Friday, August 29, 2025
HomeUncategorizedಮೊಟ್ಟೆ ಮಹಾಯುದ್ಧಕ್ಕೆ ಯುಟರ್ನ್ ಕೊಟ್ಟ ಬಂಧಿತ ಆರೋಪಿ

ಮೊಟ್ಟೆ ಮಹಾಯುದ್ಧಕ್ಕೆ ಯುಟರ್ನ್ ಕೊಟ್ಟ ಬಂಧಿತ ಆರೋಪಿ

ಬೆಂಗಳೂರು : ಅಬ್ಬಬ್ಬಾ. ಇಂತಹ ಹೈ ಡ್ರಾಮಾಗಳನ್ನು ರಾಜ್ಯದ ಜನರು ಇನ್ನೆಷ್ಟು ನೋಡ್ಬೇಕೋ ಏನೋ ಗೊತ್ತಿಲ್ಲ. ರಾಜಕಾರಣಿಗಳು ಸುಳ್ಳು ಹೇಳ್ತಾರೆ ಅಂದ್ಕೊಂಡಿದ್ದ ಜನಕ್ಕೆ, ಇದೀಗ, ಕಾರ್ಯಕರ್ತರನ್ನು ಸುಳ್ಳಿನ ದಾಳವಾಗಿ ಮಾಡಿಕೊಂಡು ಬಿಟ್ರಲ್ಲಾ ಅಂತ ಬೇಸರವೂ ಆಗಿರಬಹುದು. ಹೌದು, ಈ ಒಂದು ಮೊಟ್ಟೆಯ ಕಥೆ ವಿಚಾರದಲ್ಲಿ ಮೆಗಾ ಟ್ವಿಸ್ಟ್‌ ಸಿಕ್ಕಿದೆ.

ಈ ಹಿಂದೆ ಕೊಡಗಿನ ನೆರೆಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಆರೋಪಿ ಸಂಪತ್ ಸಿದ್ದು ಕಾರಿನತ್ತ ಮೊಟ್ಟೆ ತೂರಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಅಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿದ್ದ ಕಾಂಗ್ರೆಸ್ ಪ್ರತಿಭಟನೆಯ ಎಚ್ಚರಿಕೆ ನೀಡಿತ್ತು. ಸಿದ್ದರಾಮಯ್ಯ ಕೂಡ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಭದ್ರತೆ ಹೆಚ್ಚಿಸುವಂತೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ತಿರುವು ದೊರೆತಿದೆ. ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ನಾನೇ, ನಾನು ಬಿಜೆಪಿಯಲ್ಲ, ಕಾಂಗ್ರೆಸ್ ಕಾರ್ಯಕರ್ತ ಎಂದು ಬಂಧಿತ ಆರೋಪಿ ಸಂಪತ್ ಹೇಳಿದ್ದಾರೆ. ‘ನಾನು ಕಾಂಗ್ರೆಸ್ ಕಾರ್ಯಕರ್ತನೆ, ಕಾಂಗ್ರೆಸ್ನಲ್ಲಿ ಹಿಂದೂಗಳಿಲ್ವಾ? ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ವಾ? ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು. ಹೀಗಾಗಿ ಮೊಟ್ಟೆ ಹೊಡೆದಿದ್ದೆ ಎಂದು ಸಂಪತ್ ಹೇಳಿದ್ದಾನೆ.

ನಾನು ಬಿಜೆಪಿ ಕಾರ್ಯಕರ್ತ ಅಲ್ಲ. ಕಾಂಗ್ರೆಸ್‌ ಎಂದಿದ್ದಕ್ಕೆ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ‘ಆಪರೇಷನ್ ಕಮಲ’ ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ ‘ಆಪರೇಷನ್ ಕಮಲ’ ಕೂಡಾ ಬಿಜೆಪಿ ನಡೆಸುತ್ತಿದೆ. ಇದು ಮಡಿಕೇರಿಯ ಮೊಟ್ಟೆ ಎಸೆತ ವಿಚಾರದಲ್ಲೂ ಸಾಬೀತಾಗಿದೆ. ಬಿಜೆಪಿಯ ಇಂತಹ ನಾಟಕಗಳೆಲ್ಲಾ ಹಳತಾಗಿವೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ ಏಕೆ ಅಂತ ಸಿದ್ದರಾಮಯ್ಯ ಫುಲ್‌ ಗರಂ ಆಗಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments