳ್ಳಿ ಬಳಿ ಒಂದು ಎಕರೆಯಲ್ಲಿ ಫಾಲಿ ಹೌಸ್‌ನಲ್ಲಿ ಕ್ಯಾಪ್ಸಿಕಂ ಬೆಳೆದಿದ್ದು, ಇಲ್ಲಿನ ಬೆಳೆ ಮಳೆಗೆ ಬಳಿಯಾಗಿದೆ. ಕ್ಯಾಪ್ಸಿಕಂ ಗಿಡಗಳೆಲ್ಲವೂ ನಿಶ್ಯಕ್ತಿಯಾಗಿ ನಲುಗಿ ಹೋಗುತ್ತಿದ್ದು, ಕಾಯಿಗಳೆಲ್ಲವೂ ಒಣಗಿ ಹೋಗುತ್ತಿವೆ. ಅತಿಯಾದ ತೇವಾಂಶದಿಂದ ಬೇರು ಸಮೇತ ಕ್ಯಾಪ್ಸಿಕಂ ಗಿಡಗಳು ಕೊಳೆತು ಹೋಗುತ್ತಿದ್ದು, ಇಡೀ ಕ್ಯಾಪ್ಸಿಕಂ ತೋಟ ಹಾಳಾಗುವ ಭೀತಿ ರೈತನನ್ನು ಕಾಡುತ್ತಿದೆ.

ಇನ್ನೂ ಹೂ, ಹಣ್ಣು ತರಕಾರಿ ಬೆಳೆಯೋದ್ರಲ್ಲಿ ಖ್ಯಾತಿ ಪಡೆದಿರೋ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗ ಅತಿಯಾದ ಮಳೆಯ ಕಾರಣ ರೈತರು ಬೆಳೆದಿರೋ ಕ್ಯಾಪ್ಸಿಕಂ, ಮೆಣಸಿನಕಾಯಿ, ಕ್ಯಾರೆಟ್, ಬೀಟ್ ರೂಟ್, ಹೂದೋಟಗಳು ಸೇರಿ ತರಕಾರಿಗಳೆಲ್ಲವೂ ಮಳೆಗೆ ಬಲಿಯಾಗುತ್ತಿವೆ.

ಒಟ್ನಲ್ಲಿ ಮಳೆ ಬಂದರೂ ಕಷ್ಟ ಬಾರದಿದ್ರೂ ಕಷ್ಟ ಅನ್ನೋ ಹಾಗೆ ಅತಿಯಾದ ಮಳೆಯಿಂದಾಗಿ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗುವಂತಾಗಿದ್ದು, ಬೆಳೆದ ಬೆಳೆ ಕಣ್ಣೆದುರೇ ಕಮರಿ ಹೋಗ್ತಿರೋದು ರೈತರಿಗೆ ಕಣ್ಣೀರು ತರಿಸುತ್ತಿದೆ. ಸಂಕಷ್ಟಕ್ಕೀಡಾಗಿರುವ ರೈತರಿಗೆ ನ್ಯಾಯ ಕೊಡಿಸಬೇಕಿದೆ.

ಮಲ್ಲಪ್ಪ. ಎಂ.ಶ್ರೀರಾಮ್. ಪವರ್ ಟಿವಿ. ಚಿಕ್ಕಬಳ್ಳಾಪುರ

RELATED ARTICLES
- Advertisment -
Google search engine

Most Popular

Recent Comments